-->
Fake Social Activist arrested | ಸಾಮಾಜಿಕ ಮುಖಂಡನ ಸೋಗು, ದರೋಡೆ ಕೃತ್ಯಕ್ಕೆ ನೆರವು: ದರೋಡೆಕೋರನ ಮುಖವಾಡ ಕಳಚಿದ ಖಾಕಿ ಪಡೆ

Fake Social Activist arrested | ಸಾಮಾಜಿಕ ಮುಖಂಡನ ಸೋಗು, ದರೋಡೆ ಕೃತ್ಯಕ್ಕೆ ನೆರವು: ದರೋಡೆಕೋರನ ಮುಖವಾಡ ಕಳಚಿದ ಖಾಕಿ ಪಡೆ




ಪುತ್ತೂರಿನಲ್ಲಿ ಸಾಮಾಜಿಕ ಕಾರ್ಯಕರ್ತ ಎಂಬ ಸೋಗು ಹಾಕಿಕೊಂಡು ದಕ್ಷಿಣ ಕನ್ನಡದ ವಿವಿಧೆಡೆ ಸೇರಿದಂತೆ ರಾಜ್ಯದ ಹಲವೆಡೆ ದರೋಡೆ ಕೃತ್ಯಗಳಿಗೆ ಸಾಥ್ ನೀಡಿದ ಪಾಪಿಯೊಬ್ಬನನ್ನು ಮಂಗಳೂರು ಖಾಕಿ ಪಡೆ ಬಂಧಿಸಿದೆ.


ಹೌದು, ಈ ಮಹಾ ದರೋಡೆಕೋರನೇ ಪುತ್ತೂರು ಕೆದಂಬಾಡಿ ನಿವಾಸಿ ಅಬ್ದುಲ್ ಬಶೀರ್. ಸೂಫಿ ಮುಸ್ಲಿಯಾರ್ ಎಂಬವರ ಪುತ್ರನಾಗಿರುವ ಈತ ಕಳೆದ 2018ರಲ್ಲಿ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ
ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ.


ಮಂಗಳೂರು ನಗರದ ಮೂಡಬಿದಿರೆ, ಮೂಲ್ಕಿ, ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ವಾಹನ ಸವಾರರನ್ನು ಅಡ್ಡಗಟ್ಟಿ ದ್ವಿಚಕ್ರ ವಾಹನಗಳು, ಹಣ ಮತ್ತು ಚಿನ್ನಾಭರಣಗಳನ್ನು ಸುಲಿಗೆ ಮಾಡಿ ದೋಚಿ ಪರಾರಿಯಾಗಿದ್ದ ಆರೋಪಿಗಳನ್ನು ಮೂಡಬಿದಿರೆ ಪೊಲೀಸರು ಬಂಧಿಸಿದ್ದರು.


ಮಂಗಳೂರು ನಗರದ 7 ದರೋಡೆ ಪ್ರಕರಣಗಳು, ದಕ್ಷಿಣ ಕನ್ನಡ ಜಿಲ್ಲೆಯ ಎಂಟು ಪ್ರಕರಣಗಳು, ಹಾಸನ ಜಿಲ್ಲೆಯ ಎರಡು ಪ್ರಕರಣಗಳು, ಚಿಕ್ಕಮಗಳೂರು ಜಿಲ್ಲೆಯ ಎರಡು ಪ್ರಕರಣಗಳು, ಕೊಡಗು ಜಿಲ್ಲೆಯ ಐದು ಪ್ರಕರಣಗಳು, ಉಡುಪಿಯ ಎರಡು ಪ್ರಕರಣಗಳು, ಬೆಂಗಳೂರಿನಲ್ಲಿ ಒಂದು ಪ್ರಕರಣ ಸೇರಿದಂತೆ ಒಟ್ಟು 28 ಪ್ರಕರಣಗಳಲ್ಲಿ ಈ ದರೋಡೆ ತಂಡ ಭಾಗಿಯಾಗಿತ್ತು.

ಕುಖ್ಯಾತ ದರೋಡೆ ತಂಡದ ಒಟ್ಟು 15 ಜನ ಆರೋಪಿಗಳನ್ನು ಬಂಧಿಸಿ ಮಂಗಳೂರು ಪೊಲೀಸರು ಮಹಾ ಸಾಧನೆಯನ್ನು ಮಾಡಿದ್ದರು.


ಈ ದರೋಡೆ ಪ್ರಕರಣಗಳಲ್ಲಿ ಆರೋಪಿಗಳಿಗೆ ಆರ್ಥಿಕ ನೆರವು ಸೇರಿದಂತೆ ಎಲ್ಲ ಸಹಾಯವನ್ನು ಈ ಕೆದಂಬಾಡಿ ನಿವಾಸಿ ಅಬ್ದುಲ್ ಬಶೀರ್ ಮಾಡುತ್ತಿದ್ದ ಎನ್ನಲಾಗಿದೆ.


ಅಷ್ಟೇ ಅಲ್ಲದೆ, ಉಪ್ಪಿನಂಗಡಿ ಠಾಣಾ ವ್ಯಾಪ್ತಿಯಲ್ಲಿ ಇರುವ ಮನೆಯನ್ನು ದರೋಡೆ ಮಾಡಲು ಸಂಚು ರೂಪಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.


ಈತನ ಮುಖವಾಡ ಕಳಚಿ ಬಿದ್ದಿದೆ. ಸಮಾಜ ಸೇವೆ ಎಂಬ ನಾಟಕವಾಡಿ ಜನರನ್ನು ಮರುಳು ಮಾಡುತ್ತಿದ್ದ ಈತನ ಎದೆಯಲ್ಲಿ ವಿಷದ ಜ್ವಾಲೆ ಹರಿಯುತ್ತಿತ್ತು. ದರೋಡೆ ಕೃತ್ಯಗಳ ಹುನ್ನಾರದ ಈತ ಈಗ ಜೈಲು ಕಂಬಿ ಎಣಿಸುತ್ತಿದ್ದಾನೆ.

Ads on article

Advertise in articles 1

advertising articles 2

Advertise under the article