CJI twitter fake account created! | ನಕಲಿ ಟ್ವಿಟ್ಟರ್ ಖಾತೆ: ಮುಖ್ಯ ನ್ಯಾಯಮೂರ್ತಿ ರಮಣ ಪೊಲೀಸರಿಗೆ ದೂರು!
ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಅವರ ಟ್ವಿಟ್ಟರ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ. ಅವರ ಟ್ವಿಟ್ಟರ್ ಖಾತೆಯನ್ನು ಹ್ಯಾಕ್ ಮಾಡಿ ಸುಳ್ಳು ಸಂದೇಶವನ್ನು ಪ್ರಕಟಿಸಿರುವ ಬಗ್ಗೆ ಸ್ವತಃ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಅವರೇ ಪೊಲೀಸರಿಗೆ ದೂರು ನೀಡಿದ್ದಾರೆ.
ಶನಿವಾರವಷ್ಟೇ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಿದ ರಮಣ ಟ್ವಿಟ್ಟರ್ ಸಹಿತ ಯಾವುದೇ ಸಾಮಾಜಿಕ ಜಾಲತಾಣದಲ್ಲಿ ಖಾತೆಯನ್ನು ತೆರೆದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದರು.
ಆದರೆ, ಟ್ವಿಟ್ಟರ್‌ನಲ್ಲಿ ಎನ್.ವಿ. ರಮಣ ಅವರ ಹೆಸರು ಹೊಂದಿರುವ ಖಾತೆ ಇರುವುದು ಬೆಳಕಿಗೆ ಬಂದಿತ್ತು. ಮತ್ತು ಅದರಲ್ಲಿ ನಕಲಿ ಸಂದೇಶಗಳು ಹರಿದಾಡುತ್ತಿತ್ತು.
48ನೇ ಮುಖ್ಯ ನ್ಯಾಯಮೂರ್ತಿಗಳಾಗಿ ಅಧಿಕಾರ ಸ್ವೀಕರಿಸಿದ್ದ ರಮಣ ಹಲವು ಮಹತ್ವದ ತೀರ್ಪುಗಳಿಗೆ ತಮ್ಮ ಹಸ್ತಾಕ್ಷರವನ್ನು ಹಾಕಿದ್ದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಅಂತರ್ಜಾಲ ಕಡಿತ ಮಾಡಿರುವುದನ್ನು ತಕ್ಷಣ ಪುನರ್ವಿಮರ್ಶಿಸಬೇಕು ಎಂಬ ಮಹತ್ವದ ತೀರ್ಪು ಹಾಗೂ ಮುಖ್ಯ ನ್ಯಾಯಮೂರ್ತಿಗಳ ಕಚೇರಿಯೂ ಮಾಹಿತಿ ಹಕ್ಕುಗಳ ಕಾಯ್ದೆಯಡಿ ಬರಬೇಕು ಎಂಬ ತೀರ್ಪಿಗೆ ರಮಣ ಅವರೇ ಅಂಕಿತ ಹಾಕಿದ್ದರು.
ಕೆ.ಸುಬ್ಬ ರಾವ್ ಬಳಿಕ ಆಂಧ್ರದಿಂದ ಆಯ್ಕೆಯಾದ ಎರಡನೇ ಮುಖ್ಯ ನ್ಯಾಯಮೂರ್ತಿಗಳಾಗಿರುವ ರಮಣ ಅವರು 2022ರ ಆಗಸ್ಟ್ 26ರ ವರೆಗೆ ಈ ಪದವಿಯಲ್ಲಿ ಮುಂದುವರಿಯಲಿದ್ದಾರೆ.