Journalist housing society election | ಪತ್ರಕರ್ತರ ಗೃಹ ನಿರ್ಮಾಣ ಸಹಕಾರ ಸಂಘ: ಶ್ರೀನಿವಾಸ ನಾಯಕ್ ಇಂದಾಜೆ ಸೇರಿ 15 ನಿರ್ದೇಶಕರ ಆಯ್ಕೆ
ಸುಳ್ಯ: ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಪತ್ರಕರ್ತರ ಗೃಹ ನಿರ್ಮಾಣ ಸಹಕಾರ ಸಂಘ' ನಿ, ಮಂಗಳೂರು ಇದರ ನೂತನ ಆಡಳಿತ ಮಂಡಳಿ ನಿರ್ದೇಶಕ ಸ್ಥಾನಕ್ಕೆ ಇಂದು ಮಂಗಳೂರಿನ ಪತ್ರಿಕಾ ಭವನದಲ್ಲಿ ನಡೆದ ಚುನಾವಣೆಯಲ್ಲಿ ನಿರ್ದೇಶಕರ ಆಯ್ಕೆ ನಡೆಯಿತು.
ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಸೇರಿ 15 ಮಂದಿ ನಿರ್ದೇಶಕರ ಆಯ್ಕೆ ನಡೆಯಿತು. ಒಟ್ಟು 15 ಸ್ಥಾನಗಳಲ್ಲಿ 9 ಸಾಮಾನ್ಯ ಸ್ಥಾನ ಇದ್ದು, 12 ಮಂದಿ ಕಣದಲ್ಲಿ ಉಳಿದಿದ್ದರು.
ಸಂಜೆ ನಾಲ್ಕು ಗಂಟೆ ಬಳಿಕ ನಡೆದ ಮತ ಎಣಿಕೆಯಲ್ಲಿ ಶ್ರೀನಿವಾಸ್ ನಾಯಕ್ ಇಂದಾಜೆ (177) ಆತ್ಮಭೂಷಣ್ ಭಟ್ (118), ಇಬ್ರಾಹಿಂ ಅಡ್ಕಸ್ಥಳ (139), ಜಿತೇಂದ್ರ ಭಟ್ (127), ಸುಖ್ ಪಾಲ್ ಪೊಳಲಿ (146), ಭಾಸ್ಕರ ರೈ ಕಟ್ಟ (167), ಪುಷ್ಪರಾಜ್ ಬಿ.ಎನ್. (157), ಕೇಶವ ಕುಂದರ್ (115) ಹಾಗೂ ವಿಲ್ಫ್ರೆಡ್ ಡಿಸೋಜ (127) ಬಹುಮತದಿಂದ ಆಯ್ಕೆಯಾಗಿದ್ದಾರೆ.
ಅಶೋಕ್ ಶೆಟ್ಟಿ (48), ಎಸ್.ಜಯರಾಮ್ (57), ರವಿಚಂದ್ರ ಬಿ (88) ಸೋಲನುಭವಿಸಿದ್ದಾರೆ. ಇನ್ನು ಹಿಂದುಳಿದ ವರ್ಗ ಪ್ರವರ್ಗಎ’ ಮೀಸಲು ಕ್ಷೇತ್ರದಿಂದ ಮುಹಮ್ಮದ್ ಆರೀಫ್ ಮತ್ತು ವಿಜಯ ಕೋಟ್ಯಾನ್ ಆಯ್ಕೆಯಾಗಿದ್ದಾರೆ. ಹಿಂದುಳಿದ ವರ್ಗ ಎ ಕ್ಷೇತ್ತದಲ್ಲಿ
2 ಸ್ಥಾನಕ್ಕೆ ಒಟ್ಟು 7 ಮಂದಿ ಅಭ್ಯರ್ಥಿಗಳು ಚುನಾವಣೆ
ಎದುರಿಸಿದ್ದರು. ನರೇಂದ್ರ ಎಂ.ಪೂಜಾರಿ (27), ಮನೋಹರ ಬಳಂಜ (34), ವಿಜಯ್ ಕೋಟ್ಯಾನ್ (67), ರಾಜೇಶ್ ಪೂಜಾರಿ (60), ಮುಹಮ್ಮದ್ ಆರೀಫ್ (91), ಮೊಹಮ್ಮದ್ ಅನ್ಸಾರ್ ಇನೋಳಿ (49) ಹಾಗೂ ಸಿದ್ದಿಕ್ ನೀರಾಜೆ (42) ಮತ ಪಡೆದಿದ್ದಾರೆ.
ಎಸ್ ಸಿ ಮತ್ತು ಎಸ್ ಟಿ ಸ್ಥಾನಕ್ಕೆ ಸುರೇಶ್ ಪಳ್ಳಿ ಹಾಗೂ ಹರೀಶ್ ಮೋಟುಕಾನ ಹಾಗೂ ಮಹಿಳಾ ಕ್ಷೇತ್ರಕ್ಕೆ ಸತ್ಯವತಿ ಹಾಗೂ ಶಿಲ್ಪಾ ಅವಿರೋಧ ಆಯ್ಕೆಯಾಗಿದ್ದರು.
ಒಟ್ಟು 209 ಶೇರುದಾರರ ಪೈಕಿ 198 ಮಂದಿ ಮತದಾನ ಮಾಡಿದ್ದು, ಶೇ.94.98 ಮತದಾನವಾಗಿತ್ತು.