Khadar car met with accident | ಮಾಜಿ ಸಚಿವ ಖಾದರ್ ಕಾರು ಅಪಘಾತ: ವಾಹನ ಜಖಂ, ಖಾದರ್ ಅಪಾಯದಿಂದ ಪಾರು
Wednesday, April 14, 2021
ಮಾಜಿ ಸಚಿವ ಯು.ಟಿ. ಖಾದರ್ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದ್ದು, ಖಾದರ್ ಕೂದಲೆಳೆಯಿಂದ ಪಾರಾಗಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 4ರ ದಾವಣಗೆರೆ ತಾಲೂಕಿನ ಹೆಬ್ಬಾಳ ಗ್ರಾಮದ ಬಳಿ ಖಾದರ್ ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಯಿತು.
ಬೆಳಗಾವಿ ಉಪ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರಕ್ಕಾಗಿ ಮಾಜಿ ಸಚಿವ ಯು.ಟಿ. ಖಾದರ್ ಬೆಂಗಳೂರಿನಿಂದ ಬೆಳಗಾವಿ ಕಡೆ ಪ್ರಯಾಣಿಸುತ್ತಿದ್ದರು.
ನಿಧಾನವಾಗಿ ಸಾಗುತ್ತಿದ್ದ ಕಾರು ಹೆದ್ದಾರಿಯ ಉಬ್ಬು ದಾಟುತ್ತಿದ್ದ ಸಂದರ್ಭದಲ್ಲಿ ಕಂಟೈನರ್ ಲಾರಿಗೆ ಚಾಲಕರ ನಿಯಂತ್ರಣ ತಪ್ಪಿ ಗುದ್ದಿದೆ. ಕಾರಿನ ಎಡಭಾಗಕ್ಕೆ ಗಂಭೀರ ಹಾನಿಯಾಗಿದ್ದು, ಶಾಸಕ, ಮಾಜಿ ಸಚಿವ ಯು.ಟಿ. ಖಾದರ್ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.