Kidnap- 7 arrest | ದುಪ್ಪಟ್ಟು ಎಂದು ಟೊಪ್ಪಿ ಹಾಕಿದ ವ್ಯಕ್ತಿಯ ಅಪಹರಣ: ಆರೋಪಿಗಳ ಬಂಧನ
Tuesday, April 27, 2021
ಉದ್ಯಮಿ ಎಂದು ಬಿಂಬಿಸಿಕೊಂಡು ಹಣ ದುಪ್ಪಟ್ಟು ಮಾಡಿಕೊಡುತ್ತೇನೆ ಎಂದು ನಂಬಿಸಿ ಹಣ ಪಡೆದು ಟೊಪ್ಪಿ ಹಾಕಿದ್ದ ವ್ಯಕ್ತಿಯ ಅಪಹರಣ ಪ್ರಕರಣ ಸುಖಾಂತ್ಯಗೊಂಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳನ್ನು ಅಹ್ಮದ್ ಇಕ್ಬಾಲ್, ಯಾಕೂಬ್, ಉಮ್ಮರ್ ನವಾಫ್, ಶಂಶೀರ್, ಸಯ್ಯದ್ ಮೊಹಮ್ಮದ್ ಕೌಸರ್, ನೌಶಾದ್, ಶೇಖ್ ಮೊಹಮ್ಮದ್ ರಿಯಾಜ್ ಎಂದು ಗುರುತಿಸಲಾಗಿದೆ.
ಕಳೆದ ಗುರುವಾರ ಮಧ್ಯಾಹ್ನದ ವೇಳೆ ತಲಪಾಡಿಯ ಕೆ.ಸಿ. ನಗರದ ಬಳಿಯಿಂದ ಅಹಮ್ಮದ್ ಅಶ್ರಫ್ ಅವರನ್ನು ಅಪಹರಣ ಮಾಡಲಾಗಿತ್ತು. ಇಕ್ಬಾಲ್ ಎಂಬವರೇ ಈ ಅಪಹರಣ ಮಾಡಿದ್ದಾರೆ ಎಂದು ಅವರ ಪತ್ನಿ ರಶೀದಾ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ಧರು.
ಆರೋಪಿಗಳ ವಶದಲ್ಲಿ ಇದ್ದ ರಿಟ್ಜ್ ಕಾರು, ಬೆಲೆನೋ ಕಾರು, ಮಾರುತಿ ಅಲ್ಟೊ ಕಾರು, ಎರಡು ತಲವಾರುಗಳು, ಒಂದು ಡ್ಯಾಗರ್ ಹಾಗೂ 120 ಗ್ರಾಂ ತೂಕದ ನೆಕ್ಲೇಸ್ ಚೈನ್ ಸಹಿತ ಮಹತ್ವದ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ.