-->
producer ramu body cremated | ಕೋಟಿ ನಿರ್ಮಾಪಕ ರಾಮು ಅವರ ಅಪಾರ ಆಸ್ತಿಗೆ ವಾರೀಸುದಾರರು ಯಾರು..?

producer ramu body cremated | ಕೋಟಿ ನಿರ್ಮಾಪಕ ರಾಮು ಅವರ ಅಪಾರ ಆಸ್ತಿಗೆ ವಾರೀಸುದಾರರು ಯಾರು..?





ಕನ್ನಡ ಚಿತ್ರರಂಗಕ್ಕೆ ಹೊಸ ಮೆರುಗು ನೀಡಿದ್ದ ನಿರ್ಮಾಪಕ ರಾಮು ಈಗ ನೆನಪು ಮಾತ್ರ.


ನಿರ್ಮಾಪಕ ರಾಮು ಕೋಟಿ ರಾಮು ಎಂದೇ ಪ್ರಖ್ಯಾತಿ ಪಡೆದವರು. ಒಂದು ಕಾಲದಲ್ಲಿ ಸ್ಯಾಂಡಲ್‌ವುಡ್‌ನಲ್ಲಿ ಲಕ್ಷಗಟ್ಟಲೆ ಹಣ ಹೂಡಿಕೆ ಮಾಡಿ ಚಿತ್ರಗಳನ್ನು ನಿರ್ಮಾಣ ಮಾಡಿದವರು. ಬಳಿಕ ದುಬಾರಿ ಚಿತ್ರಗಳ ನಿರ್ಮಾಪಕರಾಗಿ ಹೆಸರುವಾಸಿಯಾದರು.





ಕೇವಲ 52 ವರ್ಷ ವಯಸ್ಸಿನಲ್ಲಿ ಕೊರೋನಾ ಎಂಬ ಮಹಾ ಕಾಯಿಲೆಗೆ ಜೀವ ತೆತ್ತ ರಾಮು ಬೆಂಗಳೂರಿನ ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ರಾಮು ಮೂಲತಃ ತುಮಕೂರು ಜಿಲ್ಲೆಯ ಕುಣಿಗಲ್‌ನವರು.


ಅವರು ಪತ್ನಿ ನಟಿ ಮಾಲಾಶ್ರೀ, ಮಗ ಆರ್ಯ ಹಾಗೂ ಮಗಳು ಅನನ್ಯ ಅವರನ್ನು ಅಗಲಿದ್ದಾರೆ.

ತಮ್ಮ ವೃತ್ತಿ ಬದುಕಿನ ಆರಂಭದಲ್ಲಿ ವಿತರಕರಾಗಿ ಚಿತ್ರರಂಗಕ್ಕೆ ಕಾಲಿಟ್ಟಿದ್ದ ಅವರು ನಿರ್ಮಾಪಕರಾಗಿ ಭಡ್ತಿ ಪಡೆದದ್ದು ಗೋಲೀಬಾರ್ ಎಂಬ ಚಿತ್ರದಿಂದ. ಇದಾದ ಬಳಿಕ ಲಾಕಪ್ ಡೆತ್, ಹಾಲಿವುಡ್, ರಾಕ್ಷಸ, ಗಾಂಧಿನಗರ ಮೊದಲಾದ ಚಿತ್ರಗಳನ್ನು ನಿರ್ಮಿಸಿದರು. ಕಳಾಸಿಪಾಳ್ಯ ಇವರಿಗೆ ಅತಿ ಜನಪ್ರಿಯತೆ ತಂದುಕೊಟ್ಟಿತು.





ಸೆಂಚೂರಿ ಸ್ಟಾರ್ ಶಿವರಾಜ್ ಕುಮಾರ್ ತಾರಾಗಣದ ಎಕೆ 47 ಚಿತ್ರ ನಿರ್ಮಿಸಿ ನಟ ಓಂಪುರಿಯನ್ನು ಕನ್ನಡ ಚಿತ್ರರಂಗಕ್ಕೆ ಮತ್ತೆ ಪರಿಚಯಿಸಿದರು.


ಕಳೆದ ಒಂದು ದಶಕದಲ್ಲಿ ಅವರು ಚಿತ್ರ ನಿರ್ಮಾಣದಲ್ಲಿ ಕೈಸುಟ್ಟುಕೊಂಡಿದ್ದೇ ಹೆಚ್ಚು ಎನ್ನಲಾಗುತ್ತಿದೆ. ಹುಟ್ಟು ಶ್ರೀಮಂತರಾಗಿದ್ದ ರಾಮು ತಮ್ಮ ವೃತ್ತಿ ಬದುಕಿನಲ್ಲಿ ಏಳು ಬೀಳುಗಳನ್ನು ಕಂಡವರು. 




ಸಾಕಷ್ಟು ಚಿತ್ರಗಳಿಗೆ ಹಣ ಹೂಡಿಕೆ ಮಾಡಿ ನಷ್ಟವನ್ನೂ ಅನುಭವಿಸಿದ್ದರು. ಆದರೆ, ಅದನ್ನು ಹಂಚಿಕೆ ಮಾಡುವಲ್ಲಿ ಜಾಣ್ಮೆ ತೋರಿಸಿ ತಾವು ಅನುಭವಿಸಿದ್ದ ನಷ್ಟವನ್ನು ತಕ್ಕಮಟ್ಟಿಗೆ ಸರಿದೂಗಿಸಿಕೊಂಡು ಬಂದಿದ್ದರು.





ರಾಮು ಅವರಿಗೆ ಹುಟ್ಟೂರು ಕುಣಿಗಲ್‌ನಲ್ಲಿ ಅಪಾರ ಆಸ್ತಿ ಇದೆ. ಐಷಾರಾಮಿ ಮನೆಯನ್ನೂ ಕಟ್ಟಿಸಿಕೊಂಡಿದ್ದ ಅವರು, ತಮ್ಮ ಜೀವಿತಾವಧಿಯಲ್ಲಿ ಪತ್ನಿ ಮಕ್ಕಳೊಂದಿಗೆ ಸಂತಸದಿಂದಲೇ ಇದ್ದರು. ಆದರೆ, ಹಾಳು ಕೊರೋನಾ ಅವರ ಬದುಕಿಗೆ ಇತಿಶ್ರೀ ಹಾಡಿದ್ದು ದುರಂತ.


ಅವರ ಕಾಲಾನಂತರ ಬಿಟ್ಟು ಹೋದ ಅಪಾರ ಆಸ್ತಿಗೆ ಅವರ ಪತ್ನಿ ಮಾಲಾಶ್ರೀ ಮತ್ತು ಮಕ್ಕಳಾದ ಅನನ್ಯ, ಆರ್ಯ ಉತ್ತರಾಧಿಕಾರಿಯಾಗಲಿದ್ಧಾರೆ.


Ads on article

Advertise in articles 1

advertising articles 2

Advertise under the article