Shiroor Mut 31st Seer appointed | ಉಡುಪಿ: ಶಿರೂರು 31ನೇ ಮಠಾಧಿಪತಿಯಾಗಿ ಅನಿರುದ್ದ ಸರಳತ್ತಾಯ
ಉಡುಪಿ ಶಿರೂರು ಮಠದ 31ನೇ ಯತಿಯಾಗಿ 16 ವರ್ಷದ ಅನಿರುದ್ಧ ಸರಳಾಯ ನೇಮಕವಾಗಿದ್ಧಾರೆ.
ನೂತನ ಯತಿಗಳಿಗೆ ಮೇ 13ರಂದು ಸನ್ಯಾಸ ಸ್ವೀಕಾರ ಮಾಡಲಿದ್ದು, ಮೇ 14ಕ್ಕೆ ಪಟ್ಟಾಭಿಷೇಕ ಪ್ರಕ್ರಿಯೆ ನಡೆಯಲಿದೆ.
ಮಧ್ವಾಚಾರ್ಯರು ಸ್ಥಾಪಿಸಿದ ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಶಿರೂರು ಮಠಕ್ಕೆ 31ನೇ ಯತಿಗಳಾಗಿ ಅನಿರುದ್ಧ ಆಗಮಿಸುತ್ತಿದ್ಧಾರೆ. ನಿಕಟಪೂರ್ವ ಯತಿಗಳಾದ ಶ್ರೀ ಲಕ್ಷ್ಮೀವರ ತೀರ್ಥರು 2018ರ ಜುಲೈ 31ರಂದು ಅನಾರೋಗ್ಯದ ಕಾರಣ ಕೃಷ್ಣೈಕ್ಯರಾಗಿದ್ದರು.
ನೂತನ ಯತಿಗಳ ಘೋಷಣೆ ಮಾಡಿದ ಸೋದೆ ಮಠದ ಶ್ರೀ ವಿಶ್ವ ವಲ್ಲಭ ತೀರ್ಥ ಸ್ವಾಮೀಜಿಯವರು, ಅನಿರುದ್ಧ ಅವರು ಸಾಮಾನ್ಯ ಶಿಕ್ಷಣ ವ್ಯವಸ್ಥೆಯಡಿ 10ನೇ ತರಗತಿಯನ್ನು ಮುಗಿಸಿದ್ದಾರೆ ಎಂದು ಹೇಳಿದ್ದಾರೆ.
ಅನಿರುದ್ಧ ತನ್ನ ಬಾಲ್ಯದಿಂದಲೇ ದೇವರು ಮತ್ತು ಧಾರ್ಮಿಕ ಚಟುವಟಿಕೆಗಳಲ್ಲಿ ಆಸಕ್ತಿ ಹೊಂದಿದ್ದರು. ವೇದಗಳನ್ನು ಆಳವಾಗಿ ತಿಳಿದುಕೊಳ್ಳು ಸಹ ಅವರು ಆಸಕ್ತಿ ಹೊಂದಿದ್ದರು. ಅದರ ಪ್ರಕಾರ ಅವರು ತಮ್ಮ ತಂದೆಯೊಂದಿಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ತನ್ನ ಮಗನ ಆಶಯಗಳನ್ನು ಗಂಭೀರವಾಗಿ ಪರಿಗಣಿಸಿ ಅವರು ಜಾತಕ ಪರಿಶೀಲನೆ ಮಾಡಿಸಿದಾಗ ಅವರ ಪುತ್ರ ಅನಿರುದ್ಧ ಅವರಿಗೆ ಯತಿ ಯೋಗ ಇತ್ತು ಎಂದು ತಿಳಿದುಬಂತು ಎಂದು ಸೋದೆ ಯತಿಗಳು ವಿವರಿಸಿದರು.