demand on action against Ola, Uber | App ಆಧಾರಿತ ಓಲಾ ಊಬೆರ್ ವಿರುದ್ಧ ಕ್ರಮಕ್ಕೆ ಟ್ಯಾಕ್ಸಿ ಚಾಲಕರ ಆಗ್ರಹ
Thursday, April 8, 2021
ಮಂಗಳೂರು: ರಾಜ್ಯದಾದ್ಯಂತ ಪರಿಷ್ಕರಣೆ ಮಾಡಲಾಗಿರುವ ಟ್ಯಾಕ್ಸಿ ದರಗಳನ್ನು ನೀಡದಿರುವ ಯಾಪ್ ಆಧಾರಿತ ರೇಡಿಯೋ ಟ್ಯಾಕ್ಸಿ (ಓಲಾ, ಉಬೆರ್) ಕಂಪೆನಿಗಳ ಮೇಲೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಆನ್ಲೈನ್ ಟ್ಯಾಕ್ಸಿ ಚಾಲಕರ ಸಂಘ ಒತ್ತಾಯಿಸಿದೆ.
ಯಾಪ್ ಆಧಾರಿತ ರೇಡಿಯೋ ಟ್ಯಾಕ್ಸಿ (ಓಲಾ, ಉಬೆರ್) ಕಂಪೆನಿಗಳಿಂದಾಗಿ ಸಂಕಷ್ಟದಲ್ಲಿರುವ ಟ್ಯಾಕ್ಸಿ ಚಾಲಕರಿಗೆ ಸರಕಾರ ನಿಗದಿಪಡಿಸಿದ ಗರಿಷ್ಟ ದರ ನೀಡುವಂತೆ ಅದು ಒತ್ತಾಯಿಸಿದೆ.
ದಕ್ಷಿಣ ಕನ್ನಡ ಜಿಲ್ಲಾ ಆನ್ಲೈನ್ ಟ್ಯಾಕ್ಸಿ ಚಾಲಕರ ಸಂಘದ ನೇತೃತ್ವದಲ್ಲಿ ಟ್ಯಾಕ್ಸಿ ಚಾಲಕರು ಮಂಗಳೂರು ಪ್ರಾದೇಶಿಕ ಸಾರಿಗೆ ಅಧಿಕಾರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷರಾದ ಬಿ.ಕೆ ಇಮ್ತಿಯಾಜ್, ಸಹ ಕಾರ್ಯದರ್ಶಿಗಳಾದ ಎಂ.ಕೆ ಕಲೀಮ್ ಮದನಿ, ಅಲ್ತಾಫ್ ಉಳ್ಳಾಲ್, ಮುಖಂಡರಾದ ಸಾದಿಕ್ ಕಣ್ಣೂರ್, ಆಸೀಫ್ ಫರಂಗಿಪೇಟೆ, ಫಕ್ರುದ್ದಿನ್, ಶಬೀರ್ ಕೆ.ಸಿ ರೋಡ್ ಉಪಸ್ಥಿತರಿದ್ದರು.