VHP anger over notification | ಧಾರ್ಮಿಕ ಕಾರ್ಯಕ್ರಮಗಳಿಗೆ ಅನುಮತಿ ನೀಡದ ಸರಕಾರಿ ಆದೇಶಕ್ಕೆ ವಿಎಚ್‌ಪಿ ವಿರೋಧ
ಕೊರೋನಾ ನಿಯಂತ್ರಿಸಲು ಧಾರ್ಮಿಕ ಕಾರ್ಯಕ್ರಮಗಳಿಗೆ ನಿರ್ಬಂಧ ಹೇರಿರುವ ರಾಜ್ಯ ಸರ್ಕಾರದ ಆದೇಶಕ್ಕೆ ವಿಶ್ವ ಹಿಂದೂ ಪರಿಷತ್ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಸರ್ಕಾರಿ ಆದೇಶದ ಪ್ರಕಾರ ರಾಜಕೀಯ ಮತ್ತು ಮದುವೆ ಸಮಾರಂಭಗಳು ನಡೆಸಬಹುದು. ಆದರೆ, ಧಾರ್ಮಿಕ ಕಾರ್ಯಕ್ರಮ ಏಕಿಲ್ಲ ಎಂದು ಅದು ಪ್ರಶ್ನಿಸಿದೆ.
ಕಳೆದ ಎರಡು ತಿಂಗಳಲ್ಲಿ ಸಾಕಷ್ಟು ದೈವಾರಾಧನೆ ಕಾರ್ಯಕ್ರಮಗಳು, ನೇಮೋತ್ಸವ, ಕೋಲ, ಜಾತ್ರೆಗಳು ನಡೆದಿವೆ. ಬ್ರಹ್ಮಕಲಶ, ಯಕ್ಷಗಾನದಂತಹ ಧಾರ್ಮಿಕ ಕಾರ್ಯಕ್ರಮಗಳ ದಿನ ನಿಗದಿಯಾಗಿವೆ. ತಯಾರಿ ಕೂಡ ನಡೆದಿವೆ. ಆದರೆ, ಈಗ ಏಕಾಏಕಿ ಕೋವಿಡ್ ನೆಪದಲ್ಲಿ ಈ ಕಾರ್ಯಕ್ರಮಗಳಿಗೆ ನಿಷೇಧ ಹೇರಿವುದು ಸರಿಯಲ್ಲ ಎಂದು ವಿಎಚ್‌ಪಿ ಅಭಿಪ್ರಾಯಪಟ್ಟಿದೆ.
ಉದ್ಯಮಿ ಅಶೋಕ್ ರೈ, ಶರಣ್ ಪಂಪ್‌ವೆಲ್, ಮಾಜಿ ಶಾಸಕ ಮೋನಪ್ಪ ಭಂಡಾರಿ, ವಿಎಚ್‌ಪಿ ಜಿಲ್ಲಾಧ್ಯಕ್ಷ ಗೋಪಾಲ್ ಕುತ್ತಾರ್, ಬಿಜೆಪಿ ಮುಖಂಡರಾದ ಹರಿಕೃಷ್ಣ ಬಂಟ್ವಾಳ್ ಅವರನ್ನೊಳಗೊಂಡ ನಿಯೋಗ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಅವರನ್ನು ಭೇಟಿ ಮಾಡಿ ಮನವಿ ಮಾಡಿದೆ.
ಈ ಆದೇಶವನ್ನು ಮರುಪರಿಶೀಲಿಸಿ, ಧಾರ್ಮಿಕ ಕಾರ್ಯಕ್ರಮಕ್ಕೆ ಅವಕಾಶ ನೀಡಬೇಕು ಎಂದು ನಿಯೋಗ ಮನವಿ ಮಾಡಿದೆ.