youth stabed in Bantwal | ಬಂಟ್ವಾಳದಲ್ಲಿ ಯುವಕನಿಗೆ ಚೂರಿ ಇರಿತ: ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲು
Sunday, April 4, 2021
ಬಂಟ್ವಾಳ: ಇಲ್ಲಿನ ಬಿ.ಸಿ.ರೋಡ್ ಅಜ್ಜಿಬೆಟ್ಟು ತಿರುವಿನಲ್ಲಿ ಯುವಕನೊಬ್ಬನ ಮೇಲೆ ದುಷ್ಕರ್ಮಿಗಳು ಚೂರಿಯಿಂದ ಇರಿದು ದಾಳಿ ಮಾಡಿದ ಘಟನೆ ರಾತ್ರಿ ವೇಳೆಯಲ್ಲಿ ನಡೆದಿದೆ.
ವಾಹನವೊಂದರಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಈ ಕೃತ್ಯ ಎಸಗಿ ಪರಾರಿಯಾಗಿದ್ದಾರೆ.
ತೀವ್ರವಾಗಿ ಗಾಯಗೊಂಡ ಯುವಕನನ್ನು ಬ್ರಹ್ಮರಕೂಟ್ಲು ನಿವಾಸಿ ಮನೋಜ್ ಎಂದು ಗುರತಿಸಲಾಗಿದೆ. ಗಾಯಗೊಂಡ ಮನೋಜ್‌ನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಆತನ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗಿದೆ.
ಮನೋಜ್ ವೃತ್ತಿಯಲ್ಲಿ ಎಂಜಿನಿಯರ್. ವಿದೇಶದಲ್ಲಿ ಉದ್ಯೋಗದಲ್ಲಿ ಇದ್ದ ಮನೋಜ್ ಇತ್ತೀಚೆಗಷ್ಟೇ ನಾಡಿಗೆ ವಾಪಸ್ ಆಗಿದ್ದರು.
ಘಟನಾ ಸ್ಥಳಕ್ಕೆ ಬಂಟ್ವಾಳ ಡಿವೈಎಸ್‌ಪಿ ವೆಲೆಂಟೈನ್ ಡಿಸೋಜ ಮತ್ತು ಇನ್ಸ್‌ಪೆಕ್ಟರ್ ಚಲುವರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದುಷ್ಕರ್ಮಿಗಳ ಪತ್ತೆಗೆ ಕಾರ್ಯಾಚರಣೆ ನಡೆಸಲಾಗಿದೆ.