
youth stabbed his lover | ಯುವತಿಗೆ ಚೂರಿಯಿಂದ ಇರಿದ ಪಾಗಲ್ ಪ್ರೇಮಿ
Thursday, April 8, 2021
ಮನೆ ಬಿಟ್ಟು ಬಂದು ಮದುವೆಯಾಗಲು ಹಿಂದೇಟು ಹಾಕಿದ್ದಕ್ಕೆ ಕೆರಳಿದ ಪ್ರಿಯಕರ
READ
ಪ್ರೇಮ ಪ್ರಕರಣವೊಂದು ಜೀವಕ್ಕೆ ಸಂಚಕಾರ ತರಬಲ್ಲದು. ದಕ್ಷಿಣ ಕನ್ನಡದ ಬೆಳ್ತಂಗಡಿಯಲ್ಲೊಬ್ಬ ಪಾಗಲ್ ಪ್ರೇಮಿ ತಾನು ಪ್ರೇಮಿಸಿದ ಯುವತಿಯ ಮನೆಗೆ ನುಗ್ಗಿ ಚೂರಿಯಿಂದ ಇರಿದಿದ್ದಾನೆ. ಈ ಘಟನೆ ನಡೆದಿರುವುದು ಬೆಳ್ತಂಗಡಿ ತಾಲೂಕಿನ ಲಾಯಿಲದಲ್ಲಿ.
ಆರೋಪಿ ಪೂಂಜಾಲಕಟ್ಟೆ ನಿವಾಸಿ 22 ವರ್ಷದ ಶಮೀರ್ ಕಳೆದ ಐದು ವರ್ಷಗಳಿಂದ ಒಬ್ಬಾಕೆ ಯುವತಿಯನ್ನು ಪ್ರೀತಿಸುತ್ತಿದ್ದ. ಮದುವೆಯಾಗಲು ಪರಸ್ಪರ ಒಪ್ಪಿಕೊಂಡಿದ್ದರು. ಆದರೆ, ಆಕೆ ಕೊನೆಯ ಕ್ಷಣದಲ್ಲಿ ಮನೆ ಬಿಟ್ಟು ಬರಲು ಹಿಂದೇಟು ಹಾಕಿದ್ದಳು.
ಇದರಿಂದ ಕೆರಳಿದ ಶಮೀರ್ ಆಕೆಯ ಮನೆಗೆ ನುಗ್ಗಿ ಆಕೆಯ ಮೇಲೆ ಚೂರಿಯಿಂದ ದಾಳಿ ಮಾಡಿದ್ದಾನೆ. ಘಟನೆಯಿಂದ ಆಕೆಯ ಎಡ ಕೈ, ಬಲಕೈ ಮತ್ತು ಕುತ್ತಿಗೆಗೆ ಗಾಯಗಳಾಗಿವೆ.
ತಕ್ಷಣ ಮನೆಯ ಸದಸ್ಯರು ಆಕೆಯನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಯುವಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದೆ.
ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.