
Abhay Chandra Jain | ಆಂಬುಲೆನ್ಸ್ ಚಲಾಯಿಸಿ ಜಾಗೃತಿ ಮೂಡಿಸಿದ ಮಾಜಿ ಸಚಿವ ಅಭಯಚಂದ್ರ ಜೈನ್
Saturday, May 8, 2021
ಸ್ವತಃ ಆಂಬುಲೆನ್ಸ್ ಚಲಾಯಿಸಿ ಜಾಗೃತಿ ಮೂಡಿಸಿದ ಮಾಜಿ ಸಚಿವ ಅಭಯಚಂದ್ರ
ಸರಳ, ಸಜ್ಜನಿಕೆಗೆ ಹೆಸರಾದ ಮೂಡಬಿದಿರೆ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಉಚಿತ ಆಂಬುಲೆನ್ಸ್ ಸೇವೆಯನ್ನು ಲೋಕಾರ್ಪಣೆ ಮಾಡಿ ಗಮನ ಸೆಳೆದರು.
ಈ ಸಂದರ್ಭದಲ್ಲಿ ಹಳೆಯಂಗಡಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಆಂಬುಲೆನ್ಸ್‌ನ್ನು ಸ್ವತಃ ಚಲಾಯಿಸಿ ಜಾಗೃತಿ ಮೂಡಿಸಿದ ಅವರು, ತುರ್ತು ಸಂದರ್ಭ ಬಂದಲ್ಲಿ ಜನರ ಸೇವೆಗೆ ತಾನು ಸಹ ಕೋವಿಡ್ ವಾರಿಯರ್ಸ್ ಆಗಿ ಆಂಬುಲೆನ್ಸ್ ಚಲಾಯಿಸಲು ಸಿದ್ಧ ಎಂದು ಘೋಷಿಸಿದರು.
ಆರೋಗ್ಯ, ಸಾಮಾಜಿಕ ಬದ್ಧತೆ ರಕ್ಷಿಸುವಲ್ಲಿ ನನ್ನ ರಾಜಕೀಯ ಸಮಾಜ ಸೇವೆಗೆ ಮೀಸಲು ಎಂದು ಅವರು ಪುನರುಚ್ಚರಿಸಿದರು.