-->
Prof Jayavanth expired- ಮಂಗಳೂರು: ಖಗೋಳಶಾಸ್ತ್ರದ ವೈಜ್ಞಾನಿಕ ವಿಶ್ಲೇಷಕ ಪ್ರೊಫೆಸರ್ ಜಯಂತ್ ವಿಧಿವಶ

Prof Jayavanth expired- ಮಂಗಳೂರು: ಖಗೋಳಶಾಸ್ತ್ರದ ವೈಜ್ಞಾನಿಕ ವಿಶ್ಲೇಷಕ ಪ್ರೊಫೆಸರ್ ಜಯಂತ್ ವಿಧಿವಶ





ಮಂಗಳೂರು : ಪ್ರೊಫೆಸರ್ ಎಚ್. ಜಯಂತ್ (67) ಹೃದಯಾಘಾತ ದಿಂದಾಗಿ ಮಂಗಳೂರಿನ ಕುಲಶೇಖರ ಸಮೀಪದ ಸರಿಪಳ್ಳದಲ್ಲಿರುವ ಅವರ ಮನೆಯಲ್ಲಿ 13.5.21 ಸಂಜೆ 6 ಗಂಟೆಗೆ ನಿಧನ ಹೊಂದಿದರು.


ಮಂಗಳೂರಿನ ಸಂತ ಆಗ್ನೆಸ್ ಕಾಲೇಜಿನ ನಿವೃತ್ತ ರಸಾಯನಶಾಸ್ತ್ರ ಪ್ರಾಧ್ಯಾಪಕ ಪ್ರೊ. ಎಚ್. ಜಯಂತ್ ಅವರು ಸುಮಾರು ಮೂವತ್ತಕ್ಕೂ ಹೆಚ್ಚು ವರ್ಷಗಳಿಂದ ಮಂಗಳೂರಿನ ಅನೇಕರಿಗೆ ಖಗೋಲಶಾಸ್ತ್ರದ ಅಭಿರುಚಿ ಹತ್ತಿಸಿದವರು. 


ಗ್ರಹಣ ಆಗಲೀ, ಧೂಮಕೇತು ಬರಲಿ ಆಕಾಶದ ವಿಸ್ಮಯಗಳತ್ತ ತಮ್ಮ ವಿದ್ಯಾರ್ಥಿಗಳು ಹಾಗೂ ಆಸಕ್ತರಿಗೆ ಅದರ ಪರಿಚಯ ಮಾಡಿಸುತ್ತಿದ್ದವರು. ಅದಕ್ಕೆಂದೇ ನಗರದಿಂದ ತುಸುದೂರ ಸರಿಪಲ್ಲ ಎಂಬಲ್ಲಿ ಮನೆ ಮಾಡಿಕೊಂಡು ಆಸಕ್ತರಿಗೆ ಆಕಾಶದ ಪರಿಚಯ ಮಾಡಿಸುತ್ತಿದ್ದರು. 


ಮಂಗಳೂರು ಹವ್ಯಾಸಿ ಖಗೋಲವೀಕ್ಷಕರ ಸಂಘದ ಮೂಲಕ ಅನೇಕ ಚಟುವಟಿಕೆ ಮಾಡುತ್ತಾ ಕ್ರಿಯಾಶೀಲಾರಾಗಿದ್ದರು.


ಸಂಗೀತ, ಯಕ್ಷಗಾನ, ನಾಟಕ, ಚಾರಣ ಮೊದಲಾದ ಹಲವಾರು ಆಸಕ್ತಿಗಳನ್ನು ಹೊಂದಿದ್ದವರು. ಕಿರಿಯರ ಜೊತೆ ಸದಾ ಸ್ನೇಹಭಾವದಿಂದ ಇರುತ್ತಿದ್ದ ಸರಳ ಸಜ್ಜನ. Sunday science school ನಂತಹ ಚಟುವಟಿಕೆಗಳ ಮೂಲಕ ಮಕ್ಕಳಿಗೆ ನಿಜವಾದ ಅರ್ಥದಲ್ಲಿ ವಿಜ್ಞಾನ ಕಲಿಕೆ ಎಂಬ ಪ್ರಯೋಗವನ್ನು ಹಲವಾರು ವರ್ಷ ನಡೆಸಿದವರು.


ಬಗಲಿಗೊಂದು ಚೀಲ, ಕೈಯಲ್ಲೊಂದು single fold ಛತ್ರಿ, ಚೌಕ ಫ್ರೇಮಿನ ಕನ್ನಡಕ, ಸದಾ ನಗುಮುಖದ ಶಾಂತ ವ್ಯಕ್ತಿತ್ವದ ಇವರು ತಾಯಿ, ಪತ್ನಿ, ಎರಡು ಪುತ್ರಿಯರು, ಅಳಿಯ, ಸಹೋದರ ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.


ಅರವಿಂದ ಕುಡ್ಲ ಅವರ ನುಡಿನಮನ




ಮಂಗಳೂರಿನ ಸಂತ ಆಗ್ನೆಸ್ ಕಾಲೇಜಿನ ನಿವೃತ್ತ ರಸಾಯನಶಾಸ್ತ್ರ ಪ್ರಾಧ್ಯಾಪಕ ಪ್ರೊ.ಜಯಂತ್ ಸರ್ ನಮ್ಮನ್ನು ಅಗಲಿದ್ದಾರೆ ಎಂದು ಈಗಷ್ಟೇ ಸುದ್ದಿ ಬಂತು. ಸುಮಾರು ಮೂವತ್ತಕ್ಕೂ ಹೆಚ್ಚು ವರ್ಷಗಳಿಂದ ಮಂಗಳೂರಿನ ಅನೇಕರಿಗೆ ಖಗೋಲಶಾಸ್ತ್ರದ ಅಭಿರುಚಿ ಹತ್ತಿಸಿದವರು. ಗ್ರಹಣ ಆಗಲೀ, ಧೂಮಕೇತು ಬರಲಿ ಆಕಾಶದ ವಿಸ್ಮಯಗಳತ್ತ ತಮ್ಮ ವಿದ್ಯಾರ್ಥಿಗಳು ಹಾಗೂ ಆಸಕ್ತರಿಗೆ ಅದರ ಪರಿಚಯ ಮಾಡಿಸುತ್ತಿದ್ದವರು. ಅದಕ್ಕೆಂದೇ ನಗರದಿಂದ ತುಸುದೂರ ಸರಿಪಲ್ಲ ಎಂಬಲ್ಲಿ ಮನೆ ಮಾಡಿಕೊಂಡು ಆಸಕ್ತರಿಗೆ ಆಕಾಶದ ಪರಿಚಯ ಮಾಡಿಸುತ್ತಿದ್ದರು. ಮಂಗಳೂರು ಹವ್ಯಾಸಿ ಖಗೋಲ ವೀಕ್ಷಕರ ಸಂಘದ ಮೂಲಕ ಅನೇಕ ಚಟುವಟಿಕೆ ಮಾಡುತ್ತಾ ಕ್ರಿಯಾಶಿಲರಾಗಿದ್ದವರು.


ಸಂಗೀತ, ಯಕ್ಷಗಾನ, ನಾಟಕ, ಚಾರಣ ಮೊದಲಾದ ಹಲವಾರು ಆಸಕ್ತಿಗಳನ್ನು ಹೊಂದಿದ್ದವರು. ನಮ್ಮಂತಹ ಕಿರಿಯರ ಜೊತೆ ಸದಾ ಸ್ನೇಹಭಾವದಿಂದ ಇರುತ್ತಿದ್ದ ಸರಳ ಸಜ್ಜನ. Sunday science school ನಂತಹ ಚಟುವಟಿಕೆಗಳ ಮೂಲಕ ಮಕ್ಕಳಿಗೆ ನಿಜವಾದ ಅರ್ಥದಲ್ಲಿ ವಿಜ್ಞಾನ ಕಲಿಕೆ ಎಂಬ ಪ್ರಯೋಗವನ್ನು ಹಲವಾರು ವರ್ಷ ನಡೆಸಿದವರು.


ಬಗಲಿಗೊಂದು ಚೀಲ, ಕೈಯಲ್ಲೊಂದು single fold ಛತ್ರಿ, ಚೌಕ ಫ್ರೇಮಿನ ಕನ್ನಡಕ, ಸದಾ ನಗುಮುಖದ ಶಾಂತ ವ್ಯಕ್ತಿತ್ವ. ನೀವು ನಮ್ಮ ಜೊತೆ ಇಲ್ಲದಿದ್ದರೂ ನಿಮ್ಮ ಬದುಕು ನಮಗೆ ಸದಾ ಮಾರ್ಗದರ್ಶಕ.

Ads on article

Advertise in articles 1

advertising articles 2

Advertise under the article