
big boss show stopped | ಅರ್ಧಕ್ಕೆ ನಿಂತ ಬಿಗ್ ಬಾಸ್: ಭಾರವಾದ ಮನಸ್ಸಿನಲ್ಲಿ ಟಿವಿ ಚಾನೆಲ್ ಹೇಳಿದ್ದು ಹೀಗೆ...
Saturday, May 8, 2021
ಬಿಗ್ ಬಾಸ್‌ಗೂ ಕೊರೋನಾ ಬಿಸಿ ತಟ್ಟಿದೆ. ಮೇ 10ರಿಂದ ರಾಜ್ಯ ಸರ್ಕಾರ ಫುಲ್ ಲಾಕ್‌ಡೌನ್ ಘೋಷಣೆ ಮಾಡಿರುವುದರಿಂದ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಬಿಗ್ ಬಾಸ್ ರಿಯಾಲಿಟಿ ಶೋವನ್ನು ಅರ್ಧಕ್ಕೆ ನಿಲ್ಲಿಸಲು ನಿರ್ಧರಿಸಿದೆ.
ಹೀಗಾಗಿ, ಭಾನುವಾರದಿಂದ ಬಿಗ್ ಬಾಸ್ ಶೋ ಬಹುತೇಕ ಪ್ರಸಾರ ಆಗುವುದಿಲ್ಲ.
ಕೊರೊನಾ ಎರಡನೇ ಅಲೆ ತೀವ್ರವಾಗಿದ್ದು, ಟಿವಿ ಕಾರ್ಯಕ್ರಮ, ಸಿನಿಮಾ ಚಿತ್ರೀಕರಣ ಸೇರಿದಂತೆ ಎಲ್ಲ ರೀತಿಯ ಚಟುವಟಿಕೆ ನಿಷೇಧಿಸಲಾಗಿದೆ.
ಈಗಾಗಲೇ ಕಳೆದ ಮೂರು ವಾರಗಳಿಂದ ನಟ ಸುದೀಪ್ ಬಿಗ್ ಬಾಸ್‌ನಿಂದ ದೂರ ಇದ್ದಾರೆ. ಕೊರೋನಾ ಕಾರಣದಿಂದ ದೂರ ಉಳಿದಿದ್ದಾರೆ ಎಂದು ಹೇಳಲಾಗುತ್ತಿದ್ದರೂ ಅದನ್ನು ಇಲ್ಲಿಯವರೆಗೆ ಯಾರೂ ದೃಢಪಡಿಸಿಲ್ಲ. ಅನಾರೋಗ್ಯ ಎಂದಷ್ಟೇ ಕಾರಣ ನೀಡಲಾಗುತ್ತಿದೆ.
ಬಿಗ್ ಬಾಸ್ ಶುರುವಾಗಿ ಇವತ್ತಿಗೆ 71 ದಿನ. ಪಿಸಿಆರ್‌ನಲ್ಲಿ ನಿಂತು ಈ ಮನೆಲಿರೋ ಹನ್ನೊಂದು ಜನ ಓಡಾರುತ್ತಿರುವುದನ್ನು ನೋಡಿದಾಗ... ಎಂದು ಮಾತು ಮುಕ್ತಾಯಗೊಳಿಸಿದ ಈ ಶೋ ಬಗ್ಗೆ ಕಾರ್ಯಕ್ರಮ ನಿರ್ವಾಹಕರು ಹೇಳಿದ್ದು ಹೀಗೆ...
ಪರಮೇಶ್ವರ ಗುಂಡ್ಕಲ್ ಹೇಳಿದ್ದು ಹೀಗೆ...
ಬಿಗ್ ಬಾಸ್ ಶುರುವಾಗಿ ಇವತ್ತಿಗೆ ಎಪ್ಪತ್ತೊಂದನೇ ದಿನ. ಪಿಸಿಆರ್ ನಲ್ಲಿ ನಿಂತು ಈ ಮನೇಲಿರೋ ಹನ್ನೊಂದು ಜನ ಓಡಾಡುತ್ತಿರುವುದನ್ನು ನೋಡಿದಾಗ ಒಂದಕ್ಕಿಂತ ಹೆಚ್ಚು ಭಾವನೆಗಳು ಒಂದೇ ಸಲಕ್ಕೆ ಬಂದು ಮನಸ್ಸಿಗೆ ವಿಚಿತ್ರವಾದ ತಳಮಳ. ಹೊರಗಡೆ ಎದುರಾಗಿರುವ ಕಷ್ಟದ ಸವಾಲು ಗೊತ್ತಿಲ್ಲದೇ ಒಳಗಡೆ ಇರುವವರೆಲ್ಲಾ ಖುಷಿಯಾಗಿದ್ದಾರೆ. ಐಸೋಲೇಷನ್ನಿನಲ್ಲಿ ಇರುವುದರಿಂದ ಸುರಕ್ಷಿತವಾಗಿಯೂ ಇದ್ದಾರೆ. ಎಲ್ಲರಿಗೂ ಹೊರಗಡೆ ಆಗಿರುವ ಬೆಳವಣಿಗೆ ತಿಳಿಸಿ ನಾಳೆ ಹೊರಗಡೆ ಕರೆಯುತ್ತಿದ್ದೇವೆ. ಅನಂತರ ಅವರನ್ನು ಮತ್ತು ತಂಡವನ್ನು ಸುರಕ್ಷಿತವಾಗಿ ಮನೆಗೆ ಕಳುಹಿಸಲು ವ್ಯವಸ್ಥೆ ಆಗುತ್ತಿದೆ.