-->
Covid Pkg not sufficient- ಸರಕಾರದ ಲಾಕ್ ಡೌನ್ ಪ್ಯಾಕೇಜ್ ಏನೇನೂ ಸಾಲದು: ಮುಸ್ಲಿಮ್ ಒಕ್ಕೂಟ

Covid Pkg not sufficient- ಸರಕಾರದ ಲಾಕ್ ಡೌನ್ ಪ್ಯಾಕೇಜ್ ಏನೇನೂ ಸಾಲದು: ಮುಸ್ಲಿಮ್ ಒಕ್ಕೂಟ






ಬಿ. ಎಸ್.ಯಡಿಯೂರಪ್ಪ ನೇತೃತ್ವದ ರಾಜ್ಯ ಬಿಜೆಪಿ ಸರಕಾರ ಘೋಷಿಸಿದ ಕೋವಿಡ್ ಪರಿಹಾರ ಪ್ಯಾಕೇಜ್ ಅಪೂರ್ಣವಾಗಿದ್ದು, ಲಾಕ್ ಡೌನ್ ಅವಧಿಯಲ್ಲಿ ಸಂಕಷ್ಟ ಗೊಂಡ ಕರ್ನಾಟಕದ ಸಾಮಾನ್ಯ ಜನತೆ ಮತ್ತು ವಲಸೆ ಕಾರ್ಮಿಕ ವರ್ಗದ ಜನರ ಹಸಿವು ಮತ್ತು ಅಗತ್ಯತೆ ನೀಗಿಸಲು ಏನೇನೂ ಸಾಲದಾಗಿದೆ ಎಂದು ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಹಾಗೂ ಮಾಜಿ ಮೇಯರ್ ಕೆ. ಅಶ್ರಫ್ ತಿಳಿಸಿದ್ದಾರೆ.



ಕರ್ನಾಟಕ ಸರ್ಕಾರ ಕಳೆದ ವರ್ಷದ ಲಾಕ್ ಡೌನ್ ಅವಧಿಯಲ್ಲಿ ಘೋಷಿಸಿದ ಪರಿಹಾರ ಮೊತ್ತವೇ ಇನ್ನೂ ಜನರಿಗೆ ತಲುಪಿಲ್ಲ. ಈ ಬಾರಿಯ ಪರಿಹಾರ ಕೂಡಾ ವಿಧಾನ ಸೌಧದ ಮೆಟ್ಟಿಲಲ್ಲಿ ಬಾಕಿಯಾಗಬಾರದು ಮತ್ತು ಪರಿಹಾರದ ಮೊತ್ತವನ್ನು ಹೆಚ್ಚು ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.







ಅರ್ಹ ಫಲಾನುಭವಿಗಳಿಗೆ ಪರಿಹಾರ ತಲುಪುವಂತಹ ವ್ಯವಸ್ಥೆ ಮಾಡಬೇಕು. ಸರ್ಕಾರಿ ನೌಕರರಿಗೆ ಘೋಷಿಸಿರುವ ಪರಿಹಾರ ಕೂಡಾ ಬಹಳ ಕಡಿಮೆಯಾಗಿದೆ. ಅದನ್ನು ಹೆಚ್ಚಿಸಬೇಕು. ಸಣ್ಣ ವ್ಯಾಪಾರಸ್ಥರು, ವೃತ್ತಿಪರರು, ಸಾಧಾರಣ ಆದಾಯ ಉಳ್ಳವರು, ಸ್ವ ಉದ್ಯೋಗಿಗಳು ಮತ್ತು ಮೀನುಗಾರರನ್ನು ಪರಿಹಾರ ಪಟ್ಟಿಯಿಂದ ಹೊರಗೆ ಇಡಲಾಗಿದೆ. ಪರಿಹಾರ ಘೋಷಣೆ ಅಪೂರ್ಣ ಮತ್ತು ಅವೈಜ್ಞಾನಿಕವಾಗಿದೆ ಎಂದು ಅವರು ಹೇಳಿದ್ದಾರೆ.




ಲಾಕ್ ಡೌನ್ ಸಂಕಷ್ಟಗಳನ್ನು ನಿಭಾಯಿಸುವಲ್ಲಿ ಸರಕಾರ ಸಂಪೂರ್ಣ ವಿಫಲವಾಗಿದೆ. ವಿವಿಧ ಪಕ್ಷಗಳ ನಾಯಕರು, ತಜ್ಞರು, ಆರೋಗ್ಯ ಮುಖ್ಯಸ್ಥರು ಕೋರೋಣ ನಿಯಂತ್ರಣಕ್ಕೆ ಲಾಕ್ ಡೌನ್ ಏಕೈಕ ಪರಿಹಾರವಲ್ಲ ಎಂದು ಪದೇ ಪದೇ ಹೇಳುತ್ತಿದ್ದರೂ ಕೂಡಾ ಸರಕಾರ ಲಾಕ್ ಡೌನ್ ಗೆ ತಕ್ಕ ವ್ಯವಸ್ಥೆ ಮಾಡದೆ ಜನರ ಜೀವನವನ್ನು ಬೀದಿಗೆ ತಳ್ಳಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.



ಜವುಳಿ, ಫ್ಯಾನ್ಸಿ ಮತ್ತು ಚಪ್ಪಲಿ ಹಾಗೂ ಇನ್ನಿತರ ವ್ಯಾಪಾರಸ್ಥರ ಬವಣೆಯನ್ನು ಅರಿತು ಅವರೀಗೂ ಪ್ರತಿದಿನ ಒಂದು ಸೀಮಿತ ಅವಧಿ ನಿಗದಿ ಮಾಡಿ ವ್ಯಾಪಾರ ಮಾಡಲು ಅವಕಾಶ ಕಲ್ಪಿಸಬೇಕಾಗಿದೆ. ಎಂದು ಅಶ್ರಫ್ ರವರು ಅಭಿಪ್ರಾಯಿಸಿದ್ದಾರೆ.

Ads on article

Advertise in articles 1

advertising articles 2

Advertise under the article