
cricket betting- bookies arrested | ಐಪಿಎಲ್ ಬೃಹತ್ ಕ್ರಿಕೆಟ್ ಬೆಟ್ಟಿಂಗ್ ಜಾಲ ಪತ್ತೆ: ಆರು ಬುಕ್ಕಿಗಳ ಬಂಧನ
ಆರು ಮಂದಿ ಕುಖ್ಯಾತ ಬುಕ್ಕಿಗಳ ಬಂಧನ
ಸಿ.ಸಿ.ಬಿ, ಇ & ನಾ ಕ್ರೈಂ ಪೊಲೀಸರ ಮಹತ್ವದ ಕಾರ್ಯಾಚರಣೆ
ಮಹತ್ವ ಕಾರ್ಯಾಚರಣೆಯೊಂದರಲ್ಲಿ ಮಂಗಳೂರು ಪೊಲೀಸರು ಆರು ಮಂದಿ ಕುಖ್ಯಾತ ಕ್ರಿಕೆಟ್ ಬುಕ್ಕಿಗಳನ್ನು ಬಂಧಿಸಿದ್ದಾರೆ.
ಈ ದಂಧೆಯನ್ನು ಆಪ್‌ಗಳ ಮೂಲಕ ಅವರು ನಡೆಸುತ್ತಿದ್ದರು. ಮುಂಬೈ, ಆಂಧ್ರದ ವಿಶಾಖಪಟ್ಟಣ ಸೇರಿದಂತೆ ಹೊರ ರಾಜ್ಯದಿಂದ ಈ ದಂಧೆಯನ್ನು ನಡೆಸಲಾಗುತ್ತಿತ್ತು ಎಂದು ಪೊಲೀಸರು ಹೇಳೀದ್ಧಾರೆ.
ಮಂಗಳೂರು ನಗರದ ಸಿ.ಸಿ.ಬಿ ಮತ್ತು ಇಕೋನಾಮಿಕ್ & ನಾರ್ಕೊಟಿಕ್ ಕ್ರೈಂ ಪೊಲೀಸ್ ಠಾಣಾ ಅಧಿಕಾರಿ ಮತ್ತು ಸಿಬ್ಬಂದಿಗಳು ಆರೋಪಿಗಳನ್ನು ಬಂಧಿಸುವ ಈ ಮಹತ್ವದ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಈಗಾಗಲೇ ಆರು ಬುಕ್ಕಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಮಂಗಳೂರು ಕುಂಪಲದ ವಿಕ್ರಂ, ಕೃಷ್ಣಾಪುರದ ಧನಪಾಲ ಶೆಟ್ಟಿ, ಸುರತ್ಕಲ್ ನಿವಾಸಿ ಮೂಲತಃ ರಾಜಸ್ತಾನ್‌ನ ಕಮಲೇಶ್, ಮುಂಬೈ ಮೂಲದ ಗಿರೀಶ್ ಶೆಟ್ಟಿ, ಅಶೋಕನಗರದ ಪ್ರೀತೇಶ್ ಯಾನೆ ಪ್ರೀತಮ್, ಉರ್ವ ಮಾರಿಗುಡಿ ನಿವಾಸಿ ಅವಿನಾಶ್ ಎಂದು ಗುರುತಿಸಲಾಗಿದೆ.
ಆರೋಪಿಗಳನ್ನು ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿ ದಸ್ತಗಿರಿ ಮಾಡಲಾಗಿದೆ. ಬಂಧಿತರು ಸ್ಥಳೀಯರನ್ನು ಬಳಸಿ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದರು. ಅವರಿಂದ ಬ್ಯಾಂಕ್ ಖಾತೆಗಳನ್ನು ತೆರೆದು ವ್ಯವಹಾರ ಮಾಡುತ್ತಿದ್ದರು.
ಆಕ್ಸಿಸ್ ಬ್ಯಾಂಕ್, ಕರ್ನಾಟಕ ಬ್ಯಾಂಕ್ ಹಾಗೂ ಎಚ್‌ಡಿಎಫ್‌ಸಿ ಬ್ಯಾಂಕ್ ಗಳಲ್ಲಿ ಸುಮಾರು 20ಕ್ಕೂ ಹೆಚ್ಚು ಖಾತೆಗಳನ್ನುತೆರೆಯಲಾಗಿತ್ತು.
ಆರೋಪಿಗಳಿಂದ ಸುಮಾರು 20 ಲಕ್ಷ ರೂ. ಹಣ, ಮೂರು ಲಕ್ಷ ರೂ ನಗದು, ಆನ್‌ಲೈನ್ ಗೇಮ್ ಸಲುವಾಗಿ ಉಪಯೋಗಿಸುತ್ತಿದ್ದ 10 ಮೊಬೈಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ.