
Daya Nayak | ಎನ್‍ಕೌಂಟರ್ ಸ್ಪೆಷಲಿಸ್ಟ್ ಪೊಲೀಸ್ ದಯಾ ನಾಯಕ್ ಮುಂಬೈನಿಂದ ವರ್ಗಾವಣೆ
ಮುಂಬಯಿ: ಮಹಾನಗರ ಮುಂಬಯಿಯ ಭಯೋತ್ಪಾದನಾ ನಿಗ್ರಹ ದಳದ (ಎಟಿಎಸ್) ಇಲಾಖೆಯಲ್ಲಿ ಸೇವಾ ನಿರತ ಎನ್‍ಕೌಂಟರ್ ಪ್ರಸಿದ್ಧ ಪೊಲೀಸ್ ಅಧಿಕಾರಿ ದಯಾ ನಾಯಕ್ ಇವರನ್ನು ರಾಜ್ಯದ ನಾಗ್ಪುರಾ ವಿಭಾಗೀಯ ಗೊಂಡಿಯಾ ಜಿಲ್ಲೆಗೆ ವರ್ಗಾವಣೆ ಮಾಡಲಾಗಿದೆ.
ಎಟಿಎಸ್ ಪೊಲೀಸ್ ಇನ್ಸ್‍ಪೆಕ್ಟರ್ ದಯಾ ನಾಯಕ್ ಸೇರಿದಂತೆ ನಾಲ್ವರು ಇನ್ಸ್‍ಪೆಕ್ಟರ್‍ಗಳನ್ನು ಕಳೆದ ಗುರುವಾರ (ಮೇ.6) ಮುಂಬಯಿ
ನಿಂದ ಹೊರ ಜಿಲ್ಲೆಗಳಿಗೆ ವರ್ಗಾವಣೆ ಮಾಡಲಾಗಿ ರಾಜ್ಯದ ಹೆಚ್ಚುವರಿ ಮಹಾನಿರ್ದೇಶಕರ (ಅನುಷ್ಠಾನ) ಕಚೇರಿಯಿಂದ ಅಧಿಕೃತ ಆದೇಶ ಹೊರಡಿಸಿದೆ. ನಾಯಕ್ ಗೊಂಡಿಯಾ ಪೊಲೀಸ್ರ ಉಸ್ತುವಾರಿ ವಹಿಸಲಿದ್ದಾರೆ ಎಂದು ಇಲಾಖೆ ತಿಳಿಸಿದೆ. ಬೃಹನ್ಮುಂಬಯಿ ಪೊಲೀಸ್ ಮಹಾನಿರ್ದೇಶಕರ ಕಚೇರಿ ಮುಂಬಯಿ ಮತ್ತು ಥಾಣೆ ನಗರಗಳಿಂದ ಪ್ರಮುಖ ಇನ್ಸ್‍ಪೆಕ್ಟರ್ ಮಟ್ಟದ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಹೊಸ ಆದೇಶಗಳನ್ನು ಹೊರಡಿಸಿದೆ.
ದಯಾ ನಾಯಕ್ ಸೇರಿದಂತೆ ಇಬ್ಬರು ಪೊಲೀಸ್ ಇನ್ಸ್‍ಪೆಕ್ಟರ್‍ಗಳನ್ನು ವರ್ಗಾಯಿಸಲು ರಾಜ್ಯ ಸರ್ಕಾರ ಗುರುವಾರ ಸಂಜೆ ಆದೇಶ ಹೊರಡಿಸಿದೆ. ಪೊಲೀಸ್ ಎನ್‍ಕೌಂಟರ್‍ಗಳಲ್ಲಿ 80ಕ್ಕೂ ಹೆಚ್ಚು ಅಪರಾಧಿಗಳನ್ನು ನಿರ್ಮೂಲನೆ ಮಾಡಿ ನಾಯಕ್ ಪ್ರಸಿದ್ಧರಾಗಿದ್ದಾರೆ.
ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿಯ ಮನೆ ಬಳಿ ಜಿಲೆಟಿನ್ ಕಡ್ಡಿಗಳನ್ನು ಪತ್ತೆ ಮಾಡವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಘಟನೆ ಮತ್ತು ಸ್ಕಾರ್ಪಿಯೋ ಕಾರು ಮಾಲೀಕ ಮಾನ್ಸುಖ್ ಹಿರೆನ್ ಹತ್ಯೆಯ ಪ್ರಕರಣದ ತನಿಖೆ ನಡೆಸುತ್ತಿದ್ದ ನಾಯಕ್ ಅವರನ್ನು ಗೊಂಡಿಯಾಕ್ಕೆ ವರ್ಗಾಯಿಸಲಾಗಿದೆ. ಹಿರೇನ್ ಕೊಲೆ ಪ್ರಕರಣದ ಎಟಿಎಸ್ ತನಿಖೆ ನಡೆಸುತ್ತಿದ್ದ ದಯಾ ನಾಯಕ್, ಅದು ಈಗ ರಾಷ್ಟ್ರೀಯ ತನಿಖಾ ಸಂಸ್ಥೆಯಲ್ಲಿದೆ.
ದಯಾ ನಾಯಕ್ ಆಂಟಿಲಿಯಾ ಬಾಂಬ್ ಪ್ರಕರಣದ ತನಿಖೆ ನಡೆಸುತ್ತಿರುವ ಎಟಿಎಸ್ ತನಿಖಾ ತಂಡದ ಭಾಗವಾಗಿದ್ದರು ಮತ್ತು ಥಾಣೆ ವ್ಯಾಪಾರಿ ಮನ್ಸುಖ್ ಹಿರಾನ್ ಅವರ ಹತ್ಯೆ ಆರೋಪದಲ್ಲಿ ಅಧಿಕಾರಿ ಸಚಿನ್ ವಾಜೆಗೆ ವ್ಯವಸ್ಥಾಪಕ ಬೆಂಬಲವನ್ನು ನೀಡಿದ್ದಕ್ಕಾಗಿ ಇಬ್ಬರು ಆರೋಪಿಗಳಾದ ಬುಕ್ಕಿ ನರೇಶ್ ಗೋರ್ ಮತ್ತು ಮಾಜಿ ಪೊಲೀಸ್ ಕಾನ್‍ಸ್ಟ್ಟೇಬಲ್ ವಿನಾಯಕ್ ಶಿಂಧೆ ಅವರನ್ನು ಬಂಧಿಸಿದ್ದರು. ಭಯೋತ್ಪಾದನಾ ನಿಗ್ರಹ ದಳದ (ಎಟಿಎಸ್) ಜುಹು ಘಟಕದೊಂದಿಗೆ ನೇಮಕಗೊಂಡ ನಾಯಕ್ ಅವರನ್ನು ಗೊಂಡಿಯಾ ಜಿಲ್ಲೆಗೆ ವರ್ಗಾಯಿಸಲಾಗಿದ್ದು, ಥಾನೆ ಪೊಲೀಸ್ರ ಸುಲಿಗೆ-ವಿರೋಧಿ ಕೋಶದ (ಎಇಸಿ) ಪೊಲೀಸ್ ಇನ್ಸ್‍ಪೆಕ್ಟರ್ ರಾಜಕುಮಾರ್ ಕೋಥ್‍ಮಿರೆ ಅವರನ್ನು ಮಾವೋವಾದಿ ಪೀಡಿತ ಗಡ್ಚಿರೋಲಿ ಜಿಲ್ಲೆಗೆ ವರ್ಗಾಯಿಸಲಾಗಿದೆ. ಆಡಳಿತಾತ್ಮಕ ಆಧಾರದ ಮೇಲೆ ಎರಡೂ ಅಧಿಕಾರಿಗಳನ್ನು ವರ್ಗಾಯಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಒಂದು ನಿರ್ದಿಷ್ಟ ಹುದ್ದೆಯಲ್ಲಿ ಪೊಲೀಸ್ ಅಧಿಕಾರಿಗಳ ಸಾಮಾನ್ಯ ಅಧಿಕಾರಾವಧಿ ಮೂರು ವರ್ಷಗಳು ಆದರೆ ಮಹಾರಾಷ್ಟ್ರ ಪೊಲೀಸ್ ಕಾಯ್ದೆಯ ಪ್ರಕಾರ, ಮುಂಬಯಿ ಕಮಿಷನರೇಟ್‍ನಲ್ಲಿ ಎಂಟು ವರ್ಷ ಸೇವೆ ಸಲ್ಲಿಸಿದ ಪೊಲೀಸ್ ಅಧಿಕಾರಿಗಳು ನಗರದಿಂದ ಹೊರಗೆ ಹೋಗಬೇಕಾಗುತ್ತದೆ. ಆದರೆ ಜಿಲ್ಲೆಯ ಯಾವುದೇ ಪೊಲೀಸ್ ಮುಂಬಯಿನಲ್ಲಿ ಕೆಲಸ ಮಾಡಲು ಬಯಸುವುದಿಲ್ಲ ಅಥವಾ ಕುಟುಂಬದ ವಿವಿಧ ಜವಾಬ್ದಾರಿಗಳಿಂದಾಗಿ ಮುಂಬಯಿ ಕಚೇರಿಯಲ್ಲಿ ಜಿಲ್ಲೆಗಳಲ್ಲಿ ಕೆಲಸ ಮಾಡಲು ಇಷ್ಟಪಡುವುದಿಲ್ಲ ಆದರೂ ಗೃಹ ಇಲಾಖೆಯ ಕಾನೂನು ಮತ್ತು ಸೇವಾ ಅಧಿಕಾರಾವಧಿಯ ಷರತ್ತುಗಳನ್ವಯ ವರ್ಗಾವಣೆ ಮಾಡಲಾಗಿದೆ ಎನ್ನಲಾಗಿದೆ.
ದಯಾ ನಾಯಕ್ ಸೇರಿದಂತೆ ಇಬ್ಬರು ಪೊಲೀಸ್ ಇನ್ಸ್‍ಪೆಕ್ಟರ್‍ಗಳನ್ನು ವರ್ಗಾಯಿಸಲು ರಾಜ್ಯ ಸರ್ಕಾರ ಗುರುವಾರ ಸಂಜೆ ಆದೇಶ ಹೊರಡಿಸಿದೆ. ಪೊಲೀಸ್ ಎನ್ ಕೌಂಟರ್‍ಗಳಲ್ಲಿ 80ಕ್ಕೂ ಹೆಚ್ಚು ಶಂಕಿತ ಅಪರಾಧಿಗಳನ್ನು ಗುಂಡಿಟ್ಟು ಕೊಂದು ನಾಯಕ್ ಪ್ರಸಿದ್ಧರಾಗಿದ್ದಾರೆ.