MRPL Job process stayed?- ಸ್ಥಳೀಯರಿಗಿಲ್ಲ MRPL ಉದ್ಯೋಗ: ನಳಿನ್ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ, ನೇಮಕಾತಿಗೆ ತಡೆ?
MRPLನಲ್ಲಿ ಇತ್ತೀಚೆಗೆ ಸುಮಾರು 200 ಕ್ಕೂ ಹೆಚ್ಚು ವಿವಿಧ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ನಡೆದಿದ್ದು, ಸದರಿ ನೇಮಕಾತಿಯಲ್ಲಿ ಕರ್ನಾಟಕದ ಹಾಗೂ ಸ್ಥಳೀಯ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ ಎಂಬ ಕೂಗು ಬಲವಾಗಿ ಕೇಳಿ ಬಂದಿದೆ.
ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್ ಅವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ ನಡೆಸಲಾಯಿತು.
ದಕ್ಷಿಣ ಕನ್ನಡ ಜಿಲ್ಲೆ ಉಸ್ತುವಾರಿ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ, ಸ್ಥಳಿಯ ಶಾಸಕ ಉಮಾನಾಥ ಕೋಟ್ಯಾನ್, ಡಾ. ಭರತ್ ಶೆಟ್ಟಿ ಹಾಗೂ ವೇದವ್ಯಾಸ ಕಾಮತ್ ಸಭೆಯಲ್ಲಿ ಭಾಗಿಯಾಗಿದ್ದರು.
ಎಂಆರ್ ಪಿಎಲ್ ನ ಆಡಳಿತ ನಿರ್ದೇಶರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಜನಪ್ರತಿನಿಧಿಗಳು ಸಭೆ ನಡೆಸಿದರು.
ಸ್ಥಳೀಯರಿಗಾದ ಆನ್ಯಾಯದ ಬಗ್ಗೆ ಎಂಆರ್ ಪಿಎಲ್ ಅಧಿಕಾರಿಗಳೊಂದಿಗೆ ಕೂಲಂಕುಷವಾಗಿ ಚರ್ಚಿಸಲಾಯಿತು ಹಾಗೂ ಸದರಿ ನೇಮಕಾತಿ ಪಟ್ಟಿಯನ್ನು ಕೂಡಲೇ ತಡೆಹಿಡಿಯಲು ಆದೇಶಿಸಲಾಗಿ ಎಂಆರ್ ಪಿಎಲ್ ಆಡಳಿತ ನಿರ್ದೇಶಕರು ಸದರಿ ನೇಮಕಾತಿಯನ್ನು ತಡೆಹಿಡಿಯಲು ಒಪ್ಪಿರುತ್ತಾರೆ.
ನೇಮಕಾತಿಯ ಮುಂದಿನ ಪ್ರಕ್ರಿಯೆಯನ್ನು ಸಂಸದರ, ಉಸ್ತುವಾರಿ ಸಚಿವರ ಹಾಗೂ ಸ್ಥಳೀಯ ಶಾಸಕರ ಮಾರ್ಗದರ್ಶನದಲ್ಲಿ ನಡೆಸಲು ಆದೇಶಿಸಲಾಯಿತು.