Karkala CEO - ಕಾರ್ಕಳ ಪುರಸಭೆ ಮುಖ್ಯಾಧಿಕಾರಿಯಾಗಿ ರೂಪಾ ಶೆಟ್ಟಿ ಅಧಿಕಾರ ಸ್ವೀಕಾರ
Monday, May 17, 2021
ಕಾರ್ಕಳ ಪುರಸಭೆಯ ನೂತನ ಮುಖ್ಯಾಧಿಕಾರಿಯಾಗಿ ಹಿರಿಯ ಶ್ರೇಣಿ ಕೆಎಎಸ್ ಅಧಿಕಾರಿ ರೂಪ ಶೆಟ್ಟಿ ಅಧಿಕಾರ ಸ್ವೀಕರಿಸಿದ್ದಾರೆ. ಪುರಸಭೆಯ ಉಪಾಧ್ಯಕ್ಷೆ ಪಲ್ಲವಿ ಹಾಗೂ ಪುರಸಭೆಯ ಸಿಬ್ಬಂದಿ ನೂತನ ಮುಖ್ಯಾಧಿಕಾರಿಯನ್ನು ಹೂಗುಚ್ಛ ನೀಡಿ ಸ್ವಾಗತಿಸಿದರು.
ಪುತ್ತೂರು ನಗರಸಭೆಯ ಆಯುಕ್ತರಾಗಿ ನಾಲ್ಕೂವರೆ ವರ್ಷಗಳ ಕಾಲ ಅವರು ಸೇವೆ ಸಲ್ಲಿಸಿ ಅವರು ಕಾರ್ಕಳ ಪುರಸಭೆಗೆ ವರ್ಗಾವಣೆಗೊಂಡಿದ್ದಾರೆ. ಈ ಹಿಂದೆ, ಮಂಗಳೂರು ಮಹಾನಗರ ಪಾಲಿಕೆ, ಉಳ್ಳಾಲ ಪುರಸಭೆ ಸಹಿತ ಹಲವು ಕಡೆಗಳಲ್ಲಿ ಅವರು ಸೇವೆ ಸಲ್ಲಿಸಿದ್ಧಾರೆ.
ಕಾರ್ಕಳ ಪುರಸಭೆಯ ಮುಖ್ಯಾಧಿಕಾರಿಯಾಗಿದ್ದ ರೇಖಾ ಜೆ. ಶೆಟ್ಟಿ ಅವರು ವರ್ಗಾವಣೆಗೊಂಡಿದ್ದು, ಅವರಿಂದ ತೆರವಾದ ಸ್ಥಾನವನ್ನು ರೂಪ ಶೆಟ್ಟಿ ಭರ್ತಿ ಮಾಡಿರುತ್ತಾರೆ.