-->
Actress Krithi Shetty- ಸ್ಟಾರ್ ನಟನ ಚಿತ್ರಕ್ಕೆ ಒಲ್ಲೆ ಎಂದ ಕೃತಿ ಶೆಟ್ಟಿ- ಉಪ್ಪೇನ ಯಶಸ್ವಿ ಬಳಿಕ ಚ್ಯೂಸಿಯಾದ ಕುಡ್ಲದ ಬೆಡಗಿ

Actress Krithi Shetty- ಸ್ಟಾರ್ ನಟನ ಚಿತ್ರಕ್ಕೆ ಒಲ್ಲೆ ಎಂದ ಕೃತಿ ಶೆಟ್ಟಿ- ಉಪ್ಪೇನ ಯಶಸ್ವಿ ಬಳಿಕ ಚ್ಯೂಸಿಯಾದ ಕುಡ್ಲದ ಬೆಡಗಿ





ತೆಲುಗಿನ ಸೂಪರ್ ಡ್ಯೂಪರ್ ಹಿಟ್ ಉಪ್ಪೇನ ಫಿಲ್ಮ್ ಮೂಲಕ ರಾಷ್ಟ್ರದಾದ್ಯಂತ ಮನೆ ಮಾತಾದ ಕುಡ್ಲದ ಕುವರಿ ಕೃತಿ ಶೆಟ್ಟಿ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.



ಮೊದಲ ಚಿತ್ರವೇ ಸೂಪರ್ ಹಿಟ್ ಆಗಿರುವುದರಿಂದ ಕೃತಿ ಶೆಟ್ಟಿ ಭಾರೀ ಚ್ಯೂಸಿಯಾಗಿದ್ದಾರೆ. ಅವರು ಎಷ್ಟರಮಟ್ಟಿಗೆ ಚ್ಯೂಸಿಯಾಗಿದ್ಧಾರೆ ಎಂದರೆ ಸ್ಟಾರ್ ನಟರ ಸಿನಿಮಾ ಆಫರ್‌ಗಳನ್ನೇ ತಿರಸ್ಕರಿಸಿದ್ದಾರೆ.



ಕೃತಿ ಶೆಟ್ಟಿ ಉಪ್ಪೇನ ಮೂಲಕ ಟಾಲಿವುಡ್‌ನಲ್ಲಿ ಮನೆ ಮಾತಾಗಿದ್ದಾರೆ. ಉಪ್ಪೇನ ಸೂಪರ್ ಹಿಟ್ ಆದ ಬೆನ್ನಲ್ಲೇ ಈ ಚೆಲುವೆಯ ಮನೆ ಬಾಗಿಲಿಗೆ ಅವಕಾಶಗಳ ಮಹಾಪೂರವೇ ಹರಿದುಬರುತ್ತಿದೆ.








ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಂಡಿರುವ ಕೃತಿ, ಇದೀಗ ತೆಲುಗು ನಟ ಸಾಯಿಧರಮ್ ತೇಜ ಅವರ ಸಿನಿಮಾ ಆಫರ್‌ನ್ನು ರಿಜೆಕ್ಟ್ ಮಾಡಿದ್ಧಾರೆ.


ಸಾಯಿ ಧರಮ್ ತೇಜ ಅವರ ಮುಂದಿನ ಚಿತ್ರವನ್ನು ಬಿವಿಎಸ್ ಎನ್ ಪ್ರಸಾದ್ ನಿರ್ಮಾಣ ಮಾಡುತ್ತಿದ್ದಾರೆ. ಕಾರ್ತಿಕ್ ಎಂಬ ಹೊಸ ಪ್ರತಿಭೆ ಡೈರೆಕ್ಷನ್ ಮಾಡಲಿದ್ದಾರೆ. ಈ ಸಿನಿಮಾಗೆ ನಾಯಕಿ ಆಗುವಂತೆ ಕೃತಿ ಶೆಟ್ಟಿ ಅವರಿಗೆ ಆಫರ್ ಮಾಡಲಾಗಿತ್ತು.


ಮೊದಲ ಚಿತ್ರವೇ ಬ್ಲಾಕ್ ಬಸ್ಟರ್ ಆಗಿರುವುದರಿಂದ ಕೃತಿ ಬಹಳ ಎಚ್ಚರಿಕೆಯಿಂದ ತಮ್ಮ ಮುಂದಿನ ಚಿತ್ರಗಳನ್ನು ಒಪ್ಪಿಕೊಳ್ಳಬೇಕು ಎಂದು ನಿರ್ಧಾರ ಮಾಡಿದ್ದಾರಂತೆ. ಅದಕ್ಕಾಗಿ ಅಳೆದೂ ತೂಗಿ ಹೊಸ ಸಿನಿಮಾಗಳನ್ನು ಆಯ್ಕೆ ಮಾಡುತ್ತಿದ್ದಾರೆ.



ಈ ಕಾರಣದಿಂದಲೇ ಸಾಯಿ ತೇಜ ಸಿನಿಮಾವನ್ನು ರಿಜೆಕ್ಟ್ ಮಾಡಿದ್ದಾರೆ ಎಂದು ಅವರು ಕಮರ್ಷಿಯಲ್ ಮ್ಯಾನೇಜರ್ ಹೇಳಿದ್ದಾರೆ.



ಇದೇ ವೇಳೆ, ಡೇಟ್ ಹೊಂದಾಣಿಕೆ ಆಗದಿರುವುದರಿಂದ ಆಫರ್‌ ತಿರಸ್ಕರಿಸಿದ್ದೇನೆ ಎಂದು ಕೃತಿ ಶೆಟ್ಟಿ ಹೇಳಿಕೊಂಡಿದ್ದಾರೆ.

Ads on article

Advertise in articles 1

advertising articles 2

Advertise under the article