CM Change? Is BJP is devided house?- ಸಂಪುಟ ಸಭೆಯಲ್ಲಿ ಕಮಲದಲ್ಲಿ ಕಂಪನ: ಯೋಗೀಶ್ವರ್ ಮುಖ ನೋಡದ ಬಿಎಸ್‌ವೈ
ರಾಜ್ಯ ರಾಜಕೀಯದಲ್ಲಿ ಮತ್ತೆ ಬಿರುಸಿನ ಚಟುವಟಿಕೆ ಆರಂಭವಾಗಿದೆ. ಬಿಜೆಪಿಯಲ್ಲಿ ತಳಮಳ ಉಂಟಾಗಿದ್ದು, ಸಚಿವ ಸಂಪುಟ ಸಭೆಯಲ್ಲಿ ಬಿಜೆಪಿಯೊಳಗಿನ ಬಿರುಕು ಸ್ಪಷ್ಟವಾಗಿ ಮೂಡಿದಂತಾಗಿದೆ. ಸ್ವತಃ ಬಿ.ಎಸ್. ಯಡಿಯೂರಪ್ಪ ಅವರು ಯೋಗೀಶ್ವರ್ ಅವರ ಮುಖವನ್ನೂ ನೋಡಿಲ್ಲ. ಮಾತಿಲ್ಲ ಕಥೆಯಿಲ್ಲ.
ಆದರೆ, ಸಚಿವ ಸಂಪುಟದ ಬಹುತೇಕ ಎಲ್ಲ ಸದಸ್ಯರು ಸಿಎಂ ಯಡಿಯೂರಪ್ಪ ಅವರ ಬದಲಾವಣೆ ಆಗುವುದಿಲ್ಲ ಎಂದು ಒಕ್ಕೊರಳಿನಿಂದ ಹೇಳಿದ್ಧಾರೆ.
ಆದರೆ, ಬಿಜೆಪಿ ಶಾಸಕರಲ್ಲಿ ಸುಮಾರು 40 ಮಂದಿ ನಾಯಕತ್ವ ಬದಲಾವಣೆ ಕೋರಿ ಸಹಿ ಸಂಗ್ರಹ ಮಾಡಿದ್ದಾರೆ ಎನ್ನಲಾಗಿದೆ.
ಆದರೆ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಸೇರಿದಂತೆ ಎಲ್ಲರೂ ಯಡಿಯೂರಪ್ಪ ಅವರ ಬದಲಾವಣೆ ಇಲ್ಲ ಎಂದು ಸ್ಪಷ್ಟ ಧ್ವನಿಯಲ್ಲಿ ಹೇಳಿದ್ದಾರೆ.
ಸಿ.ಪಿ. ಯೋಗೀಶ್ವರ್ ಅವರ ಹೇಳಿಕೆಗಳಿಗೆಲ್ಲ ಬಿಜೆಪಿಯಲ್ಲಿ ಉತ್ತರ ನೀಡಲು ಆಗುವುದಿಲ್ಲ. ಅವರು ಎಷ್ಟರಮಟ್ಟಿಗೆ ಬಿಜೆಪಿಯನ್ನು ರಾಜ್ಯದಲ್ಲಿ ಕಟ್ಟಿಬೆಳೆಸಿದ್ದಾರೆ ಎಂದು ಎಲ್ಲರಿಗೂ ಗೊತ್ತಿದೆ. ಸಿಎಂ ಬದಲಾವಣೆ ಬಗ್ಗೆ ಮಾತನಾಡುವಷ್ಟು ಅವರು ದೊಡ್ಡವರಲ್ಲ ಎಂದು ಬಿಎಸ್‌ವೈ ಪರ ಹರತಾಳು ಹಾಲಪ್ಪ ಬ್ಯಾಟಿಂಗ್ ಮಾಡಿದ್ದಾರೆ.
ನೀವು ವೈಯಕ್ತಿಕವಾಗಿ ಎಷ್ಟೇ ದೊಡ್ಡವರಿರಬಹುದು. ಬೇರೆ ಬೇರೆ ಉನ್ನತ ಸ್ಥಾನಮಾನ ಪಡೆದಿರಬಹುದು. ಆದರೆ, ನಿಮಗೆ ರಾಜಕೀಯ ಪ್ರಜ್ಞೆ ಎಷ್ಟಿದೆ ಎಂಬ ಪ್ರಶ್ನೆ ಎದ್ದಿದೆ ಎಂದು ಮಾರ್ಮಿಕವಾಗಿ ಅವರು ನುಡಿದರು.
ಇದೇ ವೇಳೆ, ಶಾಸಕ ರಾಜು ಗೌಡ ಕೂಲ ಯೋಗೀಶ್ವರ್ ವಿರುದ್ದ ಕೆಂಡ ಕಾರಿದ್ಧಾರೆ. ಕೆಂಪು ಗೂಟದ ಕಾರು ಬೇಕು, ಸಿಎಂ ಯಡಿಯೂರಪ್ಪ ಬೇಡವೇ? ಎಂದು ಖಾರವಾಗಿ ಪ್ರಶ್ನಿಸಿದ ಅವರು, ನಾವು ಅವತ್ತೇ ಹೆಳಿದ್ದೆವು, ಬ್ಲ್ಯಾಕ್ ಮೇಲರ್‌ಗಳಿಗೆಲ್ಲ ಸಂಪುಟದಲ್ಲಿ ಸ್ಥಾನ ನೀಡಬಾರದು ಎಂದು... ಆದರೆ, ಅವರು ನಮ್ಮ ಮಾತನ್ನು ಕೇಳಿಲ್ಲ. ಈಗ ಈ ರೀತಿ ಆಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.