
Petrol Rate hike since 3 days | ಸತತ ಮೂರನೇ ದಿನವೂ ತೈಲ ಬೆಲೆ ಏರಿಕೆ: ಲಾಕ್‌ಡೌನ್ ಜೊತೆ ದುಬಾರಿಯಾಯ್ತು ಜೀವನ!
ಸತತ ಮೂರನೇ ದಿನವೂ ತೈಲ ಬೆಲೆ ಏರಿಕೆ
ಲಾಕ್‌ಡೌನ್ ಜೊತೆ ದುಬಾರಿಯಾಯ್ತು ಜೀವನ!
ದೇಶಾದ್ಯಂತ ಲಾಕ್‌ಡೌನ್‌ನಿಂದ ಜನತೆ ತತ್ತರಿಸಿದ್ದು, ಕೋವಿಡ್ 19 ಎರಡನೇ ಅಲೆಯ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಈ ಮಧ್ಯೆ, ಕಂಗೆಟ್ಟ ಜನಜೀವನಕ್ಕೆ ಮತ್ತಷ್ಟು ಸಂಕಷ್ಟ ಎದುರಾಗಿದ್ದು, ಸತತ ಮೂರನೇ ದಿನವೂ ತೈಲ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ.
ದೆಹಲಿಯಲ್ಲಿ ಪೆಟ್ರೋಲ್ ದರ ಲೀಟರಿಗೆ 25 ಪೈಸೆ ಹೆಚ್ಚಗಿದೆ. ಒಂದು ಲೀಟರ್ ಪೆಟ್ರೋಲಿಗೆ ರೂ. 90.99 ಹಾಗೂ ಪ್ರತಿ ಲೀಟರ್‌ಗೆ ಡೀಸೆಲ್‌ಗೆ 30 ಪೈಸೆ ಹೆಚ್ಚಿದ್ದು, 81.42 ರೂ ಆಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಆಗಿರುವ ವ್ಯತ್ಯಾಸದಿಂದ ಈ ದರ ಬದಲಾವಣೆ ಆಗಿದೆ ಎಂದು ತೈಲ ಕಂಪೆನಿಗಳು ಹೇಳಿವೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್ ದರ 24 ಪೈಸೆಗಳಷ್ಟು ಹೆಚ್ಚಾಗಿದ್ದು, ಪ್ರತೀ ಲೀಟರ್ ಪೆಟ್ರೋಲ್ ದರ 94.01 ಆಗಿದೆ. ಇನ್ನು ಪ್ರತಿ ಲೀಟರ್ ಡೀಸೆಲ್ ಬೆಲೆ 30 ಪೈಸೆಗಳಷ್ಟು ಹೆಚ್ಚಾಗಿದ್ದು, ರೂ. 86.31 ಆಗಿದೆ. ಕಳೆದ ಮೂರು ದಿನಗಳಲ್ಲಿ ಪೆಟ್ರೋಲ್ ದರದಲ್ಲಿ ಸುಮಾರು 60 ಪೈಸೆ ಹಾಗೂ ಡೀಸಲ್ ದರದಲ್ಲಿ ಸುಮಾರು 71 ಪೈಸೆ ಹೆಚ್ಚಾಗಿದೆ.
ಅಂತೂ ಜನ ಮಾತ್ರ ಎಲ್ಲ ಕಡೆಯಿಂದಲೂ ಆರ್ಥಿಕವಾಗಿ ಸಂಕಷ್ಟಕ್ಕೀಡಾಗಿದ್ದಾರೆ.