Pumpwell Troll - ಅಂದು ಪಂಪವೆಲ್ ಗೆ ಬಲೆ! ಇಂದು ಪಂಪವೆಲ್ ಗೆ ಬರೋಚ್ಚಿ !!
ಇಂದು ಪಂಪವೆಲ್ ನೀರಿನಲ್ಲಿ ತೇಲಾಡುತ್ತಿದೆ. ಪಂಪವೆಲ್ ಮಾರ್ಗವಾಗಿ ಹೋಗುವವರು ಬೇರೆದಾರಿ ಹುಡುಕುವುದು ಉತ್ತಮ. ಯಾಕೆಂದರೆ ಪಂಪವೆಲ್ ಮೇಲ್ಸೆತುವೆ ಅಡಿಯಲ್ಲಿ ನೀರುತುಂಬಿ ವಾಹನ ಸವಾರರು ಪರದಾಡುತ್ತಿದ್ದಾರೆ. ಪಂಪವೆಲ್ ಪ್ಲೈಒವರ್ ಆಗುವಾಗಲೂ ನಮ್ಮದು ಅವಸ್ಥೆ !
ಈಗ ಆದಮೇಲೂ ದುರವಸ್ಥೆ. ಒಟ್ಟು ನಮ್ಮೂರಿನ ಹಣೆಬರಹ ಸರಿ ಇಲ್ಲವಾ ಅಂತ ಅನುಸುತ್ತೆ. ಪ್ಲೈಒವರ್ ದಶಮಾನೋತ್ಸವ ಆಚರಿಸಿಕೊಂಡ ಬಳಿಕ ಅಳುತ್ತ ಅಳುತ್ತ ಉದ್ಘಾಟನಾ ಭಾಗ್ಯ ಕಂಡಿದ್ದ ಮೇಲ್ಸೇತುವೆ ಅಂದು ಪಂಪವೆಲ್ ಗೆ ಬಲೆ! ಎಂದು ಪ್ರಸಿದ್ಧಿಯಾಗಿದ್ದರೆ ಇಂದು ತನ್ನ ಕಳಪೆ ಕಾಮಗಾರಿಯಿಂದಾಗಿ ಮಂಗಳೂರಿನ ಜನರ ಬಾಯಲ್ಲಿ ಪಂಪವೆಲ್ ಗೆ ಬರೋಚ್ಚಿ!! ಎಂದು ಪ್ರಸಿದ್ದಿಯಗುತ್ತಿದೆ.
ಕಾರಣವಿಷ್ಟೆ! ನವಯುಗ ಎಂಬ ದರಿದ್ರ ಕಂಪನಿಯ ಬೇಜವಾಬ್ದಾರಿ, ದರಿದ್ರತನ, ಬುದ್ದಿಗೇಡಿತನದ ಹಾಗೂ ನಿಷ್ಕ್ರಿಯ ತನದ ಫಲವನ್ನು ಮಂಗಳೂರಿಗರು ಅನುಭವಿಸಬೇಕಿದೆ.
ಇದನ್ನೆಲ್ಲ ಗಮನಿಸಿ ಎಚ್ಚೆತ್ತುಕೊಂಡು ಆವಾಂತರಗಳನ್ನು ಸರಿಪಡಿಸಬೇಕಿದ್ದ ಜನಪ್ರತಿನಿಧಿಗಳು ಮಾತ್ರ ನಿದ್ದೆಮಾಡುತ್ತಿರುವುದು ನಮ್ಮೂರಿಗಿರುವ ಮತ್ತೊಂದು ಶಾಪ.
ಒಟ್ಟಿನಲ್ಲಿ ಹೇಳುವುದಾದ್ರೆ ಅಪ್ಪ ಅಮ್ಮನ ಜಗಳದಲ್ಲಿ ಕೂಸುಬಡವಾದಂತೆ.. ಹೀಗಾಗಿದೆ ಮಂಗಳೂರಿಗರ ಸ್ಥಿತಿಯಾಗಿದೆ.
ಬರಹ- ದಿಲ್‌ರಾಜ್ ಆಳ್ವ, ಸಾಮಾಜಿಕ ಕಾರ್ಯಕರ್ತರು