-->
Raitha Sangha Demand- ಕೃಷಿ ಕ್ಷೇತ್ರಕ್ಕೆ ಸರ್ಕಾರದ ಬೆಂಬಲ ಅಗತ್ಯ, ಪುನಶ್ಚೇತನ ಅನಿವಾರ್ಯ: ಮನೋಹರ ಶೆಟ್ಟಿ ಒತ್ತಾಯ

Raitha Sangha Demand- ಕೃಷಿ ಕ್ಷೇತ್ರಕ್ಕೆ ಸರ್ಕಾರದ ಬೆಂಬಲ ಅಗತ್ಯ, ಪುನಶ್ಚೇತನ ಅನಿವಾರ್ಯ: ಮನೋಹರ ಶೆಟ್ಟಿ ಒತ್ತಾಯ





ದ.ಕ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಭತ್ತ ಬೆಳೆಯುವ ಗದ್ದೆಗಳು ಧಾರಾಳವಾಗಿ ಹಡಿಲು ಬಿದ್ದಿದ್ದು ಈ ತನಕ ಸರಕಾರದ ನಿರ್ಲಕ್ಷ್ಯ ಧೋರಣೆಯಿಂದ ಭತ್ತ ಬೆಳೆಗಾರರು ಭತ್ತ ಬೆಳೆಯಿಂದ ವಿಮುಖರಾಗುತ್ತಿದ್ದಾರೆ ಎಂದು ಹಸಿರು ಸೇನೆ ರೈತ ಸಂಘ ಕೋಡಿಹಳ್ಳಿ ಬಣದ ರಾಜ್ಯ ಪ್ರಧಾನ ಕಾರ್ಯದರ್ಶಿ ಮನೋಹರ ಶೆಟ್ಟಿ ನಡಿಕಂಬಳಗುತ್ತು ಅವರು ವಿಷಾದ ವ್ಯಕ್ತಪಡಿಸಿದ್ದಾರೆ.



ಕೂಲಿಯಾಳುಗಳ ಕೊರತೆ, ಭತ್ತಕ್ಕೆ ಸರಿಯಾದ ಬೆಳೆ‌ ದೊರಕದಿರುವುದರಿಂದ ಈ ಭತ್ತ ಬೆಳೆ ಕ್ಷೇತ್ರದಲ್ಲಿ ಬಂಡವಾಳ ಹೊಡಿಕೆ ಮಾಡಲು ಹಿಂಜರಿದು ಗದ್ದೆಯನ್ನು ಹಡಿಲು ಬಿಟ್ಟಿದ್ದಾರೆ ಎಂದು ಅವರು ಹೇಳಿದ್ದಾರೆ.



ಪತ್ರಿಕೆಯಲ್ಲಿ ಪ್ರಕಟವಾದ ವರದಿಯಂತೆ ಜಿಲ್ಲೆಯ ಶಾಸಕರು ಹಾಗೂ ಉಸ್ತುವರಿ ಸಚಿವರು, ಮುಖ್ಯವಾಗಿ ತುಳುನಾಡು ಕೃಷಿ ಕ್ರಾಂತಿ ಹರಿಕಾರ, ಶಾಸಕ ಉಳಿಪಾಡಿಗುತ್ತು ರಾಜೇಶ್‌ ನಾಯ್ಕ್ ಇವರುಗಳ‌ ಅಭಿಪ್ರಾಯದಂತೆ ಉಭಯ ಜಿಲ್ಲೆಗಳಲ್ಲಿ ಕೆಂಪಕ್ಕಿ ಬೆಳೆದು ಸರಕಾರವೇ ನೇರವಾಗಿ ರೈತರಿಂದ ಖರೀದಿ ಮಾಡಿ ಉಭಯ ಜಿಲ್ಲೆಗಳ ಬಿಪಿಎಲ್ ಕಾರ್ಡ್ ದಾರರಿಗೆ ಈ ಅಕ್ಕಿಯನ್ನೆ ನೀಡುವುದು ಸ್ವಾಗತರ್ಹ ಯೋಚನೆಯಾಗಿದೆ..ಭತ್ತ ಬೆಳೆಗಾರರ ನೆರವಿಗೆ ಬಂದಂತಹ ಕರಾವಳಿ ಪ್ಯಾಕೇಜ್ ಸದ್ದುಗದ್ದಲ ಇಲ್ಲದೆ‌ ಮಾಯ‌ವಾಗಿರುತ್ತದೆ..ಇದರ ಬಗ್ಗೆ ಜಿಲ್ಲೆಯ ಉಸ್ತುವಾರಿ ಸಚಿವರನ್ನು ಮನವಿ ಮಾಡಿದರೂ ಅದು ಅರಣ್ಯರೋದನವಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.




ಭತ್ತ ಬೆಳೆಗಾರನ ಉದ್ಪದನ ವೆಚ್ಚವನ್ನು ಗಮನಿಸದೆ ಅವೈಜ್ಞಾನಿಕವಾಗಿ ಬೆಂಬಲ ಬೆಳೆ‌ ಘೋಷಿಸಿ ಭತ್ತ ಗಿರಣಿ ಮಾಲಿಕರ ಕಪಿಮುಷ್ಟಿಯಲ್ಲಿ ಸಿಲುಕಿದ ರೈತನನ್ನು ಪುನಃ ಭತ್ತ ಬೆಳೆಯುವಂತೆ ಪ್ರೋತ್ಸಹಿಸಲು ಸೂಕ್ತ ಯೋಜನೆಯನ್ನು ರೂಪಿಸಬೇಕೆಂದು ಕ.ರಾ ರೈತ ಸಂಘ,ಹಸಿರುಸೇನೆ ತ್ತಾಯಿಸುತ್ತದೆ..




ಭತ್ತ ಬೆಳೆಯುವ ರೈತರನ್ನು ಕೃಷಿ ಕಾರ್ಮಿಕರನ್ನು ನೆರಾಗಾ ಯೋಜನೆಯಡಿಯಲ್ಲಿ ತಂದು ಬೆಳೆದ ಭತ್ತವನ್ನು ಸರಕಾರವೇ ಗ್ರಾಮಮಟ್ಟದಲ್ಲಿ ಖರೀದಿಸಿ ಬಳಿಕ ಬಿಪಿಎಲ್ ಕಾರ್ಡ್ ದಾರರಿಗೆ, ಬಿಸಿ ಊಟದ ವಿದ್ಯಾರ್ಥಿಗಳಿಗೆ‌ ನೀಡಿದರೆ ದ.ಕ‌ ಜಿಲ್ಲೆಯ ಸಂಸ್ಕೃತಿಕ ಬೆಳೆ ಹಾಗೂ ರೈತ ಉಳಿಯುವುದರಲ್ಲಿ ಅನುಮಾನವಿಲ್ಲ ಎಂದು ಅವರು ಹೇಳಿದ್ದಾರೆ.



ಅದಲ್ಲದೆ ಸಿಬ್ಬಂದಿಗಳ ಕೊರತೆಯಿಂದ ನಿಶ್ಕೃಯಗೊಂಡ ಕೃಷಿ ಇಲಾಖೆಯನ್ನು ಪುನಶ್ಚೆತನಗೊಳಿಸುವುದು‌ ಅನಿವಾರ್ಯವಾಗಿದೆ ಎಂದು ಅವರು ಹೇಳಿದ್ದಾರೆ.

Ads on article

Advertise in articles 1

advertising articles 2

Advertise under the article