-->
Ravindra Shetty Ulidottu | ಮುಖ್ಯ ಮಂತ್ರಿ ಬದಲಾವಣೆ ವಿಚಾರ ಅಪ್ರಸ್ತುತ : ರವೀಂದ್ರ ಶೆಟ್ಟಿ

Ravindra Shetty Ulidottu | ಮುಖ್ಯ ಮಂತ್ರಿ ಬದಲಾವಣೆ ವಿಚಾರ ಅಪ್ರಸ್ತುತ : ರವೀಂದ್ರ ಶೆಟ್ಟಿ

 



ಒಂದು ಕಡೆ ಲೋಕವನ್ನೇ ಸಂಕಷ್ಟಕ್ಕಿಡುಮಾಡಿದ ಕಣ್ಣಿಗೆ ಕಾಣದ ಕೊರೋನಾ ವೈರಸ್, ಇನ್ನೊಂದು ಕಡೆ ಪ್ರವಾಹ, ಚಂಡಮಾರುತ ಭೀತಿಯನ್ನು ಎದುರಿಸುತ್ತಿರುವ ಈ ಕಠಿಣ ಸಂಧರ್ಭದಲ್ಲಿ ಬಹಳ ಜವಾಬ್ದಾರಿಯುತವಾಗಿ ಸರಕಾರವನ್ನು ನಡೆಸುತ್ತಿರುವ ಕರ್ನಾಟಕ ರಾಜಕೀಯ ಇತಿಹಾಸದಲ್ಲಿ ನುಡಿದಂತೆ ನಡೆಯುವ, ರೈತನಾಯಕ, ಜನಪರ ಯೋಜನೆಗಳನ್ನು ನೀಡಿದ ಕಲ್ಯಾಣ ಕರ್ನಾಟಕದ ಹರಿಕಾರ ಮಾನ್ಯ ಬಿ. ಎಸ್. ಯಡಿಯೂರಪ್ಪರವರನ್ನು ಬದಲಾಯಿಸುವ ವಿಚಾರ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಈಗ ಅಪ್ರಸ್ತುತ ಎಂದು ಕರ್ನಾಟಕ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವದಿ ನಿಗಮದ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು ಹೇಳಿದ್ದಾರೆ..


 ಇಂತಹ ಕಠಿಣ ಸಮಯದಲ್ಲಿ ರಾಜ್ಯವನ್ನು ಸುಭದ್ರವಾಗಿ, ದಕ್ಷ ಆಡಳಿತವನ್ನು ಜನರಿಗೆ ನೀಡುತ್ತಿರುವ ಮಾನ್ಯ ಮುಖ್ಯ ಮಂತ್ರಿಗಳ ಬದಲಾವಣೆ ವಿಚಾರ ಪಕ್ಷಕ್ಕೆ ಹಾಗೂ
ಸರಕಾರಕ್ಕೆ ಬಹಳ ಹೊಡೆತವನ್ನು ಕೊಡಬಹುದು, ಏಕೆಂದರೆ ಈಗಿನ ಸಂಕಷ್ಟದ ಪರಿಸ್ಥಿತಿಯಲ್ಲಿ ನಮ್ಮ ಮುಖ್ಯ ಮಂತ್ರಿಗಳು ಆಡಳಿತ ನಡೆಸುವ ರೀತಿಯನ್ನು ಇಡೀ ಜನ ಕೊಂಡಾಡುತ್ತಿರುವಾಗ ಅವರನ್ನು ಬದಲಾಯಿಸಬೇಕು ಎನ್ನುವ ವಿಚಾರವನ್ನು ಜನ ಬಹಳ ಸೂಕ್ಷ್ಮವಾಗಿ ಗಮನಿಸುತ್ತಿದ್ದು, ವಿರೋಧ ಪಕ್ಷದವರೇ ಹಿಂದಿನಿಂದ ಬಿ. ಎಸ್. ವೈ ಆಡಳಿತ ವೈಖರಿಯನ್ನು ಹೋಗಳುತ್ತಿರುವಾಗ ನಮ್ಮ ಪಕ್ಷದ ನಾಯಕರು ಇನ್ನಾದರೂ ನಾಯಕತ್ವ ಬದಲಾವಣೆ ವಿಚಾರವನ್ನು ಬಿಟ್ಟು ಮಾನ್ಯ ಮುಖ್ಯ ಮಂತ್ರಿಗಳ ಜೊತೆ ಸಹಕರಿಸಿ ಜನ ಸಮಾನ್ಯರ ಕಷ್ಟ ನಷ್ಟಗಳಿಗೆ ಸ್ಪಂದಿಸುವುದು ಅನಿವಾರ್ಯವಾಗಿದೆ ಎಂದು ಅವರು ಹೇಳಿದ್ದಾರೆ..







 ಬಿಜೆಪಿ ಪಕ್ಷವನ್ನು ಎಲ್ಲರ ಸಹಕಾರದಿಂದ ತಳಮಟ್ಟದಿಂದ ಕಟ್ಟಿ ಬೆಳೆಸಿದ ನಾಯಕರಲ್ಲಿ ಬಿ. ಎಸ್. ವೈ ಅಗ್ರಗಣ್ಯರು ಎನ್ನುವುದು ಸರ್ವವಿಧಿತ, ಅಲ್ಲದೆ ಜನಾಕರ್ಷಣೆಯ ವ್ಯಕ್ತಿತ್ವವಿರುವ ಏಕೈಕ ನಾಯಕ ಯಡಿಯೂರಪ್ಪರವರು ನಮ್ಮ ಪಕ್ಷದ ಸರ್ವೋಚ್ಚ ನಾಯಕರು, ಕಳೆದ ಒಂದು ವರ್ಷದಿಂದ ಈ ನಾಯಕತ್ವ ಬದಲಾವಣೆ ಕೇಳಿಬರುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಅವರು ಹೇಳಿದ್ದಾರೆ.



 ಕರುನಾಡಿನಲ್ಲಿ ಕಾಂಗ್ರೆಸ್ ಜೆಡಿಯಸ್ ಸರಕಾರವನ್ನು ಕಿತ್ತೊಗೆದು ಕಮಲ ಪಕ್ಷದ ಸರಕಾರವನ್ನು ಆಡಳಿತಕ್ಕೆ ತಂದು ನಾವೆಲ್ಲ ನಮ್ಮ ಸರಕಾರದ ಮಂತ್ರಿಯಾಗಿ, ಅಥವಾ ರಾಜ್ಯ ಸಚಿವರಾಗಿ ವಿವಿಧ ಸ್ಥಾನ ಮಾನಗಳನ್ನು ಪಡೆದಿರುವುದು ಮಾನ್ಯ ಮುಖ್ಯ ಮಂತ್ರಿ ಯಡಿಯೂರಪ್ಪರವರಿಂದ ಎಂಬ ವಿಚಾರವನ್ನು ಯಾರೂ ಮರೆಯುವಂತಿಲ್ಲ ಎಂದು ಅವರು ತಿಳಿಸಿದ್ದಾರೆ.




 ಆದುದರಿಂದ ಎಲ್ಲರು ಒಟ್ಟಾಗಿ ಒಗ್ಗಟ್ಟಾಗಿ ಜನಸೇವೆ ಮಾಡಿ ಮುಂದಿನ ಚುನಾವಣೆಯಲ್ಲಿ ಬಿ. ಎಸ್. ಯಡಿಯೂರಪ್ಪರವರ ಮಾರ್ಗದರ್ಶನದಲ್ಲಿ 150 ಕ್ಕಿಂತಲೂ ಹೆಚ್ಚು ಸ್ಥಾನ ಗಳಿಸಿ ಮತ್ತೊಮ್ಮೆ ಬಿಜೆಪಿ ಸರಕಾರ ರಚಿಸುವಲ್ಲಿ ಕೆಲಸ ಮಾಡಬೇಕಾಗಿದೆ ಎಂದು ಕರ್ನಾಟಕ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವದಿ ನಿಗಮದ ಅಧ್ಯಕ್ಷ ರವೀಂದ್ರ ಶೆಟ್ಟಿ ಹೇಳಿದ್ದಾರೆ.

Ads on article

Advertise in articles 1

advertising articles 2

Advertise under the article