-->
Supreme Court Judgement- ಜಾಮೀನು ನೀಡಿದವರೂ ಸಾಲ ಕಟ್ಟಲು ಬಾಧ್ಯಸ್ಥರು: ಸುಪ್ರೀಂ ಕೋರ್ಟ್ ತೀರ್ಪು

Supreme Court Judgement- ಜಾಮೀನು ನೀಡಿದವರೂ ಸಾಲ ಕಟ್ಟಲು ಬಾಧ್ಯಸ್ಥರು: ಸುಪ್ರೀಂ ಕೋರ್ಟ್ ತೀರ್ಪು





ವಸೂಲಿಯಾಗದ ಸಾಲದ ವಿಲೇವಾರಿ ಬಗ್ಗೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಸಾಲ ಪಡೆದುಕೊಂಡವರು ಆ ಸಾಲವನ್ನು ಮರು ಪಾವತಿ ಮಾಡದಿದ್ದರೆ, ಆ ಸಾಲಕ್ಕೆ ಜಾಮೀನು ನೀಡಿದವರು ಸಾಲವನ್ನು ಮರು ಪಾವತಿ ಮಾಡಲು ಹೊಣೆಗಾರರಾಗಿದ್ದಾರೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.



ಕೇಂದ್ರ ಸರ್ಕಾರಜಾರಿಗೆ ತಂದ ಹಣಕಾಸು ನಷ್ಟ ಮತ್ತು ದಿವಾಳಿ ಸಂಹಿತೆ ಕಾಯ್ದೆಯನ್ನು ಈ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ.



ಕಾರ್ಪೊರೇಟ್ ಸಂಸ್ಥೆಗಳ ಸಾಲ ವಸೂಲಾತಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಈ ಮಹತ್ವದ ತೀರ್ಪನ್ನು ಉದ್ದರಿಸಿದೆ.



ಕಾರ್ಪೊರೇಟ್ ಕಂಪೆನಿಗಳು ಬ್ಯಾಂಕ್‌ ಯಾ ಹಣಕಾಸು ಸಂಸ್ಥೆಗಳಿಂದ ಕೋಟಿಗಟ್ಟಲೆ ಸಾಲ ಪಡೆದು ಅದನ್ನು ಮರುಪಾವತಿ ಮಾಡಲಾಗದೆ ಇರುವ ಹಲವು ಪ್ರಕರಣಗಳು ನ್ಯಾಯಾಲಯದ ಮುಂದಿದೆ. 




ಈ ಸಾಲಗಳು ಮರುಪಾವತಿಯಾಗದೆ ಬ್ಯಾಂಕ್‌ಗಳೂ ನಷ್ಟ ಎದುರಿಸುತ್ತವೆ. ಇದರಿಂದ ಹಣಕಾಸು ವ್ಯವಸ್ಥೆ ಬಿಕ್ಕಟ್ಟು ಎದುರಿಸುತ್ತಿವೆ ಎಂದು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ.

Ads on article

Advertise in articles 1

advertising articles 2

Advertise under the article