-->
unscientific work by MCC- ಅವೈಜ್ಞಾನಿಕ ಕಾಮಗಾರಿಯಿಂದ ಜನತೆಗೆ ತೊಂದರೆ -ಮಾಜಿ ಶಾಸಕ ಲೋಬೊ ಆಕ್ರೋಶ.

unscientific work by MCC- ಅವೈಜ್ಞಾನಿಕ ಕಾಮಗಾರಿಯಿಂದ ಜನತೆಗೆ ತೊಂದರೆ -ಮಾಜಿ ಶಾಸಕ ಲೋಬೊ ಆಕ್ರೋಶ.





ನಗರದ ಕುಲಶೇಖರ ಕಣ್ಣಗುಡ್ಡೆಯ ಉಮಿಖಾನ ಪ್ರದೇಶದಲ್ಲಿ ನಡೆಯುತ್ತಿರುವ ರಸ್ತೆ ಅಗಲೀಕರಣ ಕಾಮಗಾರಿಯಲ್ಲಿ ಕೆಲವೊಂದು ಕಡೆ ಅವೈಜ್ಞಾನಿಕ ರೀತಿಯಲ್ಲಿ ನಡೆದಿರುವುದರಿಂದ ಜನತೆಗೆ ಬಹಳಷ್ಟು ತೊಂದರೆಯಾಗಿದೆ ಎಂದು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಜೆ. ಆರ್. ಲೋಬೊ ರವರು ಆಕ್ರೋಶ ವ್ಯಕ್ತಪಡಿಸಿರುತ್ತಾರೆ.




ಅವರು ಇಂದು ತಾ 29.5.2021ರಂದು, ವಿಪರೀತ ಮಳೆಯಿಂದಾಗಿ, ಮಳೆ ನೀರು ಚರಂಡಿಯಲ್ಲಿ ವ್ಯವಸ್ಥಿತವಾಗಿ ಹೋಗದೇ ಅಲ್ಲಿ ವಾಸಿಸುತ್ತಿರುವ ಮನೆಯ ಆವರಣ ಗೋಡೆ ಕುಸಿದು ಬಿದ್ದ ಪ್ರದೇಶಕ್ಕೆ ಭೇಟಿ ನೀಡಿದರು.


ಬಳಿಕ ಸುದ್ಫಿಗಾರರೊಂದಿಗೆ ಮಾತನಾಡುತ್ತಾ, ಈ ರಸ್ತೆಯು ರಾಷ್ಟ್ರೀಯ ಹೆದ್ದಾರಿಗೆ ಜೋಡಿಸುವ ರಸ್ತೆಯಾಗಿದೆ. ನಾನು ಶಾಸಕನಾಗಿದ್ದ ಸಮಯದಲ್ಲಿ ಈ ರಸ್ತೆಗೆ ಮಂಜೂರಾತಿ ಮಾಡಿಸಿದ್ದೆ. ರಸ್ತೆ ಅಗಲೀಕರಣ ಮಾಡುವಾಗ ಸಮಸ್ಯೆ ಬರುವುದು ಸಹಜ. ಆಗ ನಾವು ಅಲ್ಲಿ ವಾಸಿಸುತ್ತಿರುವ ಗಮನಕ್ಕೆ ತಂದು ಅವರ ಸಹಕಾರ ಪಡೆದು ಆ ಕೆಲಸವನ್ನು ಮಾಡಬೇಕು. ಜನರ ಸಹಕಾರ ಇಲ್ಲದೇ ಯಾವುದೇ ಅಭಿವೃದ್ಧಿ ಕೆಲಸ ಆಗದು. ಸ್ಥಳೀಯ ಜನತೆಯ ಅಹವಾಲು ಕೇಳಿದರೆ ಯಾವುದೇ ಅನಾಹುತ ಆಗುವುದಿಲ್ಲ. ಆದರೆ ಈಗಿನ ಶಾಸಕ ವೇದವ್ಯಾಸ್ ಕಾಮತ್ ರವರು ಸ್ಥಳೀಯ ಜನತೆಯ ಮಾತನ್ನು ಕೇಳಲು ಸಿದ್ದರಿಲ್ಲ. ಅವರು ಜನರ ಅಹವಾಲು ಕೇಳಲು ಪ್ರಯತ್ನಿಸಬೇಕು. ರಸ್ತೆ ಅಗಲೀಕರಣ ಹೆಸರಿನಲ್ಲಿ ಜನರಿಗೆ ತೊಂದರೆ ಕೊಡಬಾರದು. ರಸ್ತೆ ಅಗಲೀಕರಣ ಯೋಜನೆಯಿಂದ ಜನರಿಗೆ ಪ್ರಯೋಜನವಾಗಬೇಕು ಎಂದರು. 





ಸ್ಥಳದಿಂದಲೇ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಮಾತನಾಡಿ ಲೋಪದೋಷವಾದ ಕಾಮಗಾರಿಯನ್ನು ಸರಿಪಡಿಸುವಂತೆ ಮತ್ತು ಅವೈಜ್ಞಾನಿಕ ರಸ್ತೆ, ಮೋರಿ ಕಾಮಗಾರಿಯಿಂದ ಹಾನಿಯಾದ ಮನೆ ಆವರಣ ಗೋಡೆಯನ್ನು ಸರಿಪಡಿಸುವಂತೆ ಹೇಳಿದರು.



ಈ ಸಂದರ್ಭದಲ್ಲಿ ಪಾಲಿಕೆ ಪ್ರತಿಪಕ್ಷ ನಾಯಕ ಎ. ಸಿ. ವಿನಯರಾಜ್, ವಾರ್ಡ್ ಅಧ್ಯಕ್ಷ ಡೆನಿಸ್ ಡಿಸಿಲ್ವ, ಶೋಭಾ ಕೇಶವ, ಟಿ. ಕೆ. ಸುಧೀರ್, ನೀರಜ್ ಪಾಲ್, ರೀತೇಶ್ ಕಣ್ಣಗುಡ್ಡೆ , ಪದ್ಮನಾಭ ನೂಜಿ, ಗೋಪಾಲ ಸರಿಪಳ್ಳ, ವಲೇರಿಯನ್, ಉದಯ್ ಕುಂದರ್, ಲಕ್ಷ್ಮಣ್ ಶೆಟ್ಟಿ, ರೋಷನ್, ಶಾನ್ ಡಿಸೋಜಾ, ಯಶ್ ವಂತ ಪ್ರಭು, ಆಸೀಫ್, ಸವಾನ್, ನಿತಿನ್ ಸರಿಪಳ್ಳ, ಕೇಶವ ಮೊದಲಾದವರು ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article