Blood Donation Camp- ಮಂಗಳೂರು: ಕಾಂಗ್ರೆಸ್ ಕಾರ್ಮಿಕ ವಿಭಾಗದಿಂದ ರಕ್ತದಾನ ಶಿಬಿರ
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ಘಟಕ ಮತ್ತು ರೆಡ್ ಕ್ರಾಸ್ ಸೊಸೈಟಿ ದಕ್ಷಿಣ ಕನ್ನಡ ಜಿಲ್ಲೆಯ ಸಹಯೋಗದಲ್ಲಿ ರಕ್ತದಾನ ಶಿಬಿರ ಮಂಗಳೂರಿನ ವಾಮಂಜೂರು ಚರ್ಚ್ ಸಭಾಂಗಣದಲ್ಲಿ ನೆರವೇರಿತು.
ಕಾರ್ಯಕ್ರಮಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ದೀಪ ಬೆಳಗಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು ಕೊರೋನಾ ಲಾಕ್ ಡೌನ್ ನಿಂದ ದೇಶದಲ್ಲಿ ಜನ ಸಂಕಷ್ಟ ಎದುರಿಸುವ ಸಂದರ್ಭದಲ್ಲಿ ಜನ್ರ ಸೇವೆಯನ್ನು ಕಾಂಗ್ರೆಸ್ ಪಕ್ಷ ಮಾಡ್ತಾ ಬಂದಿದೆ. ಜಿಲ್ಲೆಯಲ್ಲಿ ಕೋವಿಡ್ ರೋಗಿಗಳಿಗೆ, ಲಾಕ್ ಡೌನ್ ನಿಂದ ಸಂಕಷ್ಟ ಎದುರಿಸುವ ಕುಟುಂಬಗಳಿಗೆ ದಿನಸಿ ಕಿಟ್ ಆಹಾರ ವ್ಯವಸ್ಥೆ ಸೇರಿದಂತೆ ಅನೇಕ ಸೇವೆಯೊಂದಿಗೆ ಜಿಲ್ಲೆಯಲ್ಲಿ 9 ಕ್ಕೂ ಅಧಿಕ ರಕ್ತ ದಾನ ಶಿಬಿರ ಆಯೋಜನೆ ಮಾಡುವ ಮೂಲಕ ೯ ಸಾವಿರಕ್ಕೂ ಅಧಿಕ ರಕ್ತ ನಿಧಿ ಸಂಗ್ರಹ ಮಾಡಿದೆ. ಅದರಂತೆ ದ.ಕ ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ಸಂಘದ ವತಿಯಿಂದ ರಕ್ತ ದಾನ ಶಿಬಿರ ಸೇರಿದಂತೆ ಹತ್ತು ಹಲವು ಸಾಮಾಜಿಕ ಕಾರ್ಯವನ್ನು ಅಧ್ಯಕ್ಷರಾದ ಲಾರೆನ್ಸ್ ಡಿಸೋಜ ಆಯೋಜಿಸುವ ಮೂಲಕ ಯುವಕರಿಗೆ ಮಾದರಿ ಆಗಿದ್ದಾರೆ.
ಕಾರ್ಯಕ್ರಮದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜ, ಮಾಜಿ ಶಾಸಕ ಮೊಹಿದ್ದೀನ್ ಬಾವ, ಜೆ.ಆರ್ ಲೋಬೋ, ದ.ಕ ಜಿಲ್ಲಾ ಯುವ ಕಾಂಗ್ರೆಸ್ ಮುಖಂಡ ಮಿಥುನ್ ರೈ, ಮ.ನ.ಪಾ ಮಾಜಿ ಮಹಾಪೌರರಾದ ಮಹಾಬಲ ಮಾರ್ಲ, ಭಾಸ್ಕರ್ ಮೊಯ್ಲಿ, ಮಾಜಿ ಉಪ ಮಹಾಪೌರರಾದ ಕೆ.ಮೊಹಮ್ಮದ್, ಮ.ನ.ಪಾ ಸದಸ್ಯರಾದ ಪ್ರವೀಣ್ ಚಂದ್ರ ಆಲ್ವಾ,ಅನಿಲ್ ಕುಮಾರ್, ಯುವ ಕಾಂಗ್ರೆಸ್ ನ ರಾಜ್ಯ ಕಾರ್ಯದರ್ಶಿ ಮೆರಿಲ್ ರೇಗೋ,ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ಸಂಘದ ಅಧ್ಯಕ್ಷ ಲಾರೆನ್ಸ್ ಡಿಸೋಜ, ಯುವ ಕಾಂಗ್ರೆಸ್ ಮುಖಂಡರಾದ ರಮಾನಂದ್, ರಾಕೇಶ್ ದೇವಾಡಿಗ, ಸುನಿಲ್ ಕುಮಾರ್, ರಫೀಕ್ ಕಣ್ಣೂರು,ಮುಪೀದ್, ವಲಯ ಕಾಂಗ್ರೆಸ್ ಅಧ್ಯಕ್ಷ ರಾಜ್ ಕುಮಾರ್ ಶೆಟ್ಟಿ, ರೆಡ್ ಕ್ರಾಸ್ ಸಂಸ್ಥೆಯ ವೈಧ್ಯಾದಿಕಾರಿ ಜಿ ಎನ್ ಭಟ್, ಜಿಲ್ಲಾ ಸಂಯೋಜಕರಾದ ಪ್ರವೀಣ್ ಕುಮಾರ್, ೬೧ ಬಾರಿ ರಕ್ತ ದಾನ ಮಾಡಿದ ರೊನಾಲ್ಡ್ ಕ್ರಾಸ್ತಾ, ಮತ್ತಿತರರು ಉಪಸ್ಥಿತರಿದ್ದರು.
ರೆಹಮಾನ್ ಖಾನ್ ಕುಂಜತ್ತಬೈಲ್ ಕಾರ್ಯಕ್ರಮ ನಿರೂಪಿಸಿದರು.