Bridge damage- ಮರವೂರು ಸೇತುವೆ ಪಾರ್ಶ್ವ ಕುಸಿತ: ಮರಳುಗಾರಿಕೆ ತಂದ ಕುತ್ತು..?: ಏರ್‌ಪೋರ್ಟ್ ಪ್ರಯಾಣಿಕರಿಗೆ ಪರ್ಯಾಯ ಮಾರ್ಗ
Tuesday, June 15, 2021
ಮಂಗಳೂರಿನಿಂದ ಬಜಪೆ, ಏರ್‌ಪೋರ್ಟ್ ಪ್ರಯಾಣಿಸುವ ಪ್ರಯಾಣಿಕರ ಗಮನಕ್ಕೆ ಇಲ್ಲಿದೆ ಮಹತ್ವದ ಸುದ್ದಿ. ಇಂದು ಮುಂಜಾನೆ ಮರವೂರು ಸೇತುವೆ ಮುರಿದಿದೆ. ಮಂಗಳವಾರ ಬೆಳಿಗ್ಗೆ 3ಗಂಟೆಗೆ ಮರವೂರು ಹಳೆ ಸೇತುವೆಯ ಒಂದು ಪಾರ್ಶ್ವ ಕುಸಿದಿದೆ.
ಈ ಪ್ರದೇಶದಲ್ಲಿ ನಡೆಯುತ್ತಿರುವ ಅವ್ಯಾಹತ ಮರಳುಗಾರಿಕೆಯಿಂದಾಗಿ ಸೇತುವೆಗೆ ಹಾನಿ ಉಂಟಾಗಿದೆ ಎನ್ನಲಾಗಿದೆ.
ಸ್ಥಳಕ್ಕೆ ಶಾಸಕ ಉಮಾನಾಥ್ ಕೋಟ್ಯಾನ್ ತೆರಳಿ ಪರಿಶೀಲನೆ ನಡೆಸಿದ್ದಾರೆ. ಪೋಲಿಸ್ ಇಲಾಖೆಗೆ ಮಾಹಿತಿ ಒದಗಿಸಿ ಸೂಕ್ತ ಬಂದೋಬಸ್ತ್ ಮಾಡುವಂತೆ ಅವರು ಸೂಚಿಸಿದರು. ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಮತ್ತು ನೂತನ ಸೇತುವೆಯ ಗುತ್ತಿಗೆದಾರರನ್ನು ಸ್ಥಳಕ್ಕೆ ಕರೆಯಿಸಿ ಮುಂದಿನ ಕ್ರಮಗಳ ಬಗ್ಗೆ ಚರ್ಚಿಸಿದರು.
ಬದಲಿ ಪರ್ಯಾಯ ರಸ್ತೆ
ಮಂಗಳೂರಿನಿಂದ ಕಾವೂರು ಕೂಳೂರು, ಕೆ ಬಿ ಎಸ್ ಜೋಕಟ್ಟೆ, ಪೋರ್ಕೊಡಿ, ಬಜಪೆ ಅಥವಾ ಪಚ್ಚನಾಡಿ, ವಾಮಂಜೂರು, ಗುರುಪುರ, ಕೈಕಂಬ, ಬಜಪೆ ಮೂಲಕ ಸಂಚರಿಸಲು ಕೋರಲಾಗಿದೆ.