Covid helping hand by Congress- ಜೆಪ್ಪಿನ ಮೊಗರು ಮತ್ತು ಕೋರ್ಟ್ ವಾರ್ಡಿನಲ್ಲಿ ಕಾಂಗ್ರೆಸ್‌ನಿಂದ ದಿನಸಿ ಕಿಟ್
ಕೋರ್ಟ್ ವಾರ್ಡ್:
ಮಂಗಳೂರು ನಗರದ ಕೋರ್ಟ್ ವಾರ್ಡ್ ವ್ಯಾಪ್ತಿಯ ಅತ್ತಾವರ ಕಟ್ಟಪುಣಿ ಪ್ರದೇಶದಲ್ಲಿ ವಾಸವಾಗಿರುವ ಬಡ ಜನರಿಗೆ ಕಾಂಗ್ರೆಸ್ ವತಿಯಿಂದ ದಿನಸಿ ಸಾಮಗ್ರಿಗಳ ಕಿಟ್ ಗಳ ವಿತರಣೆ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ಜೆ. ಆರ್. ಲೋಬೋ, ಕಾಂಗ್ರೆಸ್ ಬಡ ಜನರ ಕಷ್ಟಕ್ಕೆ ಸ್ಪಂದಿಸುವ ಏಕ ಮಾತ್ರ ಪಕ್ಷವಾಗಿದೆ ಎಂದು ಹೇಳಿದರು.
ಕೋವಿಡ್ ಲಾಕ್ ಡೌನ್ ನಿಂದ ಉದ್ಯೋಗವಿಲ್ಲದೇ ಜನರಿಗೆ ಜೀವನ ಸಾಗಿಸಲು ಕಷ್ಟಕರವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್, ಬಡವರಿಗೆ ಜೀವನ ನಡೆಸಲು ದಿನ ನಿತ್ಯದ ಅಗತ್ಯ ಸಾಮಗ್ರಿಗಳ ರೇಷನ್ ಕಿಟ್ ಗಳನ್ನು ನೀಡಿದೆ ಎಂದು ಹೇಳಿದರು.
ಮಂಗಳೂರು ಮಹಾನಗರ ಪಾಲಿಕೆ ಪ್ರತಿಪಕ್ಷ ನಾಯಕ ಎ. ಸಿ. ವಿನಯರಾಜ್, ಪಕ್ಷದ ಪ್ರಮುಖರಾದ ಹೊನ್ನಯ್ಯ, ಟಿ. ಕೆ. ಸುಧೀರ್, ನೀರಜ್ ಪಾಲ್, ದುರ್ಗಾ ಪ್ರಸಾದ್, ಉದಯ ಕುಂದರ್, ಪ್ರವೀಣ್, ಗೀತಾ ಪ್ರವೀಣ್, ಭಾಸ್ಕರ್ ರಾವ್, ರಮಾನಂದ್ ಪೂಜಾರಿ, ಸವಾನ್ ಎಸ್. ಕೆ., ಸತೀಶ್, ಶಶಿಧರ್ ನಾಯ್ಕ್, ಅಜಯ್, ಶಾನ್ ಡಿಸೋಜಾ, ಕೃತಿನ್ ಕುಮಾರ್, ಆಸ್ಟನ್ ಸಿಕ್ವೇರಾ, ಯೋಗೀಶ್ ನಾಯಕ್, ಯಶವಂತ ಪ್ರಭು, ಆಸೀಫ್ ಜೆಪ್ಪು, ಜೀವನ್ ಮೋರೆ, ಲಕ್ಷ್ಮಣ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಜೆಪ್ಪಿನ ಮೊಗರು: ದಿನಸಿ ಕಿಟ್ ವಿತರಣೆ..
ಜೆಪ್ಪಿನ ಮೊಗರು ವಾರ್ಡ್ ವ್ಯಾಪ್ತಿಯಲ್ಲಿರುವ ಜೆಪ್ಪಿನ ಮೊಗರು ಯುವಕ ವೃಂದ ಕಟ್ಟಡದಲ್ಲಿ ಮತ್ತು ಕಡೆಕಾರ್ ಪ್ರದೇಶದಲ್ಲಿ ವಾಸವಾಗಿರುವ ಕೋವಿಡ್ ಲಾಕ್ ಡೌನ್ ನಿಂದ ತೊಂದರೆಗೆ ಒಳಗಾದ ಜನರಿಗೆ ಕಾಂಗ್ರೆಸ್ ಪಕ್ಷದ ವತಿಯಿಂದ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಜೆ.ಆರ್. ಲೋಬೊರವರು ದಿನಸಿ ಸಾಮಾನುಗಳ ಕಿಟ್ ಗಳನ್ನು ವಿತರಿಸುವಂತ ಕಾರ್ಯ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ಜೆಪ್ಪಿನ ಮೊಗರು ಪ್ರದೇಶದಲ್ಲಿ ಬಡ ಹಾಗೂ ಮಾಧ್ಯಮ ವರ್ಗದ ಜನರು ಬಹಳಷ್ಟು ಮಂದಿ ಇದ್ದಾರೆ. ದಿನ ಕೂಲಿ ನಂಬಿ ಜೀವನ ಸಾಗಿಸುವವರ ಸಂಖ್ಯೆಯೂ ಅಧಿಕವಾಗಿರುತ್ತದೆ. ಕೋವಿಡ್ ಲಾಕ್ ಡೌನ್ ನಿಂದಾಗಿ ಜನರಿಗೆ ಉದ್ಯೋಗವೂ ಇಲ್ಲ, ಆದಾಯವೂ ಇಲ್ಲದಂತಹ ಪರಿಸ್ಥಿತಿ ಸೃಷ್ಟಿವಾಗಿದೆ. ಇದನ್ನರಿತು ಕಾಂಗ್ರೆಸ್ ಸಂತ್ರಸ್ತ ಜನರಿಗೆ ಕನಿಷ್ಟ ಜೀವನ ಸಾಗಿಸಲು ಸ್ವಲ್ಪ ಸಹಾಯವನ್ನು ಮಾಡುವ ದೃಷ್ಟಿಯಲ್ಲಿ ದಿನ ಅಗತ್ಯ ಸಾಮಗ್ರಿಗಳ ಕಿಟ್ ಗಳನ್ನು ನೀಡುತ್ತಿದೆ ಎಂದರು.
ಈ ಸಂದರ್ಭದಲ್ಲಿ ಸ್ಥಳೀಯ ಪಾಲಿಕೆ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡರಾದ ಪ್ರವೀಣ್ ಚಂದ್ರ ಆಳ್ವ, ವಾರ್ಡ್ ಅಧ್ಯಕ್ಷ ಜೆ. ಸುಧಾಕರ್, ಬ್ಲಾಕ್ ಕಾಂಗ್ರೆಸ್ ಯುವ ವಿಭಾಗದ ಅಧ್ಯಕ್ಷ ಸುನೀಲ್ ಪೂಜಾರಿ, ಪಕ್ಷದ ಸ್ಥಳೀಯ ಮುಖಂಡರಾದ ಹೊನ್ನಯ್ಯ, ಹರ್ಬಟ್ ಡಿ'ಸೋಜಾ, ಜಿಲ್ಲಾ ಮುಖಂಡರಾದ ಟಿ.ಕೆ. ಸುಧೀರ್, ನೀರಜ್ ಪಾಲ್, ದುರ್ಗಾ ಪ್ರಸಾದ್, ಭಾಸ್ಕರ್ ರಾವ್, ಶ್ರೀಧರ್ ರಾಜ್ ಶೆಟ್ಟಿ, ಸುಧೀರ್ ಕಡೆಕಾರ್,ಸ್ಟೀವನ್, ತಾರಾನಾಥ್ ಭಂಡಾರಿ, ಸುಭಾಷ್ ಅಡಪ್ಪ, ಬಾಲಕೃಷ್ಣ ಶೆಟ್ಟಿ, ಕೃಷ್ಣ ಶೆಟ್ಟಿ, ಅಶೋಕ್ ಕುಡ್ಪಾಡಿ, ಆಸೀಫ್ ಜೆಪ್ಪು, ಕೃತಿನ್ ಕುಮಾರ್, ಶಾನ್ ಡಿಸೋಜಾ, ಜೀವನ್ ಮೋರೆ, ಲಕ್ಷ್ಮಣ್ ಶೆಟ್ಟಿ, ಯಶವಂತ ಪ್ರಭು, ರಹಿಮಾನ್ ಮೊದಲಾದವರು ಉಪಸ್ಥಿತರಿದ್ದರು.