
Covid out of control?- ದಕ್ಷಿಣ ಕನ್ನಡದಲ್ಲಿಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲವೇ..? ಲಾಕ್‌ಡೌನ್ ಮುಂದುವರಿಯುತ್ತಾ..?
Friday, June 18, 2021
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ 19 ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ. ಹಾಗಂತ ಇಂದಿನ ಸೋಂಕಿತರ ಸಂಖ್ಯೆ ಹೇಳುತ್ತಿದೆ. ಕಳೆದ ಒಂದೆರಡು ದಿನಗಳಲ್ಲಿ 500-800 ಆಸುಪಾಸಿನಲ್ಲಿದ್ದ ಸೋಂಕಿತರ ಸಂಖ್ಯೆ ಇಂದು ಸಾವಿರದ ಗಡಿ ದಾಟಿದೆ.
ಇಂದು ಒಂದೇ ದಿನ 1,006 ಮಂದಿಗೆ ಸೋಂಕು ತಗುಲಿದೆ. ಜಿಲ್ಲೆಯ ಇಂದಿನ ಪಾಸಿಟಿವಿಟಿ ರೇಟ್ 10.07% ಇದೆ ಎಂದು ಆರೋಗ್ಯ ಇಲಾಖೆಯ ಮೂಲಗಳು ಹೇಳಿವೆ.
ಜಿಲ್ಲೆಯಲ್ಲಿ ಇಂದು ಒಂದೇ ದಿನ ಕೊರೋನಾ ಮಹಾಮಾರಿಗೆ ಒಟ್ಟು ಹದಿನೈದು ಮಂದಿ ಬಲಿಯಾಗಿದ್ಧಾರೆ.
66* ಮಂದಿ ಕೊರೋನಾದಿಂದ ಗುಣಮುಖರಾಗಿದ್ದು, ಸದ್ಯಕ್ಕೆ ಜಿಲ್ಲೆಯಲ್ಲಿ ಒಟ್ಟು 6,931 ಆಕ್ವೀವ್ ಪ್ರಕರಣಗಳು ಇವೆ ಎಂದು ಇಲಾಖೆ ಅಂಕಿ ಅಂಶ ಹೇಳುತ್ತಿವೆ. ದ.ಕ.ಜಿಲ್ಲೆಯಲ್ಲಿ ಈವರೆಗೆ ಒಟ್ಟು 87,350 ಪಾಸಿಟಿವ್ ಕೇಸ್ ಇದೆ.
ಈ ಹಿನ್ನೆಲೆಯಲ್ಲಿ ಮುಂದಿನ ಸೋಮವಾರದಿಂದ ಲಾಕ್‌ಡೌನ್ ಸಡಿಲಿಕೆ ಆಗಬಹುದು ಎಂಬ ನಿರೀಕ್ಷೆಯಲ್ಲಿ ಇದ್ದ ಜನರ ಆಸೆಗೆ ತಣ್ಣೀರು ಸುರಿದಂತಾಗಿದೆ. ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಳ್ಳಬಹುದೇ ಎಂಬ ಆತಂಕವೂ ಜನರಲ್ಲಿ ಮೂಡಿದೆ.