
Drugs in Rave Party- ರೇವ್ ಪಾರ್ಟಿಯಲ್ಲಿ ನಶೆ- ನಟಿ ಮಣಿಯರ ಸೆರೆ: ಸಿಕ್ಕಿ ಬಿದ್ರು "ಹೈ" ಸೊಸೈಟಿಯ 34 ಮಂದಿ
ಬಿಗ್ ಬಾಸ್ ಸ್ಪರ್ಧಿ ಸಹಿತ ನಟಿಮಣಿಯರ ರೇವ್ ಪಾರ್ಟಿ!
ರೇವ್ ಪಾರ್ಟಿ ಮೇಲೆ ಪೊಲೀಸ್ ದಾಳಿ
ಹೈ ಸೊಸೈಟಿಯ 34 ಮಂದಿ ಸೆರೆ
ಅಪಾರ ಪ್ರಮಾಣದ ಡ್ರಗ್ಸ್ ಹಾಗೂ ಹುಕ್ಕಾಗಳನ್ನು ವಶ
ಲಾಕ್‌ಡೌನ್ ಸಮಯದಲ್ಲಿ ಅನುಮತಿ ಇಲ್ಲದೆ ಅಕ್ರಮವಾಗಿ ನಡೆಯುತ್ತಿದ್ದ ರೇವ್ ಪಾರ್ಟಿ ಮೇಲೆ ಪೊಲೀಸ್ ದಾಳಿ ನಡೆಸಿದ್ದು, ನಾಲ್ವರು ನಟಿಯರು ಹಾಗೂ ಬಿಗ್ ಬಾಸ್ ಸ್ಪರ್ಧಿಯೊಬ್ಬರ ಸಹಿತ 34 ಮಂದಿ "ಹೈ ಸೊಸೈಟಿ"ಯ ಸೆಲೆಬ್ರಿಟಿಗಳು ಬಂಧಿಯಾಗಿದ್ಧಾರೆ.
ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಇಗತ್ಪುರಿ ಪಟ್ಟಣದ ಹೊರವಲಯದಲ್ಲಿರುವ ಈ ರೇವ್ ಪಾರ್ಟಿ ನಡೆಯುತ್ತಿತ್ತು. ಇಲ್ಲಿನ ಎರಡು ವಿಲ್ಲಾಗಳ ಮೇಲೆ ಮಹಾರಾಷ್ಟ್ರ ಪೊಲೀಸರು ದಾಳಿ ನಡೆಸಿದ್ದು, 12 ಯುವತಿಯರು ಹಾಗೂ 22 ಯುವಕರನ್ನು ಬಂಧಿಸಿದ್ದಾರೆ.
ಬಂಧಿತ ಯುವಕ-ಯುವತಿಯರ ಪೈಕಿ ನಾಲ್ವರು ನಟಿಯರು ಹಾಗೂ ಓರ್ವಾಕೆ "ಬಿಗ್ ಬಾಸ್" ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ಸ್ಪರ್ಧಿ ಎಂದು ತಿಳಿದು ಬಂದಿದೆ.
ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಇಗತ್ಪುರಿ ಪಟ್ಟಣದ ಹೊರವಲಯದ ಎರಡು ಖಾಸಗಿ ವಿಲ್ಲಾಗಳಲ್ಲಿ ಈ ರೇವ್ ಪಾರ್ಟಿ ನಡೆಯುತ್ತಿತ್ತು. ಈ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದರು.
ರೇವ್ ಪಾರ್ಟಿ ಸ್ಥಳದಲ್ಲಿ ಕಾನೂನಿನಲ್ಲಿ ನಿಷೇಧಿಸಲಾಗಿರುವ ಅಪಾರ ಪ್ರಮಾಣದ ಡ್ರಗ್ಸ್ ಹಾಗೂ ಹುಕ್ಕಾಗಳನ್ನು ವಶಪಡಿಸಿಕೊಳ್ಳಲಾಗಿದೆ. ನಾಸಿಕ್ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಸಚಿನ್ ಪಾಟೀಲ್ ಈ ವಿಷಯವನ್ನು ದೃಢಪಡಿಸಿದ್ದಾರೆ.
ರೇವ್ ಪಾರ್ಟಿಯಲ್ಲಿ ಮಜಾ ಉಡಾಯಿಸುತ್ತಿದ್ದ ಬಂಧಿರನ್ನು ವೈದ್ಯಕೀಯ ಪರೀಕ್ಷೆಗೊಳ ಪಡಿಸಲಾಗಿದೆ. ಈ ಸಂದರ್ಭದಲ್ಲಿ 10 ಯುವಕರು ಹಾಗೂ 12 ಮಹಿಳೆಯರು ಡ್ರಗ್ಸ್ ಸೇವನೆ ಮಾಡಿರುವುದು ಪತ್ತೆಯಾಗಿದೆ ಎಂದು ವೈದ್ಯಕೀಯ ಪರೀಕ್ಷೆಯ ವರದಿಗಳು ಸಾಬೀತು ಮಾಡಿದೆ ಎಂದು ಪೊಲೀಸರು ದೃಢಪಡಿಸಿದ್ದಾರೆ.
ಡ್ರಗ್ಸ್ ಪಾರ್ಟಿಯಲ್ಲಿ ನಶೆ ಏರಿಸುತ್ತಿದ್ದ ಬಂಧಿತ ನಟಿಯರು ಹಾಗೂ ಬಿಗ್ ಬಾಸ್ ಸ್ಪರ್ಧಿ ಬಗ್ಗೆ ಪೊಲೀಸರು ಯಾವುದೇ ಮಾಹಿತಿಯನ್ನು ಬಹಿರಂಗಗೊಳಿಸಿಲ್ಲ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.