
Godman arrested for sexual harassment - ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ ಹೊತ್ತ ದೇವಮಾನವ ಮಹಿಳಾ ಭಕ್ತೆ ಮನೆಯಲ್ಲಿ ಪತ್ತೆ!
ಚೆನ್ನೈ: ಕುಖ್ಯಾತ ದೇವ ಮಾನವ ಶಿವಶಂಕರ ಬಾಬಾನ ಕಾಮಕಾಂಡ ಬಯಲಾಗುತ್ತಿದ್ದಂತೆಯೇ ಆತ ತಲೆ ಮರೆಸಿ ಕೊಂಡಿದ್ದ. ಆದರೆ, ಪೊಲೀಸರು ಆತನ ಹೆಡೆಮುರಿ ಕಟ್ಟಿದ್ದು, ಮಹಿಳಾ ಭಕ್ತೆಯೊಬ್ಬರ ಮನೆಯಲ್ಲಿ ಅಡಗಿ ಕುಳಿತಿದ್ದ ದೇವಮಾನವನನ್ನು ಪತ್ತೆ ಹಚ್ಚಿ ಆತನನ್ನು ಬಂಧಿಸಲಾಗಿದೆ.
ನಗರದ ಹೊರವಲಯದ ಸುಶೀಲ್ ಹರಿ ರೆಸಿಡೆನ್ಸಿಯಲ್ ಸ್ಕೂಲ್ ಸಂಸ್ಥಾಪಕನಾದ ಶಿವಶಂಕರ ಬಾಬಾನ ವಿರುದ್ಧ ಲೈಂಗಿಕ ಕಿರುಕುಳದ ಆರೋಪದಲ್ಲಿ ಪ್ರಕರಣ ದಾಖಲಾಗಿತ್ತು. ಆತನ ಶಾಲೆಯ ಮಾಜಿ ವಿದ್ಯಾರ್ಥಿಗಳ ಮೇಲೆ ಲೈಂಗಿಕ ದುರುಪಯೋಗ, ಲೈಂಗಿಕ ಕಿರುಕುಳ, ದುರ್ವತನೆ ಆರೋಪಗಳ ಮೇಲೆ ದೂರು ದಾಖಲಾಗಿದ್ದು, ದೂರು ದಾಖಲಾಗುತ್ತಿದ್ದಂತೇ ಆರೋಪಿ ತಲೆ ಮರೆಸಿಕೊಂಡಿದ್ದ.
ತಲೆಮರೆಸಿಕೊಂಡ ಬಳಿಕ ಮಹಿಳಾ ಭಕ್ತೆಯ ಘಾಜಿಯಾಬಾದ್ ನಲ್ಲಿರುವ ಮನೆಯಲ್ಲಿ ಬಾಬಾ ಆಶ್ರಯ ಪಡೆದು ಕೊಂಡಿದ್ದ. ಮಹಿಳಾ ಭಕ್ತೆಯ ಮೊಬೈಲ್ ಸಂಖ್ಯೆಗೆ ಬರುವ ಕರೆಗಳ ಆಧರಿಸಿ ಸಿಬಿ -ಸಿಐಡಿ ತಂಡ ಆಕೆಯ ಮನೆಗೆ ತೆರಳಿ ಆರೋಪಿತ ದೇವಮಾನವನನ್ನು ಬಂಧಿಸಿದೆ.
ಬಾಬಾನ ಬಂಧನವಾದ ತಕ್ಷಣವೇ ಮತ್ತೊಂದು ಪೊಲೀಸರ ತಂಡ ಚೆನ್ನೈನ ಇಸಿಆರ್ ಪ್ರದೇಶದಲ್ಲಿರುವ ಶಾಲೆ ಗೆ ಭೇಟಿ ನೀಡಿ ಶಾಲಾ ಸದಸ್ಯರನ್ನು ವಿಚಾರಣೆ ನಡೆಸಿದೆ.