
Gold Theft-ಮಂಗಳೂರು: ಅಪಾರ್ಟ್‌ಮೆಂಟಿನಿಂದ ಚಿನ್ನಾಭರಣ ಕಳವು, ಆರೋಪಿ ಅರೆಸ್ಟ್
Thursday, June 17, 2021
ಮಂಗಳೂರಿನ ಹೃದಯಭಾಗದಲ್ಲಿನ ನವಭಾರತ ಸರ್ಕಲ್‌ನಲ್ಲಿ ಇರುವ ಮೌರಿಷ್ಕಾ ಪಾರ್ಕ್ ಅಪಾರ್ಟ್‌ಮೆಂಟ್ ನಿವಾಸಿಯಿಂದ ಅಪಾರ ಮೌಲ್ಯದ ಚಿನ್ನಾಭರಣವನ್ನು ಕಳ್ಳತನ ಮಾಡಿದ್ದ ಆರೋಪಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಉತ್ತರ ಕನ್ನಡ ದಾಂಡೇಲಿಯಲ್ಲಿ ವಾಸವಾಗಿರುವ ಭದ್ರಾವತಿ ನಿವಾಸಿ 45 ವರ್ಷದ ಜ್ಞಾನರತ್ನಂ ಎಂಬವನನ್ನು ಮಂಗಳೂರು ಪೊಲೀಸರು ಬಂಧಿಸಿದ್ದು, ಬಂಧಿತನಿಂದ ಕಳವು ಮಾಡಿದ 2.50 ಲಕ್ಷ ರೂ. ಮೌಲ್ಯದ 53 ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿ ಚಿನ್ನಾಭರಣವನ್ನು ಕಳವು ಮಾಡಿಕೊಂಡು ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ತಲೆ ಮರೆಸಿಕೊಂಡಿದ್ದ. ಕದ್ರಿ ಠಾಣೆಯ ಅಪರಾಧ ವಿಬಾಗದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿ ದಾಂಡೇಲಿಯ ಮಣಪ್ಪುರಂ ಫೈನಾನ್ಸ್, ಹುಬ್ಬಳ್ಳಿಯ ಮುತ್ತೂಟ್ ಮತ್ತು ಭದ್ರಾವತಿಯ ಐಐಎಫ್‌ಎಲ್ ಫೈನಾನ್ಸ್‌ಗಳಲ್ಲಿ ಚಿನ್ನವನ್ನು ಅಡವಿರಿಸಿಕೊಂಡಿದ್ದ. ಅದನ್ನೂ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.