historic Circle demolished- ಮಂಗಳೂರಿನ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ವೃತ್ತ ರಾತೋರಾತ್ರಿ ನೆಲಸಮ!
Friday, June 11, 2021
ಮಂಗಳೂರಿನ ಹೃದಯ ಭಾಗದಲ್ಲಿ ಇರುವ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ವೃತ್ತವನ್ನು ರಾತೋರಾತ್ರಿ ನೆಲಸಮ ಮಾಡಲಾಗಿದೆ. ಯಾರೊಬ್ಬರಿಗೂ ಯಾವುದೇ ಸುಳಿವು ನೀಡದೆ, ಸ್ಮಾರ್ಟ್ ಸಿಟಿ ಕಾಮಗಾರಿಯ ನೆಪದಲ್ಲಿ ಈ ವೃತ್ತವನ್ನು ಕೆಡವಲಾಗಿದೆ.
ದಶಕಗಳ ಹಿಂದೆ ಮಂಗಳೂರಿನ ಪ್ರಮುಖ ಪತ್ರಿಕೆಯಾಗಿದ್ದ ನವಭಾರತ ಮುದ್ರಣಾಲಯ ಮತ್ತು ಕಚೇರಿ ಇದ್ದ ಕಾರಣಕ್ಕೆ ಈ ವೃತ್ತವನ್ನು ನವಭಾರತ ಸರ್ಕಲ್ ಎಂದು ಕರೆಯಲಾಗುತ್ತಿತ್ತು.
ರಾಜ್ಯದ ಮೊದಲ ರಾಷ್ಟ್ರಕವಿ ಪಂಜೆ ಗೋವಿಂದ ಪೈ ನೆನಪಿಗೆ ಈ ವೃತ್ತವನ್ನು ಗೋವಿಂದ ಪೈ ವೃತ್ತ ಎಂದು ಹೆಸರಿಡಲಾಗಿತ್ತು.
ಈ ವೃತ್ತವನ್ನು ಧ್ವಂಸ ಮಾಡಿರುವ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಕನ್ನಡ ಸಂಘಟನೆಗಳು ಈ ಕಾಮಗಾರಿ ಬಗ್ಗೆ ಧ್ವನಿ ಎತ್ತಿವೆ. ನಾಳೆ ಎರಡನೇ ಶನಿವಾರವಾಗಿದ್ದು, ಕೋರ್ಟ್ ಕಚೇರಿಗಳಿಗೆ ರಜೆ. ಈ ಸಮಯವನ್ನು ನೋಡಿ ಕದ್ದುಮುಚ್ಚಿ ಇಂತಹ ಕೃತ್ಯಕ್ಕೆ ಕೈ ಹಾಕಿರುವ ದರ್ದು ಏನು ಎಂದು ಮಂಗಳೂರಿನ ಜನತೆ ಪ್ರಶ್ನೆ ಮಾಡಿದ್ದಾರೆ.