-->
Hunger forced her to eat hair - ಹಸಿವು ನೀಗಿಸಲು ಕೂದಲನ್ನೇ ತಿಂದ ಬಾಲಕಿ: ಹೊಟ್ಟೆಯಿಂದ 2 ಕಿಲೋ ಕೂದಲು ಹೊರತೆಗೆದ ವೈದ್ಯರು!

Hunger forced her to eat hair - ಹಸಿವು ನೀಗಿಸಲು ಕೂದಲನ್ನೇ ತಿಂದ ಬಾಲಕಿ: ಹೊಟ್ಟೆಯಿಂದ 2 ಕಿಲೋ ಕೂದಲು ಹೊರತೆಗೆದ ವೈದ್ಯರು!





ಬಡತನದ ಪರಾಕಾಷ್ಟೆಗೆ ಸಾಕ್ಷ್ಯವಾಗಿರುವ ತಾಜಾ ಉದಾಹರಣೆ ಇದು... ಹಸಿವು ತಾಳಲಾರದೇ ಕಳೆದ 5 ತಿಂಗಳಿನಿಂದ 17 ವರ್ಷದ ಯುವತಿ ತನ್ನ ತಲೆಕೂದಲನ್ನೇ ತಿಂದ ಅತ್ಯಂತ ಆಘಾತಕಾರಿ ಘಟನೆ ಹೈದರಾಬಾದ್‌ನ ಶಂಸಾಬಾದ್‌ನಲ್ಲಿ ನಡೆದಿದೆ.



ಹೀಗೆ ತಿಂದ ತಲೆಗೂದಲು ಬರೋಬ್ಬರಿ 2 ಕೆ.ಜಿ.ಗಳಷ್ಟು ಹೊಟ್ಟೆಯಲ್ಲಿ ಶೇಖರಣೆಯಾಗಿದೆ. ಇದೀಗ ತೆಲಂಗಾಣದ ಒಸ್ಮಾನಿಯಾ ಜನರಲ್ ಆಸ್ಪತ್ರೆಯ ವೈದ್ಯರು ಈ ಬಾಲಕಿಯ ಉದರದಲ್ಲಿ ಯಶಸ್ವಿಯಾಗಿ ಚಿಕಿತ್ಸೆ ನಡೆಸಿ ಅಲ್ಲಿ ಶೇಖರಣೆಯಾಗಿದ್ದ ಬೃಹತ್ ಪ್ರಮಾಣದ ಕೂದಲನ್ನು ಹೊರ ತೆಗೆದಿದ್ದಾರೆ.



ಹೈದರಾಬಾದ್ ನ ಶಂಶಾಬಾದ್ ಮೂಲದ ಸಂತ್ರಸ್ತ ಹುಡುಗಿ ತೀವ್ರ ಅಪೌಷ್ಠಿಕತೆಯಿಂದ ಬಳಲುತ್ತಿದ್ದಳು. ಅಲ್ಲದೆ, ತನ್ನ ತೀವ್ರ ಹಸಿವನ್ನು ಹತ್ತಿಕ್ಕಲು ತನ್ನ ತಲೆಯ ಕೂದಲನ್ನೇ ಸೇವಿಸುತ್ತಾ ಬಂದಿದ್ದಳು ಎಂದು ವೈದ್ಯರು ತಿಳಿಸಿದ್ದಾರೆ. ಹೀಗೆ ಸೇವಿಸಿದ್ದ ಕೂದಲು ಹೊಟ್ಟೆ ಹಾಗೂ ಸಣ್ಣ ಕರುಳಿನಲ್ಲಿ ಶೇಖರಣೆಯಾಗಿತ್ತು. ಸ್ಕ್ಯಾನಿಂಗ್ ವೇಳೆ ಈ ಅಂಶ ಬಯಲಿಗೆ ಬಂತು ಎಂದು ಅವರು ಹೇಳಿದ್ದಾರೆ.



ಒಂದು ತಿಂಗಳ ಹಿಂದೆ ಬಾಲಕಿಯು ಹೊಟ್ಟೆ ನೋವಿನಿಂದ ಆಸ್ಪತ್ರೆಗೆ ದಾಖಲಾದಾಗಿದ್ದಳು. ಬಾಲಕಿ ಚಿಕಿತ್ಸೆಗೆ ಆಗಮಿಸಿದ್ದ ವೇಳೆ ಆಕೆಗೆ ಕೊರೊನಾ ಪಾಸಿಟಿವ್ ಕೂಡ ಇದ್ದುದರಿಂದ ಮೊದಲು ಕೊರೊನಾಕ್ಕೆ ಚಿಕಿತ್ಸೆ ನೀಡಲಾಗಿತ್ತು. ಆ ಬಳಿಕ ಶಸ್ತ್ರ ಚಿಕಿತ್ಸೆ ನಡೆಸಲಾಗಿದ್ದು, ಬಾಲಕಿಯ ಹೊಟ್ಟೆಯಿಂದ 2 ಕಿಲೋ ಗ್ರಾಂಗಳಷ್ಟು ಕೂದಲನ್ನು ಹೊರತೆಗೆಯಲಾಗಿದೆ.



ಒಸ್ಮಾನಿಯ ಆಸ್ಪತ್ರೆಯ ಅಧೀಕ್ಷಕ ಡಾ. ನಾಗೇಂದ್ರ ಬಿ. ಅವರನ್ನೊಳಗೊಂಡ ಉನ್ನತ ಮಟ್ಟದ ವೈದ್ಯರ ತಂಡವು ಈ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದೆ. 150 ಸೆಂ.ಮೀ. ಉದ್ದದ 2 ಕೆಜಿಗಳಷ್ಟು ಕೂದಲನ್ನು ಶಸ್ತ್ರ ಚಿಕಿತ್ಸೆಯ ಮೂಲಕ ಯಶಸ್ವಿಯಾಗಿ ಹೊರತೆಗೆಯಲಾಗಿದೆ.

Ads on article

Advertise in articles 1

advertising articles 2

Advertise under the article