-->
Ex MLA extends helping hand to photographers - ಲಾಕ್ ಡೌನ್ ಸಂತ್ರಸ್ತ ಛಾಯಾಗ್ರಾಹಕರಿಗೆ ಮಾಜಿ ಶಾಸಕ ಜೆ.ಆರ್.ಲೋಬೋ ದಿನಸಿ ಕಿಟ್ ವಿತರಣೆ

Ex MLA extends helping hand to photographers - ಲಾಕ್ ಡೌನ್ ಸಂತ್ರಸ್ತ ಛಾಯಾಗ್ರಾಹಕರಿಗೆ ಮಾಜಿ ಶಾಸಕ ಜೆ.ಆರ್.ಲೋಬೋ ದಿನಸಿ ಕಿಟ್ ವಿತರಣೆ




ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿ ಇರುವ ದಕ್ಷಿಣ ಕನ್ನಡ ಜಿಲ್ಲೆಯ ಛಾಯಾಗ್ರಾಹಕರಿಗೆ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಜೆ. ಆರ್. ಲೋಬೊ ದಿನಸಿ ಸಾಮಗ್ರಿಗಳ ಕಿಟ್ ಗಳನ್ನು ವಿತರಿಸಿದರು.




ಕದ್ರಿಯಲ್ಲಿರುವ ಛಾಯಾ ಭವನ ಕಟ್ಟಡದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್, ಮಂಗಳೂರು ವಲಯ, ಇದರ ಸಂಘದ ಸದಸ್ಯರಿಗೆ ದಿನಸಿ ಸಾಮಗ್ರಿಗಳ ಕಿಟ್ ಗಳನ್ನು ಹಸ್ತಾಂತರ ಕಾರ್ಯಕ್ರಮ ನಡೆಯಿತು.



ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ಲೋಬೊ, ಛಾಯಾಗ್ರಾಹಕರದು ಸ್ವಂತ ಉದ್ಯೋಗ. ಎಲ್ಲಾ ಛಾಯಾಗ್ರಾಹಕರು ಸ್ಥಿತಿವಂತರಲ್ಲ. ಕಳೆದ ಎರಡು ವರ್ಷಗಳಿಂದ ಕೊರೋನಾ ಸೋಂಕಿನಿಂದ ಹಲವಾರು ಕಾರ್ಯಕ್ರಮಗಳು ರದ್ದಾಗಿರುವ ಪರಿಣಾಮದಿಂದ ಛಾಯಾಗ್ರಾಹಕರು ಕಂಗೆಟ್ಟಿದ್ದಾರೆ ಎಂದು ಹೇಳಿದರು.


ಕೆಲವು ಛಾಯಾಗ್ರಾಹಕರು ಬಡತನದಿಂದ ಜೀವನ ಸಾಗಿಸಲು ಕಷ್ಟ ಪಡುತ್ತಿದ್ದಾರೆ. ಕೋವಿಡ್ ಲಾಕ್ ಡೌನ್ ನಿಂದ ಕೆಲವೊಂದು ಕೈಗಾರಿಕೆಗಳಿಗೆ ಸರಕಾರ ವಿನಾಯಿತಿ ನೀಡಿದೆ. ಆದರೆ ಛಾಯಾಗ್ರಾಹಕರ ಸ್ಟುಡಿಯೋಗಳಿಗೆ ಸರಕಾರ ವಿನಾಯಿತಿ ನೀಡಿಲ್ಲ ಎಂದು ವಿಷಾದ ವ್ಯಕ್ತಪಡಿದರು.





ಈ ಸಂಕಷ್ಟವನ್ನು ಅರಿತುಕೊಂಡು ಕಾಂಗ್ರೆಸ್ ಪಕ್ಷ ಬಡವರಿಗೆ ಸಹಾಯ ಮಾಡಲು ಮುಂದೆ ಬಂದಿದೆ. ಪ್ರಶ್ನಾತೀತವಾಗಿ ಕೆಲಸ ಮಾಡುತ್ತಿರುವ ಛಾಯಾಗ್ರಾಹಕರ ಕಷ್ಟಕ್ಕೆ ಪ್ರಾಮಾಣಿಕ ರೀತಿಯಲ್ಲಿ ಕಾಂಗ್ರೆಸ್ ಪಕ್ಷ ಸ್ಪಂದನೆ ಮಾಡುತ್ತದೆ ಎಂದು ಅವರು ಹೇಳಿದರು.



ಕಾರ್ಯಕ್ರಮದಲ್ಲಿ ಛಾಯಾಗ್ರಾಹಕರ ಅಸೋಸಿಯೇಷನ್ ಅಧ್ಯಕ್ಷ ಮಧು ಮಂಗಳೂರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಸಾಲ್ಯಾನ್, ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳಾದ ಸ್ಟಾನಿ ಅಲ್ವಾರಿಸ್, ಟಿ. ಕೆ. ಸುಧೀರ್, ನೀರಜ್ ಪಾಲ್, ಮುಖಂಡರುಗಳಾದ ರಮಾನಂದ ಪೂಜಾರಿ, ಆಸೀಫ್ ಜೆಪ್ಪು, ಸವಾನ್ ಎಸ್. ಕೆ., ಅಶೋಕ್, ಆಸ್ಟನ್, ಶಾನ್ ಡಿಸೋಜಾ, ಲಕ್ಷ್ಮಣ್ ಶೆಟ್ಟಿ, ರೋಷನ್, ಉದಯ್ ಕುಂದರ್, ಯಸ್ವಂತ್ ಪ್ರಭು, ಛಾಯಾಗ್ರಾಹಕರ ಸಂಘದ ಶ್ರೀಕಾಂತ್, ವಿಠಲ್ ಚೌಟ, ಜಗನ್ನಾಥ್ ಶೆಟ್ಟಿ, ಹರೀಶ್ ಅಡ್ಯಾರ್, ಅಜಯ್ ಮೊದಲಾದವರು ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article