-->
Kit distrubution by congress- ಮಂಗಳೂರು: ಬೋಳೂರು ಬೊಕ್ಕಪಟ್ನ ದಲ್ಲಿ ಕಾಂಗ್ರೆಸ್ ವತಿಯಿಂದ ದಿನಸಿ ಕಿಟ್ ವಿತರಣೆ

Kit distrubution by congress- ಮಂಗಳೂರು: ಬೋಳೂರು ಬೊಕ್ಕಪಟ್ನ ದಲ್ಲಿ ಕಾಂಗ್ರೆಸ್ ವತಿಯಿಂದ ದಿನಸಿ ಕಿಟ್ ವಿತರಣೆ








ಮಂಗಳೂರು ನಗರದ ಬೋಳೂರು ಬೊಕ್ಕಪಟ್ನ ದಲ್ಲಿ ಕೋವಿಡ್ ಲಾಕ್ ಡೌನ್ ನಿಂದಾಗಿ ತೊಂದರೆಗೆ ಒಳಗಾದ ಬಡ ಜನರಿಗೆ ಕಾಂಗ್ರೆಸ್ ವತಿಯಿಂದ ದಿನಸಿ ಸಾಮಗ್ರಿಗಳ ಕಿಟ್ ಗಳನ್ನು ವಿತರಿಸಲಾಯಿತು.


ಯುವ ಉದ್ಯಮಿ, ಕಾಂಗ್ರೆಸ್ ಕಾರ್ಯಕರ್ತ ಶಾನ್ ಡಿಸೋಜಾ ರವರು, ಅವರ ತಂದೆ ದಿ. ಸ್ಟಾನಿ ಡಿಸೋಜಾ ಮತ್ತು ಅವರ ದೊಡ್ಡಪ್ಪ ದಿ. ಜಾನ್ ಡಿಸೋಜಾ ರವರ ಸ್ಮರಣಾರ್ಥವಾಗಿ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಜೆ. ಆರ್. ಲೋಬೊ ರವರು ಸಂತ್ರಸ್ತರಿಗೆ ವಿತರಿಸಿದರು.






ಬಳಿಕ ಮಾತನಾಡಿದ ಲೋಬೊ ಅವರು, ಈ ಒಂದು ಭೀಕರ ಕೋವಿಡ್ ರೋಗದಿಂದ ಜನ ತತ್ತರಿಸಿ ಹೋಗಿದ್ದಾರೆ. ಕೆಲಸವಿಲ್ಲದೇ ಜನ ಜೀವನ ಸಾಗಿಸಲು ಹರಸಾಹಸ ಪಡುತ್ತಿದ್ದಾರೆ. ಜನರಿಗೆ ಬೇಕಾಗುವ ಅಗತ್ಯ ವಸ್ತುಗಳನ್ನು ಒದಗಿಸಲು ಸರಕಾರ ವಿಫಲವಾಗಿದೆ. ಜನರ ಕಷ್ಟಕ್ಕೆ ಸ್ಪಂದಿಸುವ ಕೆಲಸ ಸರಕಾರ ಮಾಡುತ್ತಿಲ್ಲ. ಅದಕ್ಕೆ ಕಾಂಗ್ರೆಸ್ ನಾಯಕರು, ಪದಾಧಿಕಾರಿಗಳು, ಕಾರ್ಯಕರ್ತರು ಜನರನ್ನು ಸ್ಪಂದಿಸುವಂತಹ ಕಾರ್ಯ ಮಾಡುವುದರ ಮೂಲಕ ಮಾದರಿಯಾಗಿದ್ದಾರೆ ಎಂದರು.


ಕಾರ್ಯಕ್ರಮದಲ್ಲಿ ನಗರ ಬ್ಲಾಕ್ ಅಧ್ಯಕ್ಷ ಪ್ರಕಾಶ್ ಸಾಲ್ಯಾನ್, ಲೊಯ್ ಡಿಸೋಜಾ, ಕ್ಲೇರ ಡಿಸೋಜಾ, ಗ್ರೇಸಿ ಡಿಸೋಜಾ, ಅಕ್ಷತಾ ಡಿಸೋಜಾ, ರುಡಾಲ್ಫ್ ಸಲ್ದಾನ, ಟಿ. ಕೆ. ಸುಧೀರ್, ಉದಯ್ ಕುಂದರ್, ಲಕ್ಷ್ಮಣ್ ಶೆಟ್ಟಿ, ಯಶವಂತ ಪ್ರಭು, ಯೋಗೀಶ್ ನಾಯಕ್, ರೋಷನ್, ಅಶೋಕ್, ಮಂಜುಳಾ ನಾಯಕ್, ಸಮರ್ಥ ಭಟ್, ಕೃತಿನ್ ಕುಮಾರ್, ಆಸೀಫ್ ಜೆಪ್ಪು, ಆಸ್ಟನ್ ಸಿಕ್ವೇರಾ, ಜೀವನ್ ಮೋರೆ ಮೊದಲಾದವರು ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article