kit distributed - ಕಂಟೋನ್ಮೆಂಟ್, ಕುಲಶೇಖರ ಪ್ರದೇಶದಲ್ಲಿ ದಿನಸಿ ಕಿಟ್ ವಿತರಣೆ
ಕೋವಿಡ್ ಲಾಕ್ ಡೌನ್ ನಿಂದಾಗಿ ತೊಂದರೆಕ್ಕೊಳಗಾದ ನಗರದ ಕಂಟೋನ್ ಮೆಂಟ್ ವಾರ್ಡ್ ವ್ಯಾಪ್ತಿಯಲ್ಲಿರುವ ಪಾಂಡೇಶ್ವರದ ಶಿವನಗರ, ಪೊಲೀಸ್ ಲೈನ್ ಮತ್ತು ಅತ್ತಾವರ ವೈದ್ಯನಾಥ ನಗರ ಪ್ರದೇಶಗಳಲ್ಲಿ ವಾಸಿಸುತ್ತಿರುವ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಜೆ. ಆರ್. ಲೋಬೊ ರವರು ದಿನ ಸಾಮಗ್ರಿಗಳ ಕಿಟ್ ಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಬ್ಲಾಕ್ ಉಸ್ತುವಾರಿ ಹೊನ್ನಯ್ಯ, ವಾರ್ಡ್ ಅಧ್ಯಕ್ಷ ಸದಾಶಿವ ಕುಲಾಲ್,ಟಿ. ಕೆ. ಸುಧೀರ್, ನೀರಜ್ ಪಾಲ್, ದುರ್ಗಾಪ್ರಸಾದ್, ಭಾಸ್ಕರ್ ರಾವ್, ದಿನೇಶ್ ಪಿ. ಎಸ್.,ರಮಾನಂದ ಪೂಜಾರಿ, ಉದಯ್ ಕುಂದರ್,ಸವಾನ್ ಎಸ್. ಕೆ., ಆಸೀಫ್ ಜೆಪ್ಪು,ಪ್ರವೀತ್ ಕರ್ಕೇರ, ದಿನೇಶ್ ಕುಮಾರ್,ವಿದ್ಯಾ, ಕಮಲ, ಕೃತಿನ್ ಕುಮಾರ್, ಯಶವಂತ ಪ್ರಭು,ಜೀವನ್ ಮೋರೆ, ರಹಿಮಾನ್, ಮಹೇಶ್ ಮೊದಲಾದವರು ಉಪಸ್ಥಿತರಿದ್ದರು.
ಕುಲಶೇಖರದಲ್ಲಿ ಕಾಂಗ್ರೆಸ್ ವತಿಯಿಂದ ದಿನಸಿ ಕಿಟ್ ವಿತರಣೆ..
ಕಾಂಗ್ರೆಸ್ ಪಕ್ಷದ ವತಿಯಿಂದ ನಗರದ ಕುಲಶೇಖರದಲ್ಲಿ ಇಂದು ತಾ 11.6.2021ರಂದು ಕೋವಿಡ್ ಸಂಕಷ್ಟಕ್ಕೆ ಒಳಗಾದವರಿಗೆ ಮಂಗಳೂರು ದಕ್ಷಿಣ ಕ್ಷೇತ್ರದ ಮಾಜಿ ಶಾಸಕರಾದ ಜೆ. ಆರ್. ಲೋಬೊ ರವರು ದಿನಸಿ ಸಾಮಾನುಗಳ ಕಿಟ್ ಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಅಳಪೆ ವಾರ್ಡ್ ಅಧ್ಯಕ್ಷ ಡೆನಿಸ್ ಡಿಸಿಲ್ವ, ಶೋಭಾ ಕೇಶವ, ಟಿ. ಕೆ. ಸುಧೀರ್, ನೀರಜ್ ಪಾಲ್, ಉದಯ್ ಕುಂದರ್,ಜೆಸ್ಸಿ ಪಿಂಟೋ,ಯಶವಂತ ಪ್ರಭು, ಕೃತಿನ್ ಕುಮಾರ್,ಆಸೀಫ್ ಜೆಪ್ಪು, ಆಸ್ಟನ್ ಸಿಕ್ವೇರಾ, ಶಾನ್ ಡಿಸೋಜಾ, ಜೀವನ್ ಮೋರೆ, ರೋಷನ್, ರಹಿಮಾನ್ ಮೊದಲಾದವರು ಉಪಸ್ಥಿತರಿದ್ದರು.