Lobo Kit distrubution- ಮಂಗಳಾದೇವಿ: ಆರ್ಥಿಕವಾಗಿ ಹಿಂದುಳಿದವರಿಗೆ ಕಾಂಗ್ರೆಸ್‌ನಿಂದ ರೇಷನ್ ಕಿಟ್ ವಿತರಣೆ
ಮಂಗಳೂರಿನ ಮಂಗಳಾದೇವಿ ವಾರ್ಡಿನಲ್ಲಿರುವ ಆರ್ಥಿಕವಾಗಿ ಹಿಂದುಳಿದವರಿಗೆ ಎಮ್ಮೆಕೆರೆ ಬಳಿಯಿರುವ ಮಾಜಿ ಮಾಜಿ ಶಾಸಕ ದಿ. ಎಸ್. ಕೆ. ಅಮೀನ್ ನಿವಾಸದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ರೇಷನ್ ಕಿಟ್ ಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕರಾದ ಜೆ. ಆರ್. ಲೋಬೋ, ಕೋವಿಡ್ ಎಲ್ಲರಿಗೂ ಒಂದು ಸಂದಿಗ್ದ ಪರಿಸ್ಥಿತಿಯನ್ನು ಸೃಷ್ಟಿಸಿದೆ. ಈ ಸಂಕ್ರಮಣ ಕಾಲದಲ್ಲಿ ಸಂತ್ರಸ್ತ ಜನರಿಗೆ ನೆರವು ನೀಡುವ ಪ್ರಯತ್ನವನ್ನು ಕಾಂಗ್ರೆಸ್ ಪಕ್ಷ ಮಾಡುತ್ತಿದೆ ಎಂದು ಹೇಳಿದರು.
ದೇಶದ ಪ್ರತಿ ಕಷ್ಟಕಾಲದಲ್ಲೂ ಕಾಂಗ್ರೆಸ್ ಬಡ ಜನರ ಪರವಾಗಿ ನಿಂತಿದೆ ಎಂದು ಹೇಳಿದ ಅವರು, ಈಗಿನ ಸಂಕಷ್ಟಮಯ ಕಾಲದಲ್ಲಿ ಎಲ್ಲರಿಗೂ ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿ ಅವರ ಹೆಸರು ನೆನಪಾಗುತ್ತದೆ. ಅವರು ಅಧಿಕಾರದಲ್ಲಿದ್ದಾಗ ಬಡವರಿಗೆ ಅನೇಕ ಉಪಯುಕ್ತ ಯೋಜನೆಗಳನ್ನು, ಕಾರ್ಯಕ್ರಮಗಳನ್ನು ರೂಪಿಸಿದ್ದರು ಎಂದು ನೆನಪಿಸಿದರು.
ಉಳುವವನೇ ಜಮೀನಿನ ಒಡೆಯ ಎಂಬ ಯೋಜನೆಯನ್ನು ಕಾರ್ಯರೂಪಕ್ಕೆ ತಂದು ಬಡವರಿಗೆ ಸ್ವಂತ ಜಮೀನು ಮಾಡುವ ಕನಸು ಸಾಕಾರಗೊಂಡಿತು. ಈ ಸಹಾಯ ಮಾಡುವುದರ ಮೂಲಕ ಸಣ್ಣ ಮತ್ತು ಅತಿ ಸಣ್ಣ ರೈತರು ಸಮಾಜದಲ್ಲಿ ತಲೆ ಎತ್ತಿ ಜೀವನ ಸಾಗಿಸಲು ನೆರವಾಗಿದ್ದರು ಎಂದು ಹೇಳಿದರು.
ಇದೇ ಪರಂಪರೆಯನ್ನು ಕಾಂಗ್ರೆಸ್ ನಾಯಕರು ಮತ್ತು ಅದರ ಕಾರ್ಯಕರ್ತರು ಮುಂದುವರಿಸಿಕೊಂಡು ಬರುತ್ತಿದ್ದಾರೆ. ಜೊತೆಗೆ ಸಮಾಜಮುಖಿ ಕಾರ್ಯಗಳನ್ನು ನಡೆಸಿಕೊಡು ಬಂದಿರುತ್ತಾರೆ ಎಂದು ಅವರು ಹೇಳಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಲೀಂ ವಹಿಸಿದ್ದರು. ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ನಮಿತಾ ರಾವ್, ವಾರ್ಡ್ ಅಧ್ಯಕ್ಷ ನರೇಶ್, ಪಕ್ಷದ ಮುಖಂಡರಾದ ಟಿ.ಕೆ. ಸುಧೀರ್, ನೀರಜ್ ಪಾಲ್, ದುರ್ಗಾ ಪ್ರಸಾದ್, ರಮಾನಂದ ಪೂಜಾರಿ, ಎಸ್.ಕೆ. ಸವಾನ್, ಪ್ರೇಮ್, ಪ್ರವೀತಾ ಕರ್ಕೇರ, ಉದಯ್ ಕುಂದರ್, ಆಸೀಫ್, ಕೃತಿನ್ ಕುಮಾರ್, ಯಶವಂತ ಪ್ರಭು, ಜೀವನ್ ಮೋರೆ, ರೋಷನ್, ಶಾನ್ ಡಿಸೋಜಾ, ಅಶೋಕ್, ಆಸ್ಟನ್ ಸಿಕ್ವೇರಾ, ಲಕ್ಷ್ಮಣ್ ಶೆಟ್ಟಿ, ನೆಲ್ಸನ್ ಮೊಂತೆರೊ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.