
Masa Kit Help- ತೀರಾ ಆರ್ಥಿಕ ಸಂಕಷ್ಟದಲ್ಲಿದ್ದ ರಿಕ್ಷಾ ಚಾಲಕರಿಗೆ ಆಹಾರ ಧಾನ್ಯಗಳ ಕಿಟ್ ವಿತರಣೆ
ಮಂಗಳೂರು: ಜೂನ್ 20,2021 ಕೊರೋನಾ ಕಾಲದಲ್ಲಿ ತೀರಾ ಆರ್ಥಿಕ ಸಂಕಷ್ಟದಲ್ಲಿರುವ ಬಜಾಲ್ ಸುತ್ತಮುತ್ತಲ ಪರಿಸರದ ಆಯ್ದ 60 ರಿಕ್ಷಾ ಚಾಲಕರಿಗೆ ಆಹಾರ ಧಾನ್ಯಗಳ ಕಿಟ್ ಗಳನ್ನು ಪಕ್ಕಲಡ್ಕ ಯುವಕ ಮಂಡಲದ ಭಗತ್ ಸಿಂಗ್ ಭವನದಲ್ಲಿ ವಿತರಿಸಲಾಯಿತು.
ಪಕ್ಕಲಡ್ಕ ಯುವಕ ಮಂಡಲದ ಮಾಜಿ ಕಾರ್ಯದರ್ಶಿ, ಮಂಗಳೂರು ಅಸೋಸಿಯೇಷನ್ ಸೌದಿ ಅರೇಬಿಯಾ ಇದರ ಅಧ್ಯಕ್ಷರಾದ ಸತೀಶ್ ಕುಮಾರ್ ಬಜಾಲ್ ಹಾಗೂ ಕೊಡುಗೈ ದಾನಿ ಶ್ರೀಮತಿ ಮತ್ತು ಶ್ರೀ ಜೋಯ್ ಫೆರ್ನಾಂಡೀಸ್ ಸೌದಿ ಅರೇಬಿಯಾ ಇವರ ಸಹಕಾರದೊಂದಿಗೆ ಈ ಕಾರ್ಯಕ್ರಮ ನಡೆಯಿತು.
ಈ ವೇಳೆ ಮುಖ್ಯ ಅತಿಥಿಯಾಗಿ ಸಂತ ಜೋಸೇಫರ ಪ್ರೌಢಶಾಲೆ ಬಜಾಲ್ ಇದರ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಲಿನೆಟ್ ಸಿಕ್ವೇರಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಉದ್ಯಮಿ ಸದಾಶಿವದಾಸ್, ರಾಮಚಂದ್ರ ಆಳ್ವ, ಪಕ್ಕಲಡ್ಕ ಯುವಕ ಮಂಡಲ ಅಧ್ಯಕ್ಷರಾದ ದೀಪಕ್ ಬಜಾಲ್, ಕಾರ್ಯದರ್ಶಿ ಜಗದೀಶ್ ಬಜಾಲ್, ಮಾಜಿ ಕಾರ್ಯದರ್ಶಿ ಕಮಲಾಕ್ಷ ಶೆಟ್ಟಿ, ಸ್ಥಳೀಯ ಮುಖಂಡ ಬಿ ನಾಗೇಶ್ ಶೆಟ್ಟಿ, ಸಂತೋಷ್ ಬಜಾಲ್ ಉಪಸ್ಥಿತರಿದ್ದರು.
ಕಾರ್ಯಕ್ರಮದ ನೇತೃತ್ವವನ್ನು ಪಕ್ಕಲಡ್ಕ ಯುವಕ ಮಂಡಲದ ಸದಸ್ಯರಾದ ಧೀರಜ್, ಪ್ರಿತೇಶ್, ಉದಯ ಕುಂಟಲಗುಡ್ಡೆ, ನಾಗರಾಜ್ ಬಜಾಲ್, ನೂರುದ್ದೀನ್, ಪ್ರಕಾಶ್ ಶೆಟ್ಟಿ, ವರ ಪ್ರಸಾದ್, ಪ್ರಶಾಂತ್ ಕುಡ್ತಡ್ಕ , ಕೃಷ್ಣ ಮೊದಲಾದವರು ವಹಿಸಿದ್ದರು.