MRPL- ಎಂಆರ್‌ಪಿಎಲ್ ಮಾಲಿನ್ಯ ಬಾಧಿತರಿಗೆ ದಿನಸಿ ಕಿಟ್ ವಿತರಿಸಿ: ಎಂಆರ್‌ಪಿಎಲ್‌ಗೆ ಪತ್ರ
Saturday, June 12, 2021
Mrpl ನ ಕೆಮಿಕಲ್ ಮಾಲಿನ್ಯದ ನೇರ ಬಲಿಪಶುಗಳಾದ ಜೋಕಟ್ಟೆ (ತೋಕೂರು 62) ಗ್ರಾಮದ ಪಂಚಾಯತ್ ಸಿ ಎಸ್ ಆರ್ ನಿಧಿಯಿಂದ ಲಾಕ್ ಡೌನ್ ನಿಂದ ಹಸಿದು ಕೂತಿರುವ ಗ್ರಾಮಸ್ಥರಿಗೆ ದಿನಸಿ ಸಾಮಾಗ್ರಿಯ ಕಿಟ್ ವಿತರಿಸುವಂತೆ ಕಂಪೆನಿಗೆ ಪತ್ರ ಬರೆದಿದೆ.
ಊರಿನ ನೀರು, ಗಾಳಿಯನ್ನು ವಿಷಮಯ ಗೊಳಿಸುತ್ತಿರುವ, ಉದ್ಯೋಗವನ್ನು ಸ್ಥಳೀಯರಿಗೆ ನೀಡಲು ನಿರಾಕರಿಸುತ್ತಿರುವ ಲಕ್ಷಾಂತರ ಕೋಟಿ ರೂಪಾಯಿ ಬಂಡವಾಳದ ಕಂಪೆನಿ ಕೊರೋನ ಸಾಂಕ್ರಾಮಿಕದ ಏರು ಕಾಲದಲ್ಲಿಯೂ ತನ್ನ ಸುತ್ತಲ ಗ್ರಾಮದ ಬಡವರಿಗೆ ಕನಿಷ್ಟ ಆಹಾರ ಕಿಟ್ ಗಳನ್ನೂ ನೀಡಲು ಮನಸ್ಸು ಮಾಡದಿರುವುದು ಅನ್ಯಾಯದ, ಅಹಂಕಾರದ ಪರಮಾವಧಿ ಎಂದು ಪತ್ರದಲ್ಲಿ ಹೇಳಲಾಗಿದೆ.
ಪ್ರಥಮ ಲಾಕ್ ಡೌನ್ ಅವಧಿಯಲ್ಲಿ ಈ ಕಂಪೆನಿಯಲ್ಲಿ ದುಡಿಯುತ್ತಿದ್ದ ವಲಸೆ ಕಾರ್ಮಿಕರಿಗೂ ಗ್ರಾಮಸ್ಥರೇ ಆಹಾರ ಬೇಯಿಸಿ ಹಾಕಬೇಕಾದ ಸ್ಥಿತಿ ಉಂಟಾಗಿತ್ತು. ಕಂಪೆನಿಯ ಸಿಎಸ್ ಆರ್ ನಿಧಿ ಸುತ್ತಲ ಗ್ರಾಮಸ್ಥರ ಹಕ್ಕು. MRPL ತಕ್ಷಣ ಗ್ರಾಮದ ಅರ್ಹರಿಗೆ ಆಹಾರ ಧಾನ್ಯ ವಿತರಿಸಲಿ ಎಂದು ಪತ್ರದಲ್ಲಿ ಹೇಳಲಾಗಿದೆ.