Mysore Lady video viral- ಮೈಸೂರಿನಲ್ಲಿ ಯುವತಿ ರಂಪಾಟ- ಪೊಲೀಸರಿಗೆ ಪಬ್ಲಿಕ್‌ನಲ್ಲೇ ಆವಾಜ್, ವೀಡಿಯೋ ವೈರಲ್
Tuesday, June 8, 2021
ಮೈಸೂರು- ಲಾಕ್‌ಡೌನ್ ಹಿನ್ನೆಲೆಯಲ್ಲಿ ನಡೆಯುತ್ತಿರುವ ಪೋಲಿಸರ ತಪಾಸಣೆ ವೇಳೆ ಬೈಕ್‌ನಲ್ಲಿ ಬಂದ ಯುವತಿಯೊಬ್ಬಳು ಸಾರ್ವಜನಿಕವಾಗಿ ಆವಾಜ್ ಹಾಕಿದ ಘಟನೆ ಮೈಸೂರಿನಲ್ಲಿ ನಡೆದಿದೆ.
ಸಭ್ಯ ನಾಗರಿಕರು ಸರ್ವೆ ಸಾಮಾನ್ಯವಾಗೊ ಪೊಲೀಸರ ತಪಾಸಣೆ ವೇಳೆ ಸುಮ್ಮನಿರುತ್ತಾರೆ. ಆದರೆ ಇಲ್ಲೊಬ್ಬ ಯುವತಿ ಪೊಲೀಸರ ತಪಾಸನೆಯನ್ನು ವಿರೋಧಿಸುವ ಧೈರ್ಯ ತೋರಿದ್ದಾರೆ. ಜೊತೆಗೆ ರಂಪಾಟವನ್ನೂ ಮಡಿದ್ದಾಳೆ.
ಮೈಸೂರಿನ ಪಡುವಾರಳ್ಳಿ ಬಳಿಯ ವಾಲ್ಮೀಕಿ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಕೊರೊನಾ ನಿಯಮ ಉಲ್ಲಂಘನೆ ಮಾಡುವರರ ವಿರುದ್ಧ ಪೋಲಿಸರು ತಪಾಸಣೆ ಮಾಡುತ್ತಿದ್ದಾಗ ಈಕೆ ಖಾಕಿ ವಿರುದ್ಧವೇ ಆವಾಜ್ ಹಾಕಿದ್ದಾಳೆ.
ಈ ವೇಳೆ ಬೈಕ್ ನಲ್ಲಿ ಸ್ಪೀಡ್ ಆಗಿ ಬಂದ ಯುವತಿಯನ್ನು ಮಹಿಳಾ ಪೋಲಿಸರು ತಡೆದು ವಿಚಾರಣೆಗೆ ಮುಂದಾದರು. ಆದರೆ ಪೋಲಿಸರಿಗೆ ಅವಾಜ್ ಹಾಕಿದ ಆ ಲೇಡಿ ಬಾಂಡ್ ರಂಪಾಟ ಮಾಡಿದಳು.
ಬಾಯಿಗೆ ಬಂದ ಹಾಗೆ ಮಾತನಾಡಿ ರೌದ್ರಾವತಾರ ಪ್ರದರ್ಶಿಸಿದಳು. ಪೊಲೀಸರು ಈಕೆಯ ರಂಪಾಟದ ವೀಡಿಯೋ ಶೂಟ್ ಮಾಡಿ ಈಕೆ ಮೇಲೆ ಕೇಸ್ ಹಾಕಿದ್ದಾರೆ.