-->
Operation King Cobra - ಹಳೆ ಮನೆಯಲ್ಲಿ ಅವಿತಿದ್ದ ಕಾಳಿಂಗ ಸರ್ಪ ಸುರಕ್ಷಿತವಾಗಿ ಹಿಡಿದ ಸ್ನೇಕ್ ಅಶೋಕ್

Operation King Cobra - ಹಳೆ ಮನೆಯಲ್ಲಿ ಅವಿತಿದ್ದ ಕಾಳಿಂಗ ಸರ್ಪ ಸುರಕ್ಷಿತವಾಗಿ ಹಿಡಿದ ಸ್ನೇಕ್ ಅಶೋಕ್




ಬೆಳ್ತಂಗಡಿ ತಾಲೂಕಿನ ಅಳದಂಗಡಿ ಸಮೀಪದ ನಾವರ ಗ್ರಾಮದಲ್ಲಿ ಸ್ನೇಕ್ ಅಶೋಕ್ ಬೃಹತ್ ಗಾತ್ರದ ಕಾಳಿಂಗ ಸರ್ಪವೊಂದನ್ನು ಸುರಕ್ಷಿತವಾಗಿ ಹಿಡಿದಿದ್ದಾರೆ.






ಇಲ್ಲಿನ ಕೋಡೆಲ್ ಎಂಬಲ್ಲಿ ಹಳೆಯ ಮನೆಯೊಂದರಲ್ಲಿ ಈ ಕಾಳಿಂಗ ಸರ್ಪ ಆಗಮಿಸಿತ್ತು. ಕಳೆದ ಮೂರು ದಿನಗಳಿಂದ ಕಾಳಿಂಗ ಸರ್ಪ ಈ ಮನೆಯಲ್ಲಿ ಅವಿತಿತ್ತು. ಇದನ್ನು ತಮ್ಮ ನಾಜೂಕು ಹಸ್ತದಿಂದ ಉರಗ ಪ್ರೇಮಿ ಸ್ನೇಕ್ ಅಶೋಕ್ ಹಿಡಿದಿದ್ದಾರೆ.



ನಾವರ ಗ್ರಾಮದ ಕೋಡೆಲು ಧರ್ಣಪ್ಪ ಮಲೆಕುಡಿಯರವರ ಹಳೆಯ ಮನೆಯಲ್ಲಿ ಮಳೆಗಾಲದ ಉಪಯೋಗಕ್ಕೆಂದು ಒಣ ಕಟ್ಟಿಗೆಗಳನ್ನು ಸಂಗ್ರಹಿಸಿ ಇಡಲಾಗಿತ್ತು.



ಈ ಕಟ್ಟಿಗೆಗಳ ಎಡೆಯಲ್ಲಿ ಕಾಳಿಂಗ ಸರ್ಪವೊಂದು ಅಡಗಿ ಕುಳಿತಿತ್ತು. ಕಳೆದ ಮೂರು ದಿನಗಳಿಂದ ಬೃಹತ್ ಗಾತ್ರದ ಕಾಳಿಂಗ ಸರ್ಪ ವಾಸವಾಗಿರುವುದು ನಿವಾಸಿಗಳ ಗಮನಕ್ಕೆ ಬಂದಿತ್ತು. 










ಇಂದಲ್ಲ ನಾಳೆ ಅದು ತನ್ನ ಪಾಡಿಗೆ ಹೋಗಬಹುದು ಎಂದು ಸ್ಥಳೀಯ ನಿವಾಸಿಗಳು ತಿಳಿದಿದ್ದರು. ಆದರೆ ಅದು ಹೋಗದ ಕಾರಣ ವಿಚಾರವನ್ನು ಸ್ನೇಕ್ ಅಶೋಕ್ ಲಾಯಿಲ ರವರ ಗಮನಕ್ಕೆ ತರಲಾಯಿತು. ತಕ್ಷಣ ಸ್ಥಳಕ್ಕೆ ಆಗಮಿಸಿದ ಸ್ನೇಕ್ ಅಶೋಕ್ ಈ ಬೃಹತ್ ಗಾತ್ರದ ಕಾಳಿಂಗ ಸರ್ಪವನ್ನು ತನ್ನ ಕೈಗಳಿಂದ ಹಿಡಿದು ಸುರಕ್ಷಿತವಾಗಿ ದಟ್ಟಾರಣ್ಯಕ್ಕೆ ಬಿಟ್ಟಿದ್ದಾರೆ.



ಸ್ನೇಕ್ ಅಶೋಕ್ ಅವರ ಈ ಕಾರ್ಯಾಚರಣೆ ವೀಡಿಯೋ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಅವರ ಕಾರ್ಯಾಚರಣೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.


Ads on article

Advertise in articles 1

advertising articles 2

Advertise under the article