
Prajwal Revanna- MRPL ವಿರುದ್ಧ ಸಂಸತ್ತಿನಲ್ಲಿ ಪ್ರತಿಭಟನೆ: ಸ್ಥಳೀಯ ಯುವಕರ ಪರ ಧ್ವನಿ ಎತ್ತಿದ ಯುವ ಸಂಸದ ಪ್ರಜ್ವಲ್ ರೇವಣ್ಣ
ತುಳುನಾಡಿನ ಯುವಕರಿಗೆ ಉದ್ಯೋಗ ಕೊಡಿಸಲು ಸಂಸತ್ತಿನಲ್ಲಿ ಮಾತನಾಡುತ್ತೇನೆ. ನ್ಯಾಯ ಸಿಗದೇ ಹೋದರೆ MRPL ವಿರುದ್ಧ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು ಹಾಸನದ ಯುವ ಸಂಸದ ಪ್ರಜ್ವಲ್ ರೇವಣ್ಣ ತುಳುನಾಡಿನ ಯುವಕರಿಗೆ ಅಭಯ ನೀಡಿದ್ದಾರೆ.
ಮಂಗಳೂರಿನ MRPLನಲ್ಲಿ ಸ್ಥಳೀಯರನ್ನು ಕಡೆಗಣಿಸಿ ಉತ್ತರ ಭಾರತದವರಿಗೆ ಉದ್ಯೋಗ ಕೊಟ್ಟ ಬಗ್ಗೆ ಯುವ ಜೆಡಿಎಸ್ ನಾಯಕ , ಹಾಸನ ಸಂಸದ ಪ್ರಜ್ವಲ್ ರೇವಣ್ಣ MRPL ಅಧಿಕಾರಿಗಳನ್ನು ಕಂಡು ಕೂಲಂಕಷವಾಗಿ ಮಾಹಿತಿ ಪಡೆದು ಚರ್ಚೆ ನಡೆಸಿದ್ದಾರೆ. ಕೆಲವೊಂದು ವಿಚಾರಗಳ ಬಗ್ಗೆ ಅಧಿಕಾರಿಗಳು ಪ್ರಜ್ವಲ್ ಎದುರು ತಬ್ಬಿಬ್ಬಾಗಿದ್ದು, ತುಳುನಾಡಿಗೆ ನಡೆದ ಈ ಅನ್ಯಾಯದ ವಿರುದ್ದ ಪ್ರಜ್ವಲ್ ರೇವಣ್ಣ ಪ್ರತಿಭಟನೆಯ ಎಚ್ಚರಿಕೆ ಕೊಟ್ಟಿದ್ದಾರೆ ಹಾಗೂ ಈ ಬಗ್ಗೆ ಸಂಸತ್ತಿನಲ್ಲಿ ಪ್ರಸ್ತಾಪಿಸಿ ಇಲ್ಲಿನ ಯುವಕರ ಧ್ವನಿಯಾಗಿ ಮಾತನಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ.
ರಾಜ್ಯ ಸರ್ಕಾರ ಹಾಗೂ ಸ್ಥಳೀಯರಿಂದ ಸುಮಾರು 2800 ಎಕರೆ ಭೂಮಿಯನ್ನು ಪಡೆದು ದೊಡ್ಡ ಕಂಪನಿಯಾಗಿ ಬೆಳೆದಿರುವ MRPL ತುಳುನಾಡಿನ ಸ್ಥಳೀಯ ಯುವಕರಿಗೆ ಕೆಲಸ ನೀಡದೆ ಪ್ರಾದೇಶಿಕತೆಯ ಭಾವನೆಗೆ ದ್ರೋಹ ಮಾಡುತ್ತಿದೆ ಎಂದಿದ್ದಾರೆ.
ಇತ್ತೀಚೆಗೆ 230 ಮಂದಿ ಕೆಲಸಗಾರರನ್ನು ತೆಗೆದುಕೊಳ್ಳುವಾಗ ಕೇವಲ 4 ಮಂದಿ ಸ್ಥಳೀಯರನ್ನು ಮಾತ್ರ ಪರಿಗಣನೆ ಮಾಡಲಾಗಿದೆ. ತುಳುನಾಡಿನ ಯುವಕರಿಗೆ ಉದ್ಯೋಗದಲ್ಲಿ ಮೊದಲ ಅಧ್ಯತೆ ನೀಡಬೇಕೆಂದು ನಾನು ಈಗಾಗಲೇ ಒಮ್ಮೆ ಟ್ವೀಟ್ ಮೂಲಕ ಆಗ್ರಹಿಸಿದ್ದೆ.
File Facebook post of MP Nalin Kumar Kateel
ತಾನು ಹಾಗೂ ತಮ್ಮ ಪಕ್ಷ ಜೆಡಿಎಸ್ ಸದಾ ತುಳುನಾಡಿನ ಯುವಕರ ಜೊತೆ ನಿಲ್ಲಲಿದ್ದೇವೆ. ಇದನ್ನು ದೃಢೀಕರಿಸುವ ನಿಟ್ಟಿನಲ್ಲಿ ತಾನು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದೇನೆ. ಇದು ಯಾವುದೇ ರಾಜಕೀಯ ಬಣ್ಣ ಕಟ್ಟುವುದಕ್ಕಾಗಿ ಭಾಗವಹಿಸಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ನಮ್ಮಿಂದ ಭೂಮಿ ಪಡೆದ ಕೈಗಾರಿಕೆಗಳು ಅ ಭಾಗದ ಸ್ಥಳೀಯ ಜನರಿಗೆ ಉದ್ಯೋಗ ಸೃಷ್ಟಿಸದೆ ಹೋದರೆ ಅಂತಹ ಕಾರ್ಖಾನೆಗಳಿಗೆ ಜಾಗ ನೀಡಿ ಏನು ಪ್ರಯೋಜನ.? ಜಮೀನು ಕಳೆದುಕೊಂಡವರಿಗೆ ಆರ್ಥಿಕವಾಗಿ ಶಕ್ತಿ ತುಂಬುವ ಕೆಲಸವನ್ನು ಈ ಬೃಹತ್ ಕಂಪೆನಿಗಳು ಮಾಡಬೇಕಾಗಿದೆ, ಜಮೀನು ಕಳೆದುಕೊಂಡವರಷ್ಟೇ ಅಲ್ಲದೇ ಈ ಜಮೀನುಗಳಲ್ಲಿ ಕೆಲಸ ಮಾಡುತಿದ್ದವರಿಗೂ ಕೂಡ ಇದರಿಂದ ನಷ್ಟವಾಗಿರುತ್ತದೆ ಎಂದರು.
ಸಂಸತ್ತಿನಲ್ಲಿ ಕೂಡ ಈ ವಿಚಾರವನ್ನು ಪ್ರಸ್ತಾಪಿಸಿ ತುಳುನಾಡಿನ ಯುವಕರಿಗೆ ನ್ಯಾಯ ಕೊಡಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುವೆ. ಎರಡು ಮೂರು ವಾರದ ಒಳಗೆ ಸೂಕ್ತ ನ್ಯಾಯ ಒದಗಿಸಲು MRPL ವಿಫಲವಾದಲ್ಲಿ ಬೃಹತ್ ಪ್ರತಿಭಟನೆಯನ್ನು ಮಾಡಲಾಗುವುದು.