
Priyanka to head election in UP- ಪ್ರಿಯಾಂಕ ಗಾಂಧಿಗೆ ಮೊದಲ ಸತ್ವಪರೀಕ್ಷೆ: ಉ. ಪ್ರದೇಶ ಚುನಾವಣೆಯಲ್ಲಿ ಕೈ ಚುಕ್ಕಾಣಿ ಯುವ ನಾಯಕಿ ಹೆಗಲಿಗೆ
ಪ್ರಿಯಾಂಕ ಗಾಂಧಿಗೆ ರಾಜಕೀಯ ಜೀವನದ ಮೊದಲ ಸತ್ವಪರೀಕ್ಷೆ
ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕೈ ಚುಕ್ಕಾಣಿ
ಯುವ ನಾಯಕಿ ಹೆಗಲಿಗೆ ನಾಯಕತ್ವದ ಜವಾಬ್ದಾರಿ
ಕಾಂಗ್ರೆಸ್ ವರ್ಚಸ್ವೀ ನಾಯಕಿ ಪ್ರಿಯಾಂಕ ಗಾಂಧಿಗೆ ತಮ್ಮ ರಾಜಕೀಯ ಜೀವನದ ಮೊದಲ ಸತ್ವಪರೀಕ್ಷೆ ಎದುರಾಗಿದೆ. ಉತ್ತರ ಪ್ರದೇಶದ ಕಾಂಗ್ರೆಸ್ ಸಂಘಟನೆಯ ಹೊಣೆ ಹೊತ್ತಿರುವ ಅವರ ಹೆಗಲ ಮೇಲೆ ಮುಂಬವರು ವಿಧಾನಸಭಾ ಚುನಾವಣೆಯ ನಾಯಕತ್ವದ ಜವಾಬ್ದಾರಿಯೂ ಬಿದ್ದಿದೆ.
ಆ ರಾಜ್ಯದ ಪ್ರಮುಖ ಕಾಂಗ್ರೆಸ್ ನಾಯಕರ ಒತ್ತಾಸೆಯಂತೆ ಪ್ರಿಯಾಂಕಾ ಈ ಜವಾಬ್ದಾರಿಯನ್ನು ವಹಿಸಲು ಒಪ್ಪಿಕೊಂಡಿದ್ಧಾರೆ ಎಂಬುದನ್ನು ಹಿರಿಯ ನಾಯಕ ಸಲ್ಮಾನ್ ಖುರ್ಷೀದ್ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ರಾಜ್ಯ ಸಂಘಟನೆಯ ಆಳ ಅಗಲವನ್ನು ಬಲ್ಲ ಪ್ರಿಯಾಂಕಾ ವಿಧಾನಸಭಾ ಚುನಾವಣೆಯ ರಣತಂತ್ರವನ್ನು ಹೆಣೆಯಲಿದ್ದಾರೆ. ಪಕ್ಷದ ವ್ಯೂಹಾತ್ಮಕ ಹಾಗೂ ಕಾರ್ಯವೈಖರಿಯನ್ನು ಅವರೇ ನಿರ್ಧರಿಸಲಿದ್ದಾರೆ. ಆಡಳಿತಾರೂಢ ಪಕ್ಷದ ವಿರುದ್ಧ ತನ್ನ ಎಲ್ಲ ಶಕ್ತಿಯನ್ನು ಒಗ್ಗೂಡಿಸಿ ಪಕ್ಷ ಚುನಾವಣೆ ಎದುರಿಸಲಿದೆ ಎಂದು ಖುರ್ಷೀದ್ ಪ್ರಕಟಿಸಿದ್ದಾರೆ.
ಇದೇ ಮೊದಲ ಬಾರಿಗೆ ಪ್ರಿಯಾಂಕಾ ಚುನಾವಣಾ ಪ್ರಚಾರ ಕಾರ್ಯದ ನೇತೃತ್ವ ವಹಿಸಿರುವುದು ರಾಷ್ಟ್ರ ರಾಜಕಾರಣದಲ್ಲಿ ಭಾರೀ ಕುತೂಹಲ ಮೂಡಿಸಿದೆ.