Actress complaint against Porn Video- ತನ್ನದೇ ಅಶ್ಲೀಲ ವೀಡಿಯೋ ನೋಡಿ ಖ್ಯಾತ ನಟಿಗೆ ಶಾಕ್: ಸೈಬರ್ ಕ್ರೈಂ ಪೊಲೀಸರಿಗೆ ದೂರು
ಖ್ಯಾತ ನಟಿಯೊಬ್ಬರ ಮುಖವನ್ನು ಎಡಿಟ್ ಮಾಡಿ ಅಶ್ಲೀಲ ವೀಡಿಯೋದೊಳಕ್ಕೆ ತುರುಕಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿರುವ ಪ್ರಕರಣ ದೇವರ ನಾಡು ಕೇರಳದಲ್ಲಿ ನಡೆದಿದೆ.
ಈ ಪ್ರಕರಣ ನಟಿಯ ಗಮನಕ್ಕೆ ಬಂದಿದ್ದು, ತನ್ನ ಮುಖವನ್ನು ಎಡಿಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ವಿಡಿಯೋವನ್ನು ಹರಿಯ ಬಿಡಲಾಗಿದೆ ಎಂದು ಮಲಯಾಳಂ ನಟಿ ರಮ್ಯಾ ಸುರೇಶ್ ಆರೋಪಿಸಿದ್ದಾರೆ. ಈ ಬಗ್ಗೆ ಅವರು ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮಹಿಳೆಯೋರ್ವರ ಅಶ್ಲೀಲ ವಿಡಿಯೋಗೆ ರಮ್ಯಾ ಸುರೇಶ್ ಅವರ ಮುಖವನ್ನು ಅಳವಡಿಸಿ ಎಡಿಟ್ ಮಾಡಲಾಗಿದ್ದು, ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಡಲಾಗಿದೆ ಎಂದು ನಟಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ನಾನು ನೀಡಿರುವ ದೂರನ್ನು ಅಧಿಕಾರಿಗಳು ಸ್ವೀಕರಿಸಿದ್ದಾರೆ ಮತ್ತು ತನಿಖೆ ಆರಂಭಿಸಿದ್ದಾರೆ. ವಾಟ್ಸ್ಯಾಪ್ ಗ್ರೂಪ್ ಗಳಲ್ಲಿ ಶೇರ್ ಮಾಡಲಾದ ಡೇಟಾವನ್ನು ಪೊಲೀಸರು ತಕ್ಷಣ ಕಲೆಹಾಕಿದ್ದಾರೆ.
ಗ್ರೂಪ್ ನ ಅಡ್ಮೀನ್ ಗಳ ಬಗ್ಗೆಯೂ ಪೊಲೀಸರು ಅಗತ್ಯ ಮಾಹಿತಿ ಪಡೆದುಕೊಂಡಿದ್ದಾರೆ ಎಂದು ದೂರು ನೀಡಿದ ನಟಿ ರಮ್ಯಾ ಸುರೇಶ್ ತಿಳಿಸಿದ್ದಾರೆ. ಕಿಡಿಗೇಡಿಗಳ ಈ ಕೃತ್ಯದಿಂದ ತಾನು ಮಾನಸಿಕವಾಗಿ ಕುಗ್ಗಿ ಹೋಗಿದ್ದೇನೆ ಎಂದು ನಟಿ ಅಳಲು ತೋಡಿಕೊಂಡಿದ್ದಾರೆ.