
Rowdy Murder- ಇನ್ನೊಬ್ಬ ರೌಡಿ ಪತ್ನಿ ಜೊತೆ ಅಕ್ರಮ ಸಂಬಂಧ: ಭೂಗತ ಪಾತಕಿ ರಶೀದ್ ಮಲಬಾರಿ ಬಂಟನ ಹತ್ಯೆ
Wednesday, June 23, 2021
ಇನ್ನೊಬ್ಬ ರೌಡಿಯ ಪತ್ನಿ ಜೊತೆ ಅಕ್ರಮ ಸಂಬಂಧ ಹೊಂದಿರುವ ಕುಖ್ಯಾತ ರೌಡಿ ಸೈಯದ್ ಕರೀಂ ಅಲಿಯನ್ನು ಹತ್ಯೆ ಮಾಡಲಾಗಿದೆ. ಈತ ಕುಖ್ಯಾತ ಭೂಗತ ಪಾತಕಿ ರಶೀದ್ ಮಲಬಾರಿಯ ಸಹಚರನಾಗಿದ್ದ.
ಈತನನ್ನು ಬೆಂಗಳೂರಿನ ಗೋವಿಂದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೊಲೆ ಮಾಡಲಾಗಿದೆ.
37 ವರ್ಷದ ರೌಡಿಶೀಟರ್ ಸೈಯದ್ ಕರೀಂ ಅಲಿ ಇನ್ನೊಬ್ಬ ರೌಡಿ ಅನೀಸ್ ಅಹ್ಮದ್‌ನ ಪತ್ನಿ ಜೊತೆ ಅಕ್ರಮ ಸಂಬಂಧ ಇರಿಸಿಕೊಂಡಿದ್ದ ಎಂದು ಹೇಳಲಾಗಿದೆ.
ಅನೀಸ್ ಅಹ್ಮದ್ ಜೈಲಿನಲ್ಲಿ ಇದ್ದು, ತನ್ನ ಪತ್ನಿ ಹಾಗೂ ಕರೀಂ ಸಂಬಂಧವನ್ನು ತಿಳಿದುಕೊಂಡಿದ್ದ ಎನ್ನಲಾಗಿದೆ. ಜೈಲಿನಲ್ಲೇ ಇದ್ದು ಈ ಕೊಲೆಗೆ ಸ್ಕೆಚ್ ಹಾಕಲಾಗಿದ್ದು, ಮಂಗಳವಾರ ಈತನನ್ನು ಮುಗಿಸಲಾಗಿದೆ.
ಹತ್ಯೆ ಹಿನ್ನೆಲೆಯಲ್ಲಿ ಅನೀಸ್‌ನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಲಾಗಿದೆ. ಈ ಘಟನೆಯನ್ನು ದೃಢಪಡಿಸಿರುವ ಗೋವಿಂದಪುರ ಪೊಲೀಸರು, ಅನೀಸ್‌ನನ್ನು ರಹಸ್ಯ ಸ್ಥಳದಲ್ಲಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.