Sanchari Vijay; 'ಹೆಲ್ಮೆಟ್ ಹಾಕಿದ್ದರೆ ಸಂಚಾರಿ ವಿಜಯ್ ಬದುಕಿರುತ್ತಿದ್ದರು', ಅಂಗಾಂಗ ದಾನಕ್ಕೆ ನಿರ್ಧಾರ
ಕಳೆದ ವರ್ಷ ಇದೇ ದಿನ ಸುಶಾಂತ್ ಸಿಂಗ್ ರಜಪೂತ್
ವರ್ಷದ ಬಳಿಕ ಇಂದು ಅದೇ ದಿನ ಸಂಚಾರಿ ವಿಜಯ್!
ಬೆಂಗಳೂರು: ಒಂದು ವೇಳೆ ಅಪಘಾತದ ಸಂದರ್ಭದಲ್ಲಿ ನಟ ಸಂಚಾರಿ ವಿಜಯ್ ಹೆಲ್ಮೆಟ್ ಹಾಕಿದ್ದಿದ್ದರೆ ನಟ ಸಂಚಾರಿ ವಿಜಯ್ ಪ್ರಾಣಕ್ಕೆ ಕುತ್ತು ಬರುತ್ತಿರಲಿಲ್ಲ ಎಂದು ಅವರಿಗೆ ಚಿಕಿತ್ಸೆ ನೀಡುತ್ತಿದ್ದ ಅಪೋಲೋ ಆಸ್ಪತ್ರೆಯ ವೈದ್ಯ ಡಾ. ಅರುಣ್ ನಾಯ್ಕ್ ಮಾಹಿತಿ ನೀಡಿದ್ದಾರೆ.
ಮಾಧ್ಯಮದ ಜೊತೆ ಮಾತನಾಡಿದ ಅವರು, ಶನಿವಾರ ನಡೆದ ಬೈಕ್ ಅಪಘಾತದಲ್ಲಿ ನಟ ಸಂಚಾರಿ ವಿಜಯ್ ಅವರಿಗೆ ತೀವ್ರವಾಗಿ ತಲೆಗೆ ಪೆಟ್ಟು ಬಿದ್ದು ಆಸ್ಪತ್ರೆಗೆ ಸೇರಿದ್ದರು. ಬೈಕ್ ಸವಾರಿ ಮಾಡುವಾಗ ಶಿರಸ್ತ್ರಾಣ ಹಾಕಿದ್ರೆ ಮೆದುಳು ವೈಫಲ್ಯ ಆಗುತ್ತಿರಲಿಲ್ಲ ಎಂದು ಹೇಳಿದರು.
ಅಪಘಾತದ ಸಂದರ್ಭದಲ್ಲಿ ಅತಿ ವೇಗದ ಚಾಲನೆ ಮತ್ತು ಹೆಲ್ಮೆಟ್ ಧರಿಸದೇ ವಾಹನ ಚಾಲನೆ ಮಾಡಿರುವುದು ಅವರ ಪ್ರಾಣಕ್ಕೆ ಕಂಟಕವಾಗಿದೆ. ಅಪಘಾತವಾದಾಗ ತಲೆಗೆ ತೀವ್ರವಾಗಿ ಪೆಟ್ಟು ಬಿದ್ದಿದೆ. ಘಟನೆ ನಡೆದ 20 ನಿಮಿಷಗಳಲ್ಲಿ ಆಸ್ಪತ್ರೆಗೆ ಸೇರಿಸಲಾಗಿತ್ತು ಎಂದು ತಿಳಿಸಿದರು.
ಆಸ್ಪತ್ರೆಗೆ ಸೇರಿಸೋ ಸಮಯಕ್ಕಾಗಾಲೇ ಸಂಚಾರಿ ವಿಜಯ್ ಅವರು ಅರೆಪ್ರಜ್ಞಾವಸ್ಥೆಗೆ ಹೋಗಿದ್ದಾರೆ. ಕೂಡಲೇ ಆಪರೇಷನ್ ಮಾಡಲಾಗಿದೆ. ಅದರೂ ಅವರ ಮೆದುಳು ಕೋಮಾ ಸ್ಥಿತಿಯಿಂದ ಸುಧಾರಣೆ ಕಾಣಲಿಲ್ಲ ಎಂದು ಹೇಳಿದರು.
ಕಳೆದ ವರ್ಷ ಇದೇ ದಿನ ಬಾಲಿವುಡ್‌ನ ಉದಯೋನ್ಮುಖ ನಟ ಸುಶಾಂತ್ ಸಿಂಗ್ ರಜಪೂತ್ ನಿಗೂಢವಾಗಿ ಆತ್ಮಹತ್ಯೆ ಮಾಡಿದ ರೀತಿಯಲ್ಲಿ ಮೃತಪಟ್ಟಿದ್ದರು. ಇಂದು ಇದೇ ದಿನ ಸಂಚಾರಿ ವಿಜಯ್ ದುರಂತ ಅಂತ್ಯ ಕಂಡಿದ್ದಾರೆ.
ಇದೇ ವೇಳೆ, ವಿಜಯ್ ಸಹೋದರ ಸಿದ್ದೇಶ್ ಮಾತನಾಡಿ, ಸಂಚಾರಿ ವಿಜಯ್ ಅವರ ಮೃತದೇಹದ ಅಂಗಾಂಗಳನ್ನು ದಾನ ಮಾಡುವುದಾಗಿ ಘೋಷಿಸಿದ್ದಾರೆ. ರಾಷ್ಟ್ರ ಪ್ರಶಸ್ತಿ ವಿಜೇತ, ನಟ ಮಾತ್ರವಲ್ಲದೇ ಸಂಚಾರಿ ವಿಜಯ್ ಅವರು ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದರು ಎಂದು ಹೇಳಿದರು.
ಎಲ್ಲರ ಜೊತೆಯಾಗಿ ಸ್ನೇಹಪರವಾಗಿ ಇರುತ್ತಿದ್ದರು. ಕೊರೊನಾ ಸಂಕಷ್ಟ ಕಾಲದಲ್ಲಿ ಹಾಗೆಯೇ ಕಳೆದ ವರ್ಷದ ನೆರೆ ಬಂದಾಗ ಸಾಕಷ್ಟು ಸೇವಾ ಕೆಲಸವನ್ನು ಮಾಡಿದ್ದಾರೆ. ಸಮಾಜಕ್ಕಾಗಿ ಕೆಲಸ ಮಾಡುತ್ತಿದ್ದ. ವಿಜಯ್ ಅಂಗಾಂಗಳನ್ನು ದಾನ ಮಾಡಬೇಕು ಎಂದು ನಾವು ನಿರ್ಧರಿಸಿದ್ದೇವೆ ಎಂದು ಸಿದ್ದೇಶ್ ಹೇಳಿದರು.
ಅದೇ ರೀತಿ, ಈ ಮಾತನ್ನು ನಾನು ಹೇಳಬಾರದು. ಅವರ ಆತ್ಮಕ್ಕೆ ಸುಖ ಶಾಂತಿ ಸಿಗಲಿ ಎಂದು ಈ ಕಾರ್ಯಕ್ಕೆ ಮುಂದಾಗಿದ್ದೇವೆ ಎಂದು ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದಾರೆ.