sexual harassment by actor Vishal- ನಟ ವಿಶಾಲ್‌ನಿಂದ ಲೈಂಗಿಕ ಕಿರುಕುಳ?: ಗಂಭೀರ ಆರೋಪ ಮಾಡಿದ ಸ್ಯಾಂಡಲ್‌ವುಡ್ ನಟಿ
ದಕ್ಷಿಣ ಭಾರತದ ಖ್ಯಾತ ನಟನ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದೆ. ಕಾಲಿವುಡ್‌ನ ಸ್ಟಾರ್ ನಟ ವಿಶಾಲ್ ವಿರುದ್ಧ ಸ್ಯಾಂಡಲ್‌ವುಡ್ ನಟಿ ಗಾಯತ್ರಿ ರಘುರಾಮ್ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಗಂಭೀರ ಆರೋಪ ಮಾಡಿದ್ದು, ಚಿತ್ರರಂಗದಲ್ಲಿ ಕೋಲಾಹಲಕ್ಕೆ ಕಾರಣವಾಗಿದೆ.
ತಮ್ಮ ವಿರುದ್ಧ ನಡೆಸಲಾದ ಲೈಂಗಿಕ ಕಿರುಕುಳದ ಬಗ್ಗೆ ಸರಣಿ ಟ್ವೀಟ್ ಮಾಡಿರುವ ನಟಿ ಗಾಯತ್ರಿ ರಘುರಾಮ, ನಟ ವಿಶಾಲ್ ವಿರುದ್ಧ ಆಕ್ರೋಶ ಹೊರಹಾಕಿದ್ಧಾರೆ.
"ವಿಶಾಲ್, ಒಮ್ಮೆ ಹೊರಗಡೆ ಬಂದು ನೋಡು. ನಿನ್ನ ಹೊರಗೆ ಏನಾಗ್ತಿದೆ ಎಂದು.. ಚಿತ್ರರಂಗಕ್ಕೆ ಪ್ರವೇಶ ಮಾಡುವ ನಟಿಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ನೋಡು.. ನೀನು ಮತ್ತು ನಿನ್ನ ಸ್ನೇಹಿತರು ಇದೇ ವಿಭಾಗಕ್ಕೆ ಸೇರಿದವರು. ಬಳಸಿ ಬಿಸಾಡೋದು ನಿನಗೆ ಈಗ ಅಭ್ಯಾಸವಾಗಿದೆ" ಎಂದು ಗಾಯತ್ರಿ ರಘುರಾಮ್ ಟ್ವೀಟ್ ಮಾಡಿದ್ಧಾರೆ.
ನಟ ವಿಶಾಲ್ ಕಳೆದ ಕೆಲವು ತಿಂಗಳಿನಿಂದ ವಿವಾದಕ್ಕೆ ಗುರಿಯಾಗುತ್ತಲೇ ಇದ್ದಾರೆ. ಈ ಘಟನೆಯ ಬಳಿಕ ತಮ್ಮ ಬಹುಕಾಲದ ಸ್ನೇಹಿತೆ ಅನಿಶಾ, ವಿಶಾಲ್ ಜೊತೆಗಿನ ಸಂಬಂಧವನ್ನು ಮುರಿದುಕೊಂಡಿದ್ಧಾರೆ. ಈಗಾಗಲೇ ಇವರ ನಡುವೆ ವಿವಾಹ ನಿಶ್ಚಿತಾರ್ಥವಾಗಿದ್ದು, ಈ ಸಂಬಂಧ ಈಗ ಮುರಿದುಬಿದ್ದಿದೆ.